ಮೈಸೂರು(Mysuru): ವಿಶ್ವಕರ್ಮ ಸಮುದಾಯಕ್ಕೆ ಶಿಕ್ಷಣ ಹಾಗೂ ಹೊಸ ತಂತ್ರಜ್ಞಾನದ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಎಂದು ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಅಭಿಪ್ರಾಯಪಟ್ಟರು.
ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ದೇವರಾಜ ಮೊಹಲ್ಲಾ ನಾಗರಿಕ ವೇದಿಕೆ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಅಂಗವಾಗಿ 35ವರ್ಷಗಳಿಂದ ಶಿಲ್ಪ ಕಲೆಗಳನ್ನು ಉಳಿಸಿ ಬೆಳೆಸುತ್ತಿರುವ ವಿವಿಧ ಕ್ಷೇತ್ರದ ಹಿರಿಯ ಶಿಲ್ಪಿಗಳದ ಎಂ ಎಸ್ ಸೋಮಾಚಾರ್, ಕೇಶವಮೂರ್ತಿ ಎಸ್. ಎನ್ , ಮಂಜಾಚಾರ್ ,ಸಿದ್ದಪ್ಪ, ರವಿಶಂಕರ್ ,ಅನಿಲ್ ಕುಮಾರ್, ನಾಗೇಂದ್ರ ,ಸತೀಶ್ ಮೂರ್ತಿ, ವಸಂತ್ ಕುಮಾರ್, ಆನಂದ್, ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಸರ್ಕಾರ ಶಿಲ್ಪಿಗಳನ್ನು ಗುರುತಿಸಿ ಅವರಿಗೆ ವಿಶೇಷ ಅನುದಾನ ನೀಡಲು ಮುಂದಾಗಬೇಕು ಹಾಗೂ ಸಮಾಜದ ಸ್ಥಾನಮಾನಗಳನ್ನು ನೀಡುವ ಮೂಲಕ ಗೌರವಿಸಬೇಕು ಅವರನ್ನು ಸಮಾಜದ ಮುಂಚೂಣಿಗೆ ತರುವುದರಲ್ಲಿ ಸರ್ಕಾರ ಮುಂದಾಗಬೇಕು. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಶಿಲ್ಪಿಗಳು ಇದ್ದು ಅವರು ಮಾಡಿರುವಂತಹ ರಾಜ್ಯದ ಹಂಪೆ ,ಬೇಲೂರು, ಹಳೇಬೀಡು ,ಶ್ರವಣಬೆಳಗೊಳ ,ಇಂತಹ ಅಪರೂಪದ ಕೆತ್ತನೆಗಳನ್ನು ಮಾಡಿರುವಂತಹ ನಿದರ್ಶನವಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಆದಿಗುರು ಶಂಕರಾಚಾರ್ಯರು ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅದ್ಭುತ ಕೆತ್ತನೆಯನ್ನು ಮಾಡಿರುವ ನಮ್ಮ ಮೈಸೂರಿನವರೇ ಆದ ಅರುಣ್ ಯೋಗಿ ರವರು ಹೆಮ್ಮೆಯ ವಿಚಾರ ,ನಮ್ಮ ಸಂಸ್ಥಾನದ ಅಂದಿನ ಮಹಾರಾಜರ ಆಸ್ಥಾನದಲ್ಲಿ ಶಿಲ್ಪಿಗಳನ್ನು ಗುರುತಿಸಿ ವಿಶೇಷ ಸ್ಥಾನಮಾನಗಳನ್ನು ನೀಡಿದ್ದರು ಎಂದರು.
ಈಗಿನ ಸರ್ಕಾರ ಸಹ ಕೂಡ ಇಂತಹ ಶಿಲ್ಪಿಗಳನ್ನು ಗುರುತಿಸಿ ವಿಶೇಷ ಸ್ಥಾನಮಾನಗಳನ್ನು ನೀಡಿ ಹಾಗೂ ಅನುದಾನಗಳನ್ನು ನೀಡಿ ಸಮಾಜದ ಮುಂಚೂಣಿಯಲ್ಲಿ ತರಬೇಕೆಂದು ಮನವಿ ಮಾಡಿದರು.