ಮೈಸೂರು: ತಾಮರ ಹೆಲ್ತ್ ಕೇರ್ ಸಂಸ್ಥೆಯ ವಿರುದ್ಧ ಕರ್ನಾಟಕದ ಉಚ್ಛ ನ್ಯಾಯಾಲಯ ನೀಡಿರುವ ಆದೇಶವನ್ನು ಉಲ್ಲಂಘಿಸಿರುವ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಸಹ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳು ಉಚ್ಛ ನ್ಯಾಯಾಲಯ ಮುಖ್ಯ ನ್ಯಾಯಾಧೀಶರಿಗೆ ಪ್ರದೀಪ್ ಕುಮಾರ್ ರವರು ದೂರು ಸಲ್ಲಿಸಿದ್ದಾರೆ.
ತಾಮರ ಹೆಲ್ತ ಕೇರ್ ಹೆಸರಿನ ಸಂಸ್ಥೆಯವರು ಹೆಬ್ಬಾಳ ಕೈಗಾರಿಕಾ ಪ್ರದೇಶ ಹೆಬ್ಬಾಳ ಇಂಡಸ್ಟ್ರಿಯಲ್ ಎಸ್ಟೇಟ್ ಕೆಐಎಡಿಬಿ ವಸತಿ ಲೇಔಟ್ 2ನೇ ಮುಖ್ಯ ರಸ್ತೆ ಸಂಖ್ಯೆ 71 ರಲ್ಲಿ ಕಾನೂನು ಬಾಹಿರವಾಗಿ ಚಿಕಿತ್ಸಾ ಕೇಂದ್ರವನ್ನು ಮತ್ತು ಶುಲ್ಕ ಭರಿತ ವಯೋವೃದ್ಧರ ಆರೈಕೆ ಕೇಂದ್ರವನ್ನು ನಡೆಸುತ್ತಿರುವುದು ಕಂಡು ಬಂದ ಬಗ್ಗೆ ಪ್ರದೀಪ್ ಕುಮಾರ್ ರವರಿಂದ ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇತರ ಇಲಾಖೆಗಳಿಗೆ ಈಗಾಗಲೇ ದೂರು ಸಲ್ಲಿಸಲಾಗಿತ್ತು.
ದೂರಿಗೆ ಪೂರಕವಾಗಿ ಆರೋಗ್ಯ ಇಲಾಖೆಯಿಂದ ಅಧಿಕಾರಿಗಳು ಸದರಿ ಸ್ಥಳಕ್ಕೆ ಭೇಟಿ ನೀಡಿ ನಡೆದಿರುವ ಅಕ್ರಮದ ಬಗ್ಗೆ ವಿಚಾರಣೆ ಮಾಡಿ ಸದರಿ ಸಂಸ್ಥೆಯನ್ನು ಮುಚ್ಚಬೇಕೆಂದು ಆದೇಶ ಮಾಡಲಾಗಿತ್ತು.
ಸದರಿ ಆದೇಶವನ್ನು ತಾಮರ ಹೆಲ್ತ್ ಕೇರ್ ಸಂಸ್ಥೆಯವರು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ಸದರಿ ಆದೇಶಕ್ಕೆ ತಡೆಯನ್ನು ಪಡೆದಿರುತ್ತಾರೆ. ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಮೈಸೂರಿನ ಜಿಲ್ಲಾಧಿಕಾರಿಗಳು ವಿಚಾರಣೆಯನ್ನು ಮಾಡಿ ತಾಮರ ಹೆಲ್ತ್ಕೇರ್ ಸಂಸ್ಥೆಯವರಿಗೆ ಪರವಾನಿಗೆ ನೀಡಲು ಆಗುವುದಿಲ್ಲ ಎಂದು ಅವರ ಅರ್ಜಿಯನ್ನು ವಜಾಗೊಳಿಸಿರುತ್ತಾರೆ. ವಜಾಗೊಳಿಸಿದ ಆದೇಶದ ದಿನ ವಿಚಾರಣೆಯ ಪುಸ್ತಕದಲ್ಲಿ ನನ್ನ ಮತ್ತು ತಾಮರ ಹೆಲ್ತ್ಕೇರ್ ಸಂಸ್ಥೆಯ ಮಾಲೀಕರ ಸಹಿಯನ್ನು ಪಡೆದು ಅವರ ಗಮನಕ್ಕೆ ಸದರಿ ಆದೇಶವನ್ನು ತಿಳಿಸಿರುತ್ತಾರೆ. ಅಂದಿನ ವಿಚಾರಣೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಭಾಗಿಯಾಗಿದ್ದರು ಎಂದು ದೂರಿನಲ್ಲಿ ದೂರುದಾರರು ತಿಳಿಸಿರುತ್ತಾರೆ.

ತಾಮರ ಹೆಲ್ತ್ ಕೇರ್ ಸಂಸ್ಥೆಯವರು ಮೈಸೂರಿನ ಆರೋಗ್ಯ ಇಲಾಖೆಯವರನ್ನು ಎದುರುದಾರರನ್ನಾಗಿ ಮಾಡಿ ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ 2024ರ ಮೇ 15ರ ನೋಂದಣಿ ಮತ್ತು ಕುಂದುಕೊರತೆ ನಿವಾರಣ ಪ್ರಾಧಿಕಾರದ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾದುದ್ದು, ತಾಲ್ಲೂಕು ಆರೋಗ್ಯಾಧಿಕಾರಿಗಳ ಮತ್ತು ಕೆ.ಪಿ.ಎಂ.ಇ ಘಟಕದ ಕರ್ತವ್ಯವಾಗಿರುತ್ತದೆ. ಆದರೆ ಕೆಪಿಎಂಇಎ ಘಟಕದ ಅಧಿಕಾರಿಗಳು ಕರ್ತವ್ಯವನ್ನು ನಿಭಾಯಿಸದೇ ಜಿಲ್ಲಾಧಿಕಾರಿಗಳ ಆದೇಶವನ್ನು ನ್ಯಾಯಾಲಯಕ್ಕೆ 8 ತಿಂಗಳ ಕಾಲ ಸಲ್ಲಿಸದೇ ಇರುವುದು ಹಲವಾರು ಅನುಮಾನಗಳನ್ನು ಮೂಡಿಸುತ್ತದೆ.
ಉದ್ದೇಶಕಪೂರಕವಾಗಿ ತಾಮರ ಹೆಲ್ತ್ಕೇರ್ ಸಂಸ್ಥೆಯವರಿಗೆ ಅನೂಕೂಲ ಮಾಡಿಕೊಡುವ ದುರುದ್ದೇಶದಿಂದ ತುರ್ತಾಗಿ ತೆಗೆದುಕೊಳ್ಳಬೇಕಾದ ನಿರ್ಣಾಯವನ್ನು 8 ತಿಂಗಳಾದರೂ ಸಲ್ಲಿಸದೇ ಇರುವುದರಿಂದ, ಮೈಸೂರಿನ ಆರೋಗ್ಯ ಇಲಾಖೆಯವರ ವಿರುದ್ಧ ಭ್ರಷ್ಟಾಚಾರದ ಅನುಮಾನ ಮೂಡಿ, ನೋಂದಣಿ ಮತ್ತು ಕುಂದುಕೊರತೆ ನಿವಾರಣ ಪ್ರಾಧಿಕಾರದ ಆದೇಶದ ಪ್ರತಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ನ್ಯಾಯಾಲಯಕ್ಕೆ ದೂರುದಾರರಿಂದ ಸಲ್ಲಿಸಲಾಗಿದೆ.
ಪರಿಣಾಮ ನೋಂದಣಿ ಮತ್ತು ಕುಂದುಕೊರತೆ ನಿವಾರಣ ಪ್ರಾಧಿಕಾರದ ಆದೇಶಕ್ಕೆ ಪೂರಕವಾಗಿ ತೀರ್ಪನ್ನು ನೀಡಿ ತಾನು ತಡೆ ನೀಡಿದ ಆದೇಶವನ್ನು ರದ್ದುಗೊಳಿಸಿರುತ್ತದೆ. ಸದರಿ ಆದೇಶವನ್ನು ದೂರುದಾರರು ಮೈಸೂರಿನ ಆರೋಗ್ಯ ಇಲಾಖೆಗೆ ನೀಡಿ ಕ್ರಮ ಕೈಗೊಳ್ಳಲು ಹಲವಾರು ಬಾರಿ ಖುದ್ಧಾಗಿ ಮೈಸೂರಿನ ಆರೋಗ್ಯ ಇಲಾಖೆಯ ಕಛೇರಿಗೆ ಮತ್ತು ಕೆಪಿಎಂಇಎ ವಿಭಾಗಕ್ಕೆ ಮನವಿ ಸಲ್ಲಿಸಿದರೂ ಇದುವರೆವಿಗೂ ಕ್ರಮ ಕೈಗೊಳ್ಳದಿರುವುದು ಅನುಮಾನ ಮೂಡಿಸಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಕೆಪಿಎಂಇಎ ವಿಭಾಗದವರು ಅಕ್ರಮವಾಗಿ ನಡೆಯುತ್ತಿರುವ ತಾಮರ ಹೆಲ್ತ್ಕೇರ್ ಸಂಸ್ಥೆಯವರಿಗೆ ಕಾನೂನು ಬಾಹಿರವಾಗಿ ಅನುಕೂಲ ಮಾಡಿ ಕೊಡುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ನ್ಯಾಯಾಲಯ ನಿಂದನೆ ದೂರನ್ನು ದಾಖಲಿಸಲಾಗಿದೆ. ಸಾರ್ವಜನಿಕ ತೆರಿಗೆ ಹಣದಿಂದ ಸರ್ಕಾರದ ಸಕಲ ಸವಲತ್ತುಗಳನ್ನು ಪಡೆದುಕೊಂಡು ಕರ್ತವ್ಯ ಲೋಪವೆಸಗಿ, ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಡುತ್ತಿರುವ ಮೈಸೂರಿನ ಆರೋಗ್ಯ ಇಲಾಖೆ ಹಾಗೂ ಕೆಪಿಎಂಇಎ ವಿರುದ್ಧ ದೂರನ್ನು ದಾಖಲಿಸಲಾಗಿದೆ.
ದೂರನ್ನು ಪರಿಗಣಿಸಿ ತಾಮರ ಹೆಲ್ತ್ ಕೇರ್ ಸಂಸ್ಥೆಯನ್ನು ಮುಚ್ಚಿಸಿ, ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತಿರುವ ಸದರಿ ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದತ್ತು.
ನಾಳೆ ತಾಮರ ಹೆಲ್ತ್ ಕೇರ್ ಸಂಸ್ಥೆಗೆ ಬೀಗ ಮುದ್ರೆ: ಪೊಲೀಸರ ಸಹಕಾರಕ್ಕೆ ಮನವಿ

ಪ್ರದೀಪ್ ಕುಮಾರ್ ರವರ ದೂರಿನ ನಂತರ ತಾಮರ ಹೆಲ್ತ್ ಕೇರ್ ಸಂಸ್ಥೆಗೆ ಬೀಗ ಮುದ್ರೆಗೊಳಿಸಲು ತಾಲೂಕು ಆರೋಗ್ಯ ಅಧಿಕಾರಿಗಳು ತೆರಳಿದಾಗ ಸದರಿ ಸಂಸ್ಥೆಯವರು ಸಹಕಾರ ನೀಡಿರುವುದಿಲ್ಲ. ಸದರಿ ಸಂಸ್ಥೆಯ ಆರೆಕೈಯಲ್ಲಿ 33 ವಯೋವೃದ್ಧರು / ರೋಗಿಗಳು ದಾಖಲಾಗಿರುತ್ತಾರೆ. ಸದರಿ ವಯೋ ವೃದ್ಧರನ್ನು ಬೇರೆ ಕಡೆಗೆ ಸ್ಥಳಾಂತರಿಸಲು 02 ದಿನಗಳ ಕಾಲಾವಕಾಶ ನೀಡಲಾಗಿರುತ್ತದೆ.
ಮೈಸೂರು ಆರೋಗ್ಯಾಧಿಕಾರಿಗಳ ಮತ್ತು ನ್ಯಾಯಾಲಯದ ಆದೇಶವನ್ನು ಕೊಟ್ಟ ಗಡುವಿನಲ್ಲಿ ತಾಮರ ಹೆಲ್ತ್ ಕೇರ್ ಸಂಸ್ಥೆಯವರು ಪಾಲಿಸದಿರುವುದರಿಂದ ಫೆ. 11ರಂದು ಬೆಳಗ್ಗೆ 11 ಗಂಟೆಗೆ ಪೊಲೀಸ್ ಸಹಕಾರದೊಂದಿಗೆ ಸದರಿ ಸಂಸ್ಥೆಯನ್ನು ಬೀಗ ಮುದ್ರೆಗೊಳಿಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಆದೇಶ ಮಾಡಲಾಗಿದೆ. ಸದರಿ ಆದೇಶದ ಪ್ರತಿಯನ್ನು ಹೆಬ್ಬಾಳ ಪೊಲೀಸ್ ಠಾಣೆಗೆ ನೀಡಿರುವ ತಾಲೂಕು ಆರೋಗ್ಯ ಅಧಿಕಾರಿಗಳು ನಾಳೆಯ ಬೀಗ ಮುದ್ರೆ ಕಾರ್ಯಕ್ಕೆ ಅನುವು ಮಾಡಲು ಕೇಳಿಕೊಂಡಿದ್ದಾರೆ.
ಕೊನೆಗೂ ಅಕ್ರಮವಾಗಿ ನಡೆಯುತ್ತಿದ ತಾಮರ ಹೆಲ್ತ್ ಕೇರ್ ಸಂಸ್ಥೆಗೆ ಬೀಗ ಬೀಳಲಿದೆ.