ವಿಜಯನಗರ: ಕೊಟ್ಟೂರು ಪಟ್ಟಣದ ಶ್ರೀ ಗುರುಬಸವೇಶ್ವರ ಸ್ವಾಮಿಯ ರಥೋತ್ಸವವನ್ನು ಫೆಬ್ರವರಿ 25ರಂದು ಸಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನ, ಸರಳವಾಗಿ ಪೂಜೆ ಸಲ್ಲಿಸಿ ಆಚರಿಸಲು ತೀರ್ಮಾನಿಸಲಾಗಿದೆ.
ಗುರುವಾರದಂದು ಹಗರಿಬೊಮ್ಮನಹಳ್ಳಿ ಶಾಸಕರ ಭೀಮಾನಾಯ್ಕ ಹಾಗೂ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಅಧ್ಯಕ್ಷತೆಯಲ್ಲಿ ಕೊಟ್ಟೂರು ಗುರುಬಸವೇಶ್ವರ ಸ್ವಾಮಿಯ ರಥೋತ್ಸವದ ಪೂರ್ವಭಾವಿ ಸಭೆ ನಡೆಯಿತು.
500ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕೋಟೆ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ರಣಬೈರೆಗೌಡರಿಂದ ಟಿಪ್ಪು ಸುಲ್ತಾನ್ ವರೆಗೂ ಸಾಕಷ್ಟು ರಾಜ ಮಹಾರಾಜರು ಅಪಾರ ಪ್ರಮಾಣದ ಬೆಲೆಕಟ್ಟಲಾಗದ ಆಭರಣಗಳನ್ನ ನೀಡಿದ್ದಾರೆ. ಪ್ರತಿವರ್ಷ ಹುಣ್ಣಿಮೆಯ ನಂತರದ ದಿನ ಆಭರಣಗಳನ್ನ ಹಾಕಿ ಅದ್ದೂರಿ ಜಾತ್ರೆ ಮಾಡಲಾಗುತ್ತಿತ್ತು.
ವರ್ಷಕ್ಕೆ ಒಂದು ಬಗೆಯ ಆಭರಣ ಕಾಲ ಕ್ರಮೇಣ ಅಪರೂಪದ ವಜ್ರಾಭರಣಗಳನ್ನೆಲ್ಲ ಸರ್ಕಾರವು ರಕ್ಷಣೆಯ ಹಿತದೃಷ್ಟಿಯಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ವರ್ಷಕ್ಕೊಮ್ಮೆ ಮಾತ್ರ ನಡೆಯುವ ಜಾತ್ರೆಗೆ ಒಂದೊಂದು ಸೆಟ್ ಆಭರಣಗಳನ್ನು ಮೆರವಣಿಗೆಗೆ ನೀಡುತ್ತದೆ. ಗುರುವಾರ ನಡೆದ ಬ್ರಹ್ಮರಥೋತ್ಸವಕ್ಕೆ ಬೆಳಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 10ನೇ ಬಾಕ್ಸ್‌ನ 21 ಬಗೆಯ ಒಂದು ಸೆಟ್ ವಜ್ರಾಭರಣಗಳನ್ನು ದೇವಾಲಯಕ್ಕೆ ತಂದು ಜಾತ್ರೆ ನಡೆಸಲಾಯಿತು. ಅಪರೂಪದ ರತ್ನಖಚಿತ ಆಭರಣಗಳನ್ನು ಕಂಡ ಭಕ್ತರು ಸಂತಸಗೊಂಡರು.
ಮೇಲುಕೋಟೆ, ತಿರುಪತಿ, ತಿರುವನಂತಪುರಂ ನಂತರ ಅತಿ ಹೆಚ್ಚು ಪುರಾತನವಾದ ಬೆಲೆ ಕಟ್ಟಲಾಗದ ಸಂಪತ್ತಿರುವ 500 ವರ್ಷಗಳ ಇತಿಹಾಸದ ಕೋಟೆ ವೇಣುಗೋಪಾಲ ಸ್ವಾಮಿಗೆ 12 ಸೆಟ್ ವಜ್ರಾಭರಣಗಳಿವೆ. ಪ್ರತಿವರ್ಷ ಒಂದೊಂದು ಸೆಟ್ ಆಭರಣಗಳನ್ನು ಹಾಕಿ ಅದ್ದೂರಿಯಾಗಿ ವಜ್ರಾಭರಣದ ಜಾತ್ರೆ ಮಾಡುತ್ತಾರೆ. ಹೀಗಾಗಿ ಈ ಭಾರಿ ಹಾಕಿದ ಆಭರಣ ಮತ್ತೆ 12 ವರ್ಷದ ಬಳಿಕ ಹಾಕಲಾಗುತ್ತದೆ. ಸಂಪೂರ್ಣ ಸಂಪತ್ತಿನ ಶೇ 10 ರಷ್ಟು ಆಭರಣಗಳನ್ನ ಮಾತ್ರ ತಂದು ದೇವರಿಗೆ ಹಾಕಿ ಜಾತ್ರೆ ಮಾಡುವುದು ಇಲ್ಲಿನ ವಿಶೇಷ.
ವಜ್ರಾಭರಣಗಳ ಜೊತೆ ದೇವಾಲಯದ ಆವರಣದಲ್ಲಿ ವೇಣುಗೋಪಾಲಸ್ವಾಮಿ ಮೂರು ಸುತ್ತು ಹಾಕಲಿದೆ. ಮೊದಲ ಸುತ್ತಿಗೆ ಬೆಳ್ಳಿ ಕಿರೀಟ, 2ನೇ ಸುತ್ತಿಗೆ ಬಂಗಾರದ ಕಿರೀಟ ಮತ್ತು3ನೇ ಸುತ್ತಿಗೆ ರತ್ನ ಖಚಿತ ವಜ್ರದ ಕಿರೀಟವಿಟ್ಟು ಮೆರವಣಿಗೆ ಮಾಡಲಾಗುತ್ತದೆ. ನಂತರ ಬ್ರಹ್ಮರಥೋತ್ಸವದ ವೇಳೆ ಆಭರಣಗಳನ್ನು ವಾಪಸ್ ಸರ್ಕಾರದ ಖಜಾನೆಗೆ ಕಳಿಸುತ್ತಾರೆ. ಇನ್ನೂ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ರದ್ದಾಗಿದ್ದ ಜಾತ್ರೆ ಈ ಭಾರಿ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥಕ್ಕೆ ಬಾಳೆಹಣ್ಣು ಅರ್ಪಿಸಿ ಇಷ್ಟಾರ್ಥಸಿದ್ದಿಗೆ ಪ್ರಾರ್ಥಿಸಿದರು.