ಗುರುಗಳು: ಇತ್ತ ಕೆರೆ, ಅತ್ತ ಬಾವಿ, ಅದರ ಅರ್ಥವೇನು?
ಶಿಷ್ಯ : ಸರಿಯಾದ ಜಾಗದಲ್ಲಿ ರಸ್ತೆ ಮಾಡಿಲ್ಲ ಎಂದು ಅರ್ಥ.
ಹೆಂಡತಿ: ನಿಮಗೋಸ್ಕರ ಕಷ್ಟಪಟ್ಟು ಮೈಸೂರುಪಾಕ್ ಮಾಡಿದೆ.
ಗಂಡ: ನಾನೂ ಅದನ್ನು ಅಷ್ಟೆ ಕಷ್ಟಪಟ್ಟು ತಿಂದೆ.
ಗುರುಗಳು: “ಲಕ್ಷ್ಮಣ ಐಸ್‌ಕ್ರೀಂ ತಿನ್ನಲಿಲ್ಲ.” ಈ ವಾಕ್ಯದಲ್ಲಿ ‘ಲಕ್ಷ್ಮಣ’ ಏನು ಹೇಳು, ಇಮ್ರಾನ್.
ಇಮ್ರಾನ್: ಐಸ್‌ಕ್ರೀಂ ತಿನ್ನದ ಲಕ್ಷ್ಮಣ ಮೂರ್ಖ ಸರ್.