ಮನೆ ಮನರಂಜನೆ ಒಟಿಟಿಗೆ ಕಾಲಿಡುತ್ತಿರುವ ವಿಜಯ್ ದೇವರಕೊಂಡ, ಸಮಂತಾ ನಟನೆಯ ಖುಷಿ’ ಸಿನಿಮಾ

ಒಟಿಟಿಗೆ ಕಾಲಿಡುತ್ತಿರುವ ವಿಜಯ್ ದೇವರಕೊಂಡ, ಸಮಂತಾ ನಟನೆಯ ಖುಷಿ’ ಸಿನಿಮಾ

0

ವಿಜಯ್ ದೇವರಕೊಂಡ ಹಾಗೂ ಸಮಂತಾ ರುತ್ ಪ್ರಭು ನಟನೆಯ ‘ಖುಷಿ’ ಸಿನಿಮಾ ಗೆಲುವಿನ ನಗೆ ಬೀರಿದೆ. ಈ ಸಿನಿಮಾ ಸೆಪ್ಟೆಂಬರ್ 1ರಂದು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಮೊದಲ ಐದು ದಿನಗಳಲ್ಲಿ ಸಿನಿಮಾ 70 ಕೋಟಿ ರೂಪಾಯಿ ಗಳಿಸಿದೆ.

ಸಿನಿಮಾ ಶೀಘ್ರವೇ ಒಟಿಟಿಗೆ ಕಾಲಿಡಲಿದೆ ಎನ್ನಲಾಗುತ್ತಿದೆ. ಈ ಕುರಿತು ತಂಡದ ಕಡೆಯಿಂದ ಅಧಿಕೃತ ಘೋಷಣೆ ಬಾಕಿ ಇದೆ.

‘ಖುಷಿ’ ಸಿನಿಮಾ ಪಕ್ಕಾ ಫ್ಯಾಮಿಲಿ ಕಥೆ. ಇಷ್ಟು ದಿನ ರಗಡ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ವಿಜಯ್ ದೇವರಕೊಂಡ ಅವರು ಫ್ಯಾಮಿಲಿ ಮ್ಯಾನ್ ಆಗಿ ಗಮನ ಸೆಳೆದರು.

ಈ ಸಿನಿಮಾ ಅನೇಕರಿಗೆ ಇಷ್ಟವಾಗಿದೆ. ‘ಖುಷಿ’ ರಿಲೀಸ್ ಆದ ಬೆನ್ನಲ್ಲೇ ‘ಜವಾನ್’ ತೆರೆಗೆ ಬಂದಿದ್ದರಿಂದ ಈ ಚಿತ್ರಕ್ಕೆ ಕೊಂಚ ಹಿನ್ನಡೆ ಆಯಿತು. ಹಲವು ಕಡೆಗಳಲ್ಲಿ ‘ಖುಷಿ’ ಬದಲು ‘ಜವಾನ್’ ಸಿನಿಮಾ ಪ್ರದರ್ಶನ ಮಾಡಲಾಗಿದೆ. ಹೀಗಾಗಿ ಸಿನಿಮಾ ಕಲೆಕ್ಷನ್ ಕಡಿಮೆ ಆಗಿದೆ. ಈ ಕಾರಣದಿಂದ ಸಿನಿಮಾ ಒಟಿಟಿಗೆ ತರಲು ಸಿದ್ಧತೆ ನಡೆದಿದೆ.

‘ಖುಷಿ’ ಸಿನಿಮಾದ ಒಟಿಟಿ ಹಕ್ಕು ನೆಟ್​​ಫ್ಲಿಕ್ಸ್ ಪಾಲಾಗಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 28 ಅಥವಾ ಅಕ್ಟೋಬರ್ 4ರಂದು ‘ಖುಷಿ’ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ ಎನ್ನಲಾಗುತ್ತಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಚಿತ್ರವನ್ನು ಒಟಿಟಿಯಲ್ಲಿ ನೋಡಲು ಕಾದು ಕುಳಿತವರಿಗೆ ಈ ಸುದ್ದಿ ಖುಷಿ ನೀಡಿದೆ.

 ‘ಖುಷಿ’ ಚಿತ್ರದ ಬಗ್ಗೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಶಿವ ನಿರ್ವಾಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಸಿನಿಮಾ ನಿರ್ಮಾಣ ಮಾಡಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನSJVN: 29 ಫೀಲ್ಡ್ ಇಂಜಿನಿಯರ್, ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ