ಮನೆ ಕಾನೂನು ಸಂಚಾರ ನಿಯಮ ಉಲ್ಲಂಘನೆ: ಮೈಸೂರಿನಲ್ಲಿ 12.30 ಕೋಟಿ ದಂಡ ಪಾವತಿ

ಸಂಚಾರ ನಿಯಮ ಉಲ್ಲಂಘನೆ: ಮೈಸೂರಿನಲ್ಲಿ 12.30 ಕೋಟಿ ದಂಡ ಪಾವತಿ

0

ಮೈಸೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಶೇ.50ರಷ್ಟು ರಿಯಾಯಿತಿ ನೀಡಿದ 9 ದಿನಗಳಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 12.30 ಕೋಟಿ ದಂಡದ ಮೊತ್ತವನ್ನು ಸಾರ್ವಜನಿಕರು ಪಾವತಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.

ರಾಜ್ಯ ಸರ್ಕಾರದ ಆದೇಶದ ಅನ್ವಯ ಸಂಚಾರ ಇ-ಚಲನ್‌’ಗಳ ದಂಡದ ಮೊತ್ತವನ್ನು ರಿಯಾಯಿತಿಯಲ್ಲಿ ಪಾವತಿಸಿಕೊಳ್ಳುವ ಕಾರ್ಯಕ್ಕೆ ಫೆ.3ರಿಂದ ಫೆ.11ರವರೆಗೆ ಅವಕಾಶ ನೀಡಲಾಗಿತ್ತು. ಸಂಚಾರ ಇ-ಚಲನ್‌’ನ ಒಟ್ಟು 4,98,265 ಪ್ರಕರಣಗಳನ್ನು ಸಾರ್ವಜನಿಕರು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಸಂಚಾರ ಪೊಲೀಸ್ ಠಾಣೆಗೆ ಬಂದು ಅಥವಾ ಆನ್‌’ಲೈನ್‌’ನಲ್ಲಿ ದಂಡ ಪಾವತಿಸಿದ್ದಾರೆ. ದೇವರಾಜ, ಕೃಷ್ಣರಾಜ, ವಿವಿ ಪುರಂ, ಸಿದ್ದಾರ್ಥ ನಗರ, ನರಸಿಂಹರಾಜ ಸಂಚಾರ ಠಾಣೆ, ನಗರ ಸಂಚಾರ ಎಸಿಪಿ ಕಚೇರಿ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಆಟೊಮೇಷನ್‌ ಕೇಂದ್ರಗಳಲ್ಲಿ ಮುಂಜಾನೆಯಿಂದ ರಾತ್ರಿ 11ರವರೆಗೆ ಅವಕಾಶ ನೀಡಲಾಗಿತ್ತು.

ಕೊನೆಯ ದಿನವಾದ ಫೆ.11ರಂದಿ ಅತಿ ಹೆಚ್ಚಿನ ದಂಡದ ಮೊತ್ತ ಪಾವತಿಯಾಗಿದೆ.