ಮನೆ ರಾಜ್ಯ ಜೈಲಿನಿಂದ್ಲೇ ವಿಡಿಯೋ ಕಾಲ್, ಅಪ್ರಾಪ್ತೆಗೆ ಟಾರ್ಚರ್ – ವಿಷಯ ಗೊತ್ತಿದ್ರೂ ಸುಮ್ನಿದ್ದಾರಾ ಜೈಲಾಧಿಕಾರಿಗಳು

ಜೈಲಿನಿಂದ್ಲೇ ವಿಡಿಯೋ ಕಾಲ್, ಅಪ್ರಾಪ್ತೆಗೆ ಟಾರ್ಚರ್ – ವಿಷಯ ಗೊತ್ತಿದ್ರೂ ಸುಮ್ನಿದ್ದಾರಾ ಜೈಲಾಧಿಕಾರಿಗಳು

0

ಧಾರವಾಡ : ಹುಡುಗಿ ವಿಚಾರವಾಗಿ ಜೈಲಿಗೆ ಹೋದ್ರೂ ಬುದ್ಧಿ ಕಲಿಯದ ಪಾಗಲ್ ಪ್ರೇಮಿಯೊಬ್ಬ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿ ಅಪ್ರಾಪ್ತೆಗೆ ಮಾನಸಿಕ ಹಿಂಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ. ಧಾರವಾಡ ಜೈಲಾಧಿಕಾರಿಗಳು ಮಾತ್ರ ವಿಷಯ ಗೊತ್ತಿದ್ದರೂ ಕೂಡ ಸುಮ್ನಿದ್ದಾರಾ ಎಂಬ ಅನುಮಾನ ಉಂಟಾಗಿದೆ.

ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಜೈಲಿನಿಂದಲೇ ಸಂತ್ರಸ್ತೆಗೆ ವಿಡಿಯೋ ಕಾಲ್ ಮಾಡಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ತನ್ನ ಪರವಾಗಿ ನ್ಯಾಯಾಲಯದಲ್ಲಿ ಮಾತನಾಡುವಂತೆ ತಾಕೀತು ಮಾಡಿದ್ದಾನೆ. ಒಂದು ವೇಳೆ ವಿಡಿಯೋ ಕಾಲ್ ಮಾಡಿದಾಗ ರಿಸೀವ್ ಮಾಡದೇ ಇದ್ದರೆ ಜೀವ ಬೆದರಿಕೆ ಹಾಕಿದ್ದಾನೆ. ಜೊತೆಗೆ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದರ ನಡುವೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕುತ್ತಿರುವ ವಿಷಯ ಗೊತ್ತಿದ್ದರೂ ಕೂಡ ಧಾರವಾಡ ಜೈಲಾಧಿಕಾರಿಗಳು ಸುಮ್ಮನೆ ಇದ್ದಾರಾ ಎಂಬ ಅನುಮಾನ ಮೂಡಿಬಂದಿದೆ. ಮಾ.13ರಂದು ಜೈಲಿನಿಂದ ಆರೋಪಿ ವಿಡಿಯೋ ಕಾಲ್ ಮಾಡಿದ್ದಾನೆ. ಈ ವಿಷಯವನ್ನು ಅಪ್ರಾಪ್ತೆಯ ಕುಟುಂಬಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ರೂ ಕೂಡ ಕ್ಯಾರೆ ಎನ್ನುತ್ತಿಲ್ಲ.

ಇದೀಗ ಶ್ರೀರಾಮಸೇನೆ ಮುಂದೆ ಅಳಲು ತೋಡಿಕೊಂಡಿದ್ದಾರೆ. ಮಾನ್ಯ ಗೃಹಮಂತ್ರಿಗಳೇ ಇದಕ್ಕೆ ಉತ್ತರ ನೀಡಿ, ಜೈಲಿನೊಳಗೆ ಸ್ಮಾರ್ಟ್ ಫೋನ್ ಹೇಗೆ ಹೋಯಿತು? ಅದೇನು ಜೈಲಾ ಅಥವಾ ಅಪರಾಧ ಮಾಡಲು ಇರುವ ಸುರಕ್ಷಿತ ತಾಣನಾ? ಎಂದು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ವಿರುದ್ಧ ಶ್ರೀರಾಮಸೇನೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.