ಮನೆ ಮನರಂಜನೆ ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಚಿತ್ರದ ಟೀಸರ್ ರಿಲೀಸ್

ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಚಿತ್ರದ ಟೀಸರ್ ರಿಲೀಸ್

0

ಮರಿ ಟೈಗರ್ ಎಂದೇ ಫೇಮಸ್ ಆಗಿರುವ ವಿನೋದ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟ. ‘ಲಂಕಾಸುರ’ ಸಿನಿಮಾ ಗುಂಗಿನಲ್ಲಿರುವ ಅವರು ‘ಫೈಟರ್’ ಆಗಿ ಬೆಳ್ಳಿ ತೆರೆಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಚಿತ್ರರಂಗದಲ್ಲಿ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿ ಸಿನಿ ಪ್ರೇಮಿಗಳ ಹೃದಯ ಕದ್ದಿರುವ ವಿನೋದ್ ಪ್ರಭಾಕರ್ ಸದ್ಯ ತಮ್ಮ ಹೊಸ ಚಿತ್ರ ‘ಫೈಟರ್’ ಜಪ ಮಾಡುತ್ತಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿರುವ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಫೈಟರ್ ಎಂದರೆ ಹೊಡೆದಾಡುವವನು ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಮ್ಮ ಫೈಟರ್ ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಪಾವನ ಹಾಗೂ ಲೇಖಾ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ. ಸುಮಾರು ವರ್ಷಗಳ ನಂತರ ನಟಿ ನಿರೋಷ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ” ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.ವಿನೋದ್ ಪ್ರಭಾಕರ್ ಜೊತೆ ನಾಯಕಿಯರಾದ ಲೇಖಾ ಚಂದ್ರ ಹಾಗೂ ಪಾವನ ಸ್ಕ್ರೀನ್ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಎರಡೂ ವಿಭಿನ್ನ ಹಾಡುಗಳಿದ್ದು, ಸಂಗೀತ ನಿರ್ದೇಶಕ ಗುರುಕಿರಣ್ ಮ್ಯೂಜಿಕ್ ಕಂಪೋಸ್ ಮಾಡಿದ್ದಾರೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ‘ಫೈಟರ್’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನೂತನ್ ಉಮೇಶ್ ನಿರ್ದೇಶನವಿದ್ದು, ಸೋಮಶೇಖರ್ ಕಟ್ಟಿಗೇನಹಳ್ಳಿ ಬಂಡವಾಳ ಹಾಕಿದ್ದಾರೆ. ಸದ್ಯ ಟೀಸರ್’ನಿಂದ ಸದ್ದು ಮಾಡುತ್ತಿರುವ ‘ಫೈಟರ್’ ಸಿನಿಮಾವನ್ನು ಅಕ್ಟೋಬರ್‌ನಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಹಿಂದಿನ ಲೇಖನವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ: ಗೃಹೋಪಯೋಗಿ ವಸ್ತುಗಳಿಗೆ ಹಾನಿ
ಮುಂದಿನ ಲೇಖನಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ: ಎರಡು ವಾಹನ ಭಸ್ಮ