ಮನೆ ರಾಜ್ಯ ಮೇ 5 ರವರೆಗೆ ʻವಿಶ್ವಮಾನವ ಎಕ್ಸ್‌ಪ್ರೆಸ್‌’ ಸಂಚಾರ ರದ್ದು

ಮೇ 5 ರವರೆಗೆ ʻವಿಶ್ವಮಾನವ ಎಕ್ಸ್‌ಪ್ರೆಸ್‌’ ಸಂಚಾರ ರದ್ದು

0

ಬೆಂಗಳೂರು(Bengaluru)-‘ವಿಶ್ವಮಾನವ ಎಕ್ಸ್‌ಪ್ರೆಸ್‌’ ರೈಲು (Vishwamanava Express Train) ಸಂಚಾರವನ್ನು ನೈರುತ್ಯ ರೈಲ್ವೆ ಮೇ 5ರ ತನಕ ರದ್ದುಪಡಿಸಿದೆ. ಇದರಿಂದ ಮೈಸೂರು–ಬೆಂಗಳೂರು–ಹುಬ್ಬಳ್ಳಿ ನಡುವಿನ ರೈಲು ಪ್ರಯಾಣಿಕರಿಗೆ ತೊಂದರೆ ಉಂಟಾಗಲಿದೆ.

ಬೆಳಗಾವಿ ರೈಲು ನಿಲ್ದಾಣದಲ್ಲಿ ಸಿಗ್ನಲ್‌ ಕಾಮಗಾರಿ ನಿರ್ವಹಿಸುವ ಸಲುವಾಗಿ ‘ವಿಶ್ವಮಾನವ ಎಕ್ಸ್‌ಪ್ರೆಸ್‌’ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಬೆಳಗಾವಿಯಲ್ಲಿ ಕಾಮಗಾರಿ ನಿರ್ವಹಿಸಲು ಇಡೀ 749 ಕಿಲೋ ಮೀಟರ್ ಸಂಚಾರವನ್ನೇ ರದ್ದುಪಡಿಸಿರುವುದು ಎಷ್ಟು ಸರಿ’ ಎಂದು ಪ್ರಯಾಣಿಕರ ಪ್ರಶ್ನಿಸಿದ್ದಾರೆ.

ಬೆಳಿಗ್ಗೆ 5.50ಕ್ಕೆ ಮೈಸೂರಿನಿಂದ ಹೊರಡುತ್ತಿದ್ದ ರೈಲು, 8.40 ಬೆಂಗಳೂರಿಗೆ ಬಂದು ರಾತ್ರಿ 9.45ರ ಸುಮಾರಿಗೆ ಬೆಳಗಾವಿ ತಲುಪುತ್ತಿತ್ತು. ಮರುದಿನ ಬೆಳಿಗ್ಗೆ 5.30ಕ್ಕೆ ಬೆಳಗಾವಿಯಿಂದ ಹೊರಟು ಸಂಜೆ 5.40ಕ್ಕೆ ಬೆಂಗಳೂರಿಗೆ ಬರುತ್ತಿತ್ತು. ರಾತ್ರಿ 8.40ರ ಸುಮಾರಿಗೆ ಮೈಸೂರು ತಲುಪುತ್ತಿತ್ತು.

‘ಮೈಸೂರಿನಿಂದ ಬೆಂಗಳೂರಿಗೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ, ಬೆಂಗಳೂರಿನಿಂದ ಅರಸೀಕೆರೆ ಮತ್ತು ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಇತ್ತು. ಚಾಮುಂಡಿ ಎಕ್ಸ್‌ಪ್ರೆಸ್‌ ಮೇಲಿನ ಪ್ರಯಾಣಿಕರ ಒತ್ತಡವನ್ನೂ ಇದು ಕಡಿಮೆ ಮಾಡುತ್ತಿತ್ತು.

ಬೆಳಗಾವಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ವಿಶ್ವಮಾನವ ಎಕ್ಸ್‌ಪ್ರೆಸ್‌ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಹುಬ್ಬಳ್ಳಿ ಅಥವಾ ಅರಸೀಕೆರೆ ತನಕ ಸಂಚಾರ ಮುಂದುವರಿಸುವ ಸಾಧ್ಯತೆ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಲಾಯಿತು. ಕೋಚ್ ನಿರ್ವಹಣೆ, ಸುರಕ್ಷತೆ ಪರಿಶೀಲನೆಗೆ ಬೇರೆಡೆ ಅವಕಾಶ ಇಲ್ಲದಿದ್ದರಿಂದ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಪ್ರಯಾಣಿಕರಿಗೆ ಆಗಿರುವ ಅನಾನುಕೂಲಕ್ಕೆ ಕ್ಷಮೆ ಕೋರುತ್ತೇವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ ಹೇಳಿದ್ದಾರೆ.

ಹಿಂದಿನ ಲೇಖನಪೆಟ್ರೋಲ್‌, ಡೀಸೆಲ್‌ ತೆರಿಗೆ ಕಡಿತ ವಿಚಾರ ಆರ್ಥಿಕ ಸ್ಥಿತಿ ಆಧರಿಸಿ ನಿರ್ಧಾರ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಕೋವಿಡ್‌ ಲಸಿಕೆಯ 2ನೇ, ಬೂಸ್ಟರ್‌ ಡೋಸ್‌ ನಡುವಿನ ಅಂಗತ 6 ತಿಂಗಳಿಗೆ ಇಳಿಕೆ?