ಮನೆ ರಾಷ್ಟ್ರೀಯ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ: ಎರಡನೇ ದಿನವೂ ಮುಂದುವರೆದ ಶೋಧ ಕಾರ್ಯ

ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ: ಎರಡನೇ ದಿನವೂ ಮುಂದುವರೆದ ಶೋಧ ಕಾರ್ಯ

0

ನವದೆಹಲಿ: ಬಿಬಿಸಿ ಇಂಡಿಯಾದ ಮೇಲೆ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ಎರಡನೇ ದಿನವೂ ಮುಂದುವರೆದಿದೆ.

ಎಲೆಕ್ಟ್ರಾನಿಕ್, ಕಾಗದ ಆಧಾರದ ಆರ್ಥಿಕ ಡೇಟಾಗಳ ಪ್ರತಿಗಳನ್ನು ಇಲಾಖೆಯ ಅಧಿಕಾರಿಗಳು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ತೆರಿಗೆ ಇಲಾಖೆ ಮಂಗಳವಾರದಂದು ಬಿಬಿಸಿಯ ದೆಹಲಿ ಹಾಗೂ ಮುಂಬೈ ಕಚೇರಿಗಳಲ್ಲಿ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿತ್ತು. ಮಂಗಳವಾರ ಬೆಳಿಗ್ಗೆ 11:30 ರ ವೇಳೆಗೆ ಬಿಬಿಸಿ ಕಚೇರಿಗೆ ತೆರಳಿದ ಅಧಿಕಾರಿಗಳು ಇನ್ನೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ತೆರಿಗೆ ಅಧಿಕಾರಿಗಳು ಬಿಬಿಸಿಯ ಆರ್ಥಿಕ ಹಾಗೂ ಇನ್ನಿತರ ವಿಭಾಗದ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿದ್ದು, ಬೇರೆ ಸಿಬ್ಬಂದಿಗಳು ಹಾಗೂ ಪತ್ರಕರ್ತರಿಗೆ ಕಚೇರಿಯಿಂದ ವಾಪಸ್ ತೆರಳುವುದಕ್ಕೆ ಅನುಮತಿ ನೀಡಿದರು.

ಕಾರ್ಯಾಚರಣೆಯ ಭಾಗವಾಗಿ ಕೆಲವು ಕಂಪ್ಯೂಟರ್ ಪೆರಿಫೆರಲ್ಸ್ ಮತ್ತು ಮೊಬೈಲ್ ಫೋನ್’ಗಳನ್ನು ಕ್ಲೋನ್ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಲೇಖನಮಾರ್ಚ್ 1 ರಿಂದ ಬಿಜೆಪಿ ರಥಯಾತ್ರೆ ಆರಂಭ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಯಾದಗಿರಿ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು- 30 ಜನರಿಗೆ ವಾಂತಿ, ಬೇಧಿ