ಮನೆ ರಾಷ್ಟ್ರೀಯ ವೋಟ್ ಚೋರಿ; ದೆಹಲಿಯಲ್ಲಿ ನಾಳೆ ಕಾಂಗ್ರೆಸ್​​ ಪ್ರತಿಭಟನೆ – ಸಿಎಂ, ಡಿಸಿಎಂ ಭಾಗಿ

ವೋಟ್ ಚೋರಿ; ದೆಹಲಿಯಲ್ಲಿ ನಾಳೆ ಕಾಂಗ್ರೆಸ್​​ ಪ್ರತಿಭಟನೆ – ಸಿಎಂ, ಡಿಸಿಎಂ ಭಾಗಿ

0

ಬೆಂಗಳೂರು/ನವದೆಹಲಿ : ಡಿನ್ನರ್, ಬ್ರೇಕ್​ಫಾಸ್ಟ್ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯತ್ತ ಮುಖಮಾಡಿದ್ದಾರೆ. ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಗೆ ಹಾರಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಲಿದ್ದಾರೆ. ಇನ್ನು ನಾಳೆ ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ನೆಪದಲ್ಲಿ ಇಬ್ಬರು ನಾಯಕರನ್ನು ದೆಹಲಿ ಕರೆಸಿಕೊಂಡರಾ ಅನ್ನೋ ಚರ್ಚೆ ಶುರುವಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ವೋಟ್ ಚೋರಿ ನಡೆದಿದೆ ಅಂತಾ ಕಾಂಗ್ರೆಸ್ ಸಮರ ಸಾರಿದೆ. ಇದೀಗ ಎರಡನೇ ಹಂತದ ವೋಟ್ ಚೋರಿ ಅಭಿಯಾನಕ್ಕೆ ಸಿದ್ಧತೆ ಮಾಡಿಕೊಂಡಿದೆ. ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಅಭಿಯಾನ ನಡೆಯಲಿದೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಭಾಗವಹಿಸಲಿದ್ದಾರೆ.

ಇದೇ ವೇಳೆ ಮಂಡ್ಯ ನಾಯಕರ ಟೀಂ ದಿಲ್ಲಿ ಯಾತ್ರೆ ಕೈಗೊಂಡಿದೆ. ಚಲುವರಾಯಸ್ವಾಮಿ ನೇತೃತ್ವದಲ್ಲಿ ತಂಡ ದೆಹಲಿಗೆ ತೆರಳುವ ಪ್ಲ್ಯಾನ್ ಇತ್ತು. ಆದರೆ ಅನಾರೋಗ್ಯದ ಕಾರಣ ಚಲುವರಾಯಸ್ವಾಮಿ ದೆಹಲಿಗೆ ಹೋಗುತ್ತಿಲ್ಲ. ಉಳಿದಂತೆ ಶಾಸಕರುಗಳಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ದೆಹಲಿಗೆ ತೆರಳಿದ್ದಾರೆ.

ಮಂಡ್ಯ ಶಾಸಕ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​​, ನನ್ನ ಜೊತೆ ಯಾರೂ ದೆಹಲಿಗೆ ಬರುತ್ತಿಲ್ಲ. ಅವರವರ ಕ್ಷೇತ್ರದವರ ಜೊತೆ ಹೋಗ್ತಿದ್ದಾರೆ ಎಂದು ಹೇಳಿದ್ದಾರೆ. ವೋಟ್ ಚೋರಿ ಬಗ್ಗೆ ಕಿಡಿಕಾರಿದ ಎಂಎಲ್​ಸಿ ಸಲೀಂ ಅಹ್ಮದ್, ಇದು ವೋಟ್ ಚೋರಿ ಅಲ್ಲ, ಬಿಜೆಪಿ ಹಾಗೂ ಎಲೆಕ್ಷನ್​ ಕಮಿಷನ್​ನಿಂದ ಡಕಾಯಿತಿ ಅಂದಿದ್ದಾರೆ.

ವೋಟ್ ಚೋರಿ ಆರೋಪದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಾಜಿ ಶಾಸಕ ಸುಭಾಶ್ ಗುತ್ತೇದಾರ್, ನಾವು ಯಾವುದೇ ವೋಟ್ ಚೋರಿ ಮಾಡಿಲ್ಲ ಅಂದಿದ್ದಾರೆ. ಇನ್ನು ಈ ಬಗ್ಗೆ ಸುಭಾಶ್ ಗುತ್ತೇದಾರ್ ಪುತ್ರ ಹರ್ಷಾನಂದ್ ಗುತ್ತೆದಾರ್ ಮಾತನಾಡಿ, ಸರ್ಕಾರ ಇರುವುದರಿಂದ ಅಧಿಕಾರಿಗಳನ್ನ ಬಳಸಿಕೊಂಡಿದ್ದಾರೆ ಅಂತಾ ಆರೋಪಿಸಿದ್ದಾರೆ. ಒಟ್ಟಿನಲ್ಲಿ ವೋಟ್ ಚೋರಿ ನೆಪದಲ್ಲಿ ಸಿಎಂ ಹಾಗೂ ಡಿಸಿಎಂ ದೆಹಲಿಯತ್ತ ಮುಖ ಮಾಡಿದ್ದಾರೆ. ಅಲ್ಲಿ ಇಬ್ಬರನ್ನೂ ಕೂರಿಸಿ ಹೈಕಮಾಂಡ್ ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.