ಮನೆ ಪ್ರವಾಸ ಪ್ರೇಮಿಗಳ ದಿನಾಚರಣೆಯಂದು ಸಂಗಾತಿಯೊಂದಿಗೆ ಈ ಸ್ಥಳಗಳಿಗೆ ಭೇಟಿ ನೀಡಿ

ಪ್ರೇಮಿಗಳ ದಿನಾಚರಣೆಯಂದು ಸಂಗಾತಿಯೊಂದಿಗೆ ಈ ಸ್ಥಳಗಳಿಗೆ ಭೇಟಿ ನೀಡಿ

0

ಪ್ರಪಂಚದಾದ್ಯಂತ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದು ಕೇವಲ ಪ್ರೇಮಿಗಳ ದಿನಾಚರಣೆ ಮಾತ್ರವಲ್ಲ, ಪ್ರೀತಿಸುವ ಸಂಗಾತಿಗೂ ‘ಐ ಲವ್ ಯು’ ಎಂದು ಹೇಳಿ ಹತ್ತಿರವಾಗುವ ದಿನ.

ಇನ್ನು, ಇಂತಹ ಅದ್ಭುತವಾದ ದಿನವನ್ನು ಎಲ್ಲಿ ಕಳೆಯಬೇಕು ಅಂತ ಯೋಚನೆಯಲ್ಲಿದ್ದರೆ, ಹಿಮಾಚಲ ಪ್ರದೇಶದ ಕೆಲವು ರೋಮ್ಯಾಂಟಿಕ್ ತಾಣಗಳಿಗೆ ಹೋಗಿ.

ಚಂಬಾ

ಹಿಮಾಚಲ ಪ್ರದೇಶದ ಶಿಮ್ಲಾ, ಮನಾಲಿ, ಡಾಲ್ಹೌಸಿ ಮತ್ತು ಧರ್ಮಶಾಲಾ ಸೇರಿದಂತೆ ಮುಂತಾದ ಸ್ಥಳಗಳನ್ನು ನೀವು ಈಗಾಗಲೇ ಸಂದರ್ಶಿಸಿದ್ದರೆ ಸ್ವಲ್ಪ ಡಿಫರೆಂಟ್ ಆಗಿ ಚಂಬಾಗೆ ಭೇಟಿ ನೀಡಿ. ಚಂಬಾದಲ್ಲಿ ಅನ್ವೇಷಿಸಬಹುದಾದ ಅನೇಕ ರೋಮ್ಯಾಂಟಿಕ್ ತಾಣಗಳಿವೆ.

ರಾಂಪುರ್

ನೀವು ಮೊಟ್ಟ ಮೊದಲ ಬಾರಿಗೆ ಬಹುಶಃ ಈ ರಾಂಪುರ್ ಬುಶಹರ್ ತಾಣದ ಬಗ್ಗೆ ಕೇಳುತ್ತಿದ್ದೀರಿ ಅಲ್ಲವೇ? ಈ ರಾಂಪುರ್ ಚಂಡೀಗಢದಿಂದ ಸುಮಾರು 216 ಕಿ.ಮೀ ದೂರದಲ್ಲಿ ಹಾಗು ಶಿಮ್ಲಾದಿಂದ ಸುಮಾರು 120 ಕಿ.ಮೀ ದೂರದಲ್ಲಿ ಈ ರೋಮ್ಯಾಂಟಿಕ್ ತಾಣವಿದೆ. ಸಟ್ಲೆಜ್ ನದಿಯ ದಡದಲ್ಲಿರುವ ಈ ನಗರವು ಏಕಾಂತ ಬಯಸುವ ಹಾಗು ಐತಿಹಾಸಿಕ ತಾಣಗಳನ್ನು ಸಂದರ್ಶಿಸುವವರಿಗೆ ತುಂಬಾ ಇಷ್ಟವಾಗುತ್ತದೆ.

ಜೊತೆಗೆ ಫೆಬ್ರವರಿ ತಿಂಗಳಿನಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ರಾಂಪುರ್ಕ್ಕೆ ಹೋದಾಗ ತಪ್ಪದೇ ಪಾದಮ್ ಅರಮನೆ, ತಾನಿ ಜುಬ್ಬಾ ಸರೋವರ, ಶ್ರೀಕೋಟಿ ದೇವಸ್ಥಾನ ಮತ್ತು ತಾನಿ ಜುಬ್ಬದ್ ಸರೋವರದಂತಹ ತಾಣಗಳನ್ನು ಸಂದರ್ಶಿಸುವುದನ್ನು ಮರೆಯದಿರಿ.

ಚೋಪಾಲ್

ಹಿಮಾಚಲ ಪ್ರದೇಶದಲ್ಲಿರುವ ಈ ಚೋಪಾಲ್ ನಗರವು ರಮಣೀಯವಾದ ವಾತಾವರಣವನ್ನು ಹೊಂದಿದೆ. ಯಾರೆಲ್ಲಾ ಏಕಾಂತ ಬಯಸುತ್ತಾರೆಯೋ ಅಂತವರಿಗೆ ಈ ತಾಣ ಬೆಸ್ಟ್ ಎಂದೇ ಹೇಳಬಹುದು. ಇದು ಸಮುದ್ರಮಟ್ಟದಿಂದ ಸುಮಾರು 8,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಸಿದೆ. ಪ್ರೇಮಿಗಳ ದಿನಾಚರಣೆಗೆ ಇದಕ್ಕಿಂತ ಸುಂದರವಾದ ಸ್ಥಳ ಬೇಕೆ?

ಫೆಬ್ರವರಿ ತಿಂಗಳಲ್ಲಿ ಈ ಪ್ರದೇಶವು ತಂಪಾದ ಹವಾಮಾನವನ್ನು ಹೊಂದಿರುವ ಕಾರಣ, ದೇಶದ ನಾನಾ ಭಾಗಗಳಿಂದ ಜನರು ಇಲ್ಲಿಗೆ ಭೇಟಿ ನೀಡಲು ಬಯಸುತ್ತಾರೆ. ಚೋಪಾಲ್ನಲ್ಲಿ ಕಪ್ಲಾ, ಬಾಸಾ ಪ್ಯಾಲೇಸ್ ಮತ್ತು ಶ್ರೀಗುಲ್ ಮಹಾರಾಜ್, ಸನ್ಸೆಟ್ ಪಾಯಿಂಟ್ ಮತ್ತು ಚೋಪಾಲ್ ವ್ಯೂ ಪಾಯಿಂಟ್ ಪ್ರವಾಸಿಗರನ್ನು ಬಹಳ ಆಕರ್ಷಿಸುತ್ತದೆ.

ಥಿಯೋಗ್

ಹಿಮಾಚಲ ಪ್ರದೇಶದ ಗುಪ್ತ ರತ್ನವಾಗಿರುವ ಥಿಯೋಗ್ ಶಿಮ್ಲಾದಿಂದ ಸುಮಾರು 60 ಕಿ.ಮೀ ದೂರದಲ್ಲಿ ನೆಲೆಸಿದೆ. ಇದು ಕೂಡ ಬಹಳ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ದಟ್ಟವಾದ ಹುಲ್ಲುಗಾವಲು, ಬಯಲು ಸೀಮೆ ಪ್ರದೇಶ ಇಲ್ಲಿದೆ. ಇಲ್ಲಿ ಅನೇಕ ಜಲಧಾರೆಗಳಿವೆ. ಹಟು ಶಿಖರ ಮತ್ತು ತಾಜ್ ಥಿಯೋಗ್ ಪ್ರಮುಖ ಪ್ರವಾಸಿ ಆಕರ್ಷಣೆಗಳು ಪ್ರವಾಸಿಗರನ್ನು ಸೆಳೆಯುತ್ತದೆ.

ಶಿಮ್ಲಾ

ನೀವು ಇದುವರೆಗೆ ಶಿಮ್ಲಾ ಕಣ್ತುಂಬಿಕೊಳ್ಳದೇ ಇದ್ದರೆ ಖಂಡಿತವಾಗಿ ಈ ಬಾರಿ ಭೇಟಿ ನೀಡಿ. ಇದು ಭಾರತದ ಅತ್ಯಂತ ಜನಪ್ರಿಯವಾದ ಬೇಸಿಗೆ ತಾಣಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2000 ಮೀ ಎತ್ತರದಲ್ಲಿ ನೆಲೆಗೊಂಡಿರುವ ಈ ಗಿರಿಧಾಮವು ವರ್ಷವಿಡೀ ಆಹ್ಲಾದಕರವಾದ ಹವಾಮಾನವನ್ನು ಹೊಂದಿರುತ್ತದೆ. ಇದನ್ನು ಬೆಟ್ಟಗಳ ರಾಣಿ ಎಂದು ಕೂಡ ಕರೆಯುತ್ತಾರೆ.

ತನ್ನ ಮೋಡಿಮಾಡುವ ಸೌಂದರ್ಯದಿಂದ ಭಾರತದ ಪ್ರವಾಸಿಗರನ್ನು ಸೆಳೆಯುತ್ತದೆ. ಒಂದು ಕಾಲದಲ್ಲಿ ಬ್ರಿಟಿಷರು ಶಿಮ್ಲಾವನ್ನು ಬೇಸಿಗೆಯ ರಾಜಧಾನಿಯಾಗಿ ಘೋಷಿಸಿಕೊಂಡಿದ್ದರು. ಇಲ್ಲಿನ ಗಿರಿಧಾಮವು ಹಿಮದಿಂದ ಆವೃತವಾದ ಹಿಮಾಲಯ ಶ್ರೇಣಿಗಳ ಅದ್ಭುತವಾದ ನೋಟವನ್ನು ನೀಡುತ್ತದೆ.

ಹಿಂದಿನ ಲೇಖನವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಆರೋಪಿಯ ವಿರೋಧದ ನಡುವೆ ವಿಚಾರಣೆ ಮುಂದೂಡಿದ ದೆಹಲಿ ನ್ಯಾಯಾಲಯ
ಮುಂದಿನ ಲೇಖನನಕಲಿ ಅಂಕಪಟ್ಟಿ ನೀಡುತ್ತಿದ್ದ 5 ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರ ದಾಳಿ: ಓರ್ವನ ಬಂಧನ