ಮನೆ ಸ್ಥಳೀಯ ವಿಶ್ವಕರ್ಮರು ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಸಮಾಜಕ್ಕೆ ನೀಡಿದ್ದಾರೆ: ಕೆ.ಹರೀಶ್ ಗೌಡ

ವಿಶ್ವಕರ್ಮರು ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಸಮಾಜಕ್ಕೆ ನೀಡಿದ್ದಾರೆ: ಕೆ.ಹರೀಶ್ ಗೌಡ

0

 ಮೈಸೂರು: ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಸಮಾಜಕ್ಕೆ ನೀಡಿದಂತಹ ಮಹಾ ಪುರುಷರು ವಿಶ್ವಕರ್ಮರು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ಹೇಳಿದರು.

Join Our Whatsapp Group

 ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿರು ರಂಗಮoದಿರದಲ್ಲಿ ನಡೆದ, ಶ್ರೀ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನು ಇಂದು ಯಾವುದೇ ಕೆಲಸ ಕಾರ್ಯವನ್ನು ನಿರ್ವಹಿಸಿ ಬದುಕುತ್ತಿರುವುದು ವಿಶ್ವಕರ್ಮರು ಮಾಡಿಕೊಟ್ಟಂತಹ ಆಯೋಗದಿಂದಲೇ. ಇಂದಿನ ಯುಗದಲ್ಲಿ ಯಾವುದೆ ಮದುವೆ, ನೆಗಿಲು ಹಿಡಿದು ಹೊಲ ಉಳುಮೆ ಮಾಡಬೇಕಾದರೂ, ಗುಡಿಯಲ್ಲಿ ದೇವರನ್ನಿಟ್ಟು ಪೂಜಿಸಬೇಕಾದರೂ, ಮೂರ್ತಿಯನ್ನು ಕೆತ್ತಲು ವಿಶ್ವಕರ್ಮರ ಅವಶ್ಯಕತೆಯಿದೆ ಎಂದರು.

 ಭಾರತ ದೇಶದ ಪ್ರಜೆಗಳಲ್ಲಿ ಇರುವಂತಹ ಸಂಸ್ಕಾರಕ್ಕೆ ಮುಖ್ಯ ಕಾರಣಕರ್ತರು ವಿಶ್ವಕರ್ಮರಾಗಿದ್ದು, ಕೇವಲ ವಿಶ್ವಕರ್ಮ ಜನಾಂಗ ಮಾತ್ರವಲ್ಲದೆ ಸರ್ವ ಜನಾಂಗಕ್ಕೂ ಉಪಯೋಗವಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಚಾಮರಾಜ ನಗರ ಕ್ಷೇತ್ರದಲ್ಲಿ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಿ ಅನಾವರಣ ಗೊಳಿಸಲಾಗಿದೆ ಎಂದು ತಿಳಿಸಿದರು.

 ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ ಅವರು ಮಾತನಾಡಿ, ಇಡೀ ಜಗತ್ತಿನಲ್ಲಿ ಕಾಯಕ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜದಲ್ಲಿನ ಶ್ರಮ ಜೀವಿಗಳಿಗೋಸ್ಕರ ಸರ್ಕಾರವು ಜಾರಿಗೆ ತಂದoತಹ ಯೋಜನೆಯೇ ವಿಶ್ವಕರ್ಮ ಯೋಜನೆ. ಜಗತ್ತಿನಲ್ಲಿ ಯಾವುದನ್ನು ಕಾಯಕ ಸಮಾಜ ಎಂದು ಹೇಳುತ್ತೇವೆಯೋ ಆ ಕಾಯಕ ಸಮಾಜವನ್ನು ಮೆಟ್ಟಿ ನಿಲ್ಲುವಂತಹ ಶ್ರಮಜೀವಿಗಳು ವಿಶ್ವಕರ್ಮರು ಎಂದು ಹೇಳಿದರು.

 ಮೈಸೂರಿನ ಬರಹಗಾರ ಚಿಂತಕರು ಹಾಗೂ ಶಿಕ್ಷಣ ತಜ್ಞರಾದ ರಘು ಕೌಟಿಲ್ಯ ಅವರು ಮಾತನಾಡಿ, ವಿಶ್ವಕರ್ಮ ಜಯಂತಿ ಎಂದರೆ ಒಗ್ಗಟ್ಟಿನ ದಿನ, ಪಂಚ ಋಷಿಗಳ ಒಗ್ಗಟ್ಟನ್ನು ಸಾರಿದ ದಿನ, ಒಟ್ಟಿಗೆ ವಿಶ್ವಕರ್ಮದ ಪಂಚ ಗುಂಪುಗಳು ಸೇರಿದ ದಿನವನ್ನು ವಿಶ್ವಕರ್ಮ ಜಯಂತಿ ದಿನ ಎಂದು ಆಚರಿಸುತ್ತೇವೆ ಎಂದು ಹೇಳಿದರು.

 ವಿಶ್ವಕರ್ಮ ಸಮುದಾಯದವರು ವಿದ್ವತ್ತು ವಾಸ್ತುಶಿಲ್ಪಕಲೆ ವೈಶಿಷ್ಯವನ್ನು ಸೃಷ್ಟಿ ಮಾಡುವುದರ ಮೂಲಕ ರಾಮಾಯಣ, ಮಹಾಭಾರತ, ದ್ವಾರಕಾ, ಲಂಕಾ ಎಲ್ಲವನ್ನು ಸೃಷ್ಟಿ ಮಾಡಿದಂತಹ ಸೃಷ್ಟಿಕರ್ತರಾಗಿದ್ದಾರೆ. ಇಡೀ ಕಾಯಕ ಸಮುದಾಯಗಳಲ್ಲಿ ಅತ್ಯಂತ ಪಾವಿತ್ರ್ಯದಂತಹ ಸಂಸ್ಕೃತಿಯನ್ನು ನೋಡುವಂತಹ ಕೇಳುವಂತಹ ಅನುಭವಿಸುವಂತಹ ಸಮಾಜ ವಿಶ್ವ ಕರ್ಮ ಸಮುದಾಯ. ಸುಂದರವಾದoತಹ ಬದ್ಧತೆಗೂ ಪರಿಪೂರ್ಣವಾದಂತಹ ಸಮಾಜವನ್ನು ನಿರ್ಮಾಣ ಮಾಡಿದಂತಹ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದು ಹೇಳಿದರು.

 ಜೊತೆಗೆ ವಿಶ್ವಕರ್ಮ ಜಯಂತಿ ಅಂಗವಾಗಿ ಬಸವಣ್ಣ, ಅಮರಶಿಲ್ಪಿ ಜಕಣಚಾರಿ ಹಾಗೂ ಮೈಸೂರಿನ ಭಾಗದವರಾದ ಅಪ್ಪಣ್ಣ, ಕುಂಬಾರ, ಗುಂಡಯ್ಯ ಮಹಾಶರಣಯ್ಯ, ಮಡಿವಾಳ ಮಾಚಯ್ಯ, ಇಂತಹ ಸಮುದಾಯಗಳು ಸೇರಿ ಸೃಷ್ಟಿಸುವಂತಹದೇ ವಿಶ್ವಕರ್ಮ ಸಮಾಜ. ಬಸವಣ್ಣನ ಕಾಲದಲ್ಲಿ ರೈತರಿಗೆ ಕೃಷಿ ಉಪಕರಣಗಳನ್ನು ಮಾಡಿಕೊಡಲು ಅಕ್ಕಸಾಲಿಗರ ಚೆನ್ನಯ್ಯ ಎಂಬ ವಿಶ್ವಕರ್ಮರಿಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದು ನೆನೆದರು.

 ಈ ಸಂದರ್ಭದಲ್ಲಿ ತುಮಕೂರಿನ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸ್ವಾಮಿಗಳಾದ ಡಾ. ಶ್ರೀ ನೀಲಕಂಠಚಾರ್ಯ ಸ್ವಾಮೀಜಿಯವರು ಆಶೀರ್ವಚನವನ್ನು ಬೋಧಿಸಿದರು.

 ಕಾರ್ಯಕ್ರಮದಲ್ಲಿ ಅಯೋಧ್ಯ ಶ್ರೀ.ರಾಮಲಾಲ ಮೂರ್ತಿ ಕೆತ್ತನೆಯ ಶಿಲ್ಪಿಯಾದ ಡಾ.ಅರುಣ್ ಯೋಗಿರಾಜ್, ಚಿಂತಕರು ಹಾಗೂ ಸಾಹಿತಿಗಳಾದ ಪ್ರೊ.ಸಿ.ನಾಗಣ್ಣ, ಅಂತರಾಷ್ಟ್ರೀಯ ಕ್ರೀಡಾಪಟು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಎಸ್ ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್ ಹಾಗೂ ಸಮುದಾಯದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.