ಮನೆ ಕಾನೂನು ಮಾದರಿ ನೀತಿ ಸಂಹಿತೆ ಉಲ್ಲಂಘನೆ: 189 ಪ್ರಕರಣ ದಾಖಲು- ಚುನಾವಣಾ ಆಯೋಗ  

ಮಾದರಿ ನೀತಿ ಸಂಹಿತೆ ಉಲ್ಲಂಘನೆ: 189 ಪ್ರಕರಣ ದಾಖಲು- ಚುನಾವಣಾ ಆಯೋಗ  

0

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ  ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಬುಧವಾರದವರೆಗೂ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ 189 ಪ್ರಕರಣ ದಾಖಲಾಗಿವೆ ಎಂದು ಚುನಾವಣಾ ಆಯೋಗ  ತಿಳಿಸಿದೆ.

Join Our Whatsapp Group

ಇವುಗಳಲ್ಲಿ ದ್ವೇಷಪೂರಿತ ಭಾಷಣ 23, ಮತದಾರರನ್ನು ಪ್ರಚೋದಿಸಲು ಯತ್ನಿಸಿದ ಆರೋಪದಡಿ 28, ಧಾರ್ಮಿಕ ಸ್ಥಳಗಳ ದುರ್ಬಳಕೆ ಅಡಿಯಲ್ಲಿ 25 ಮತ್ತು ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಿಕೊಂಡ ಆರೋಪದಡಿ 15 ಪ್ರಕರಣಗಳು ದಾಖಲಾಗಿವೆ. ಪ್ರಮುಖ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ವಿರುದ್ಧವೂ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದೆ.

ಮೂರು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಚುನಾವಣಾ ಆಯೋಗ 46.11 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಿದೆ. ಜಿಲ್ಲಾ ಚುನಾವಣಾ ಕಚೇರಿಯ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 25 ರವರೆಗೆ ಒಟ್ಟು 6,552 ಎಫ್‌ಐಆರ್‌ ಗಳು ದಾಖಲಾಗಿವೆ.

ಲೆಕ್ಕಕ್ಕೆ ಸಿಗದ 11.83 ಕೋಟಿ ನಗದು ಹಾಗೂ 19.2 ಕೋಟಿ ಮೌಲ್ಯದ ಮದ್ಯವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯು ಚುನಾವಣಾಧಿಕಾರಿಗಳೊಂದಿಗೆ ಸೇರಿ 4,67,629.634 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. 7.17 ಕೋಟಿ ಮೌಲ್ಯದ ಒಟ್ಟು 227.47 ಕೆಜಿ ಮಾದಕ ವಸ್ತುಗಳು ಮತ್ತು 53.71 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಸೇರಿದಂತೆ 49.58 ಕೆಜಿ ಬೆಲೆಬಾಳುವ ಲೋಹಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

1.23 ಕೋಟಿ ಮೌಲ್ಯದ ವಸ್ತುಗಳನ್ನು ಹಾಗೂ 6.14 ಕೋಟಿ ಮೌಲ್ಯದ ಹಲವು ವಾಹನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಲಾದ ವಾಹನಗಳನ್ನು ನಗದು, ಚಿನ್ನ, ಮದ್ಯ, ಬಿಟ್ಟಿ ವಸ್ತುಗಳನ್ನು ಸಾಗಿಸಲು ವಾಹನಗಳನ್ನು ಬಳಸಲಾಗುತ್ತಿತ್ತು. ಪೊಲೀಸರು 129 ಎಫ್‌ಐಆರ್‌ಗಳನ್ನು ದಾಖಲಿಸಿದ್ದರೆ, ಅಬಕಾರಿ ಇಲಾಖೆ 6,423 ಪ್ರಕರಣಗಳನ್ನು ದಾಖಲಿಸಿದೆ.