ಮೈಸೂರು: ವಿವಿಪುರಂ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಸೆಂಟ್ ಜೋಸೆಫ್ ಸ್ಕೂಲ್ ಜಂಕ್ಷನ್ ನಲ್ಲಿ ಟಿವಿಎಸ್ ಸಿಸಿ ಮೋಟಾರ್ ಸೈಕಲ್ ಸವಾರ ವಂಚಿಸುವ ಉದ್ದೇಶದಿಂದ ತನ್ನ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಕೆಎ-55 ಎಕ್ಸ್-4148 ವಾಹನದ ಹಿಂಭಾಗದ ನಂಬರ್ ಪ್ಲೇಟ್ ನಲ್ಲಿ ಒಂದು ಸಂಖ್ಯೆಗೆ ಸ್ಟಿಕರ್ ಹಾಕಿಕೊಂಡು ನೋಂದಣಿ ಸಂಖ್ಯೆಯನ್ನು ಕೆಎ-55 ಎಕ್ಸ್-418 ಎಂದು ಬದಲಾಯಿಸಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ಟಿವಿಎಸ್ ಸಿಸಿ ಮೋಟಾರು ಸೈಕಲ್ ಸವಾರನ ವಿರುದ್ಧ ವಿವಿ ಪುರಂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಕೇಂದ್ರ ಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ಹೆಚ್ ಅವರ ನೇತೃತ್ವದಲ್ಲಿ ವಿವಿ ಪುರಂ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಲವ ಎಂ.ಆರ್, ಪಿಎಸ್ಐ ಶ್ರೀಧರ್ ಎಲ್ ಸಿ ಮತ್ತು ಸಿಬ್ಬಂದಿಯವರಾದ ಪರಮೇಶ್ ಕೆ, ಪ್ರದೀಪ್ ಕುಮಾರ್ ಮಾಡಿರುತ್ತಾರೆ.
ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನೋತ್ ಪ್ರಶಂಶಿಸಿದ್ದಾರೆ.