ಮನೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ವರದಿ ಬಳಿಕ ಚಕ್ರತೀರ್ಥ ವಿರುದ್ಧ ಕ್ರಮ; ಸಿಎಂ ಬೊಮ್ಮಾಯಿ

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ವರದಿ ಬಳಿಕ ಚಕ್ರತೀರ್ಥ ವಿರುದ್ಧ ಕ್ರಮ; ಸಿಎಂ ಬೊಮ್ಮಾಯಿ

0

ಮಂಗಳೂರು (Mangalore)-ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ನೀಡುವ ವರದಿ ಆಧಾರದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡ ಗೀತೆಗೆ ಅವಮಾನ, ಪಠ್ಯ ಕ್ರಮದ ಪರಿಷ್ಕರಣೆ ವೇಳೆ ಲೋಪದ ಆರೋಪ ಕುರಿತು ಶಿಕ್ಷಣ ಸಚಿವರಿಗೆ ವರದಿ ನೀಡಲು ಸೂಚಿಸಿದ್ದೇನೆ. ಬೆಂಗಳೂರಿಗೆ ಹೋದ ಬಳಿಕ ಅವರು ವರದಿ ಕೊಡಲಿದ್ದಾರೆ. ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಕ್ಷಣ ಸಚಿವರು ಈಗಾಗಲೇ ಆದಿಚುಂಚನಗಿರಿ ಮಠಾಧೀಶರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಎಲ್ಲ ಆಯಾಮಗಳ ಅಧ್ಯಯನ ನಡೆಸಿ, ಸತ್ಯಾಂಶ ಏನಿದೆ ಎಂಬ ವರದಿ ಕೊಡಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಮಂಗಳೂರಿನ ಮಳಲಿ ಮಸೀದಿ ವಿಚಾರ ನ್ಯಾಯಾಲಯದಲ್ಲಿದೆ. ಅಲ್ಲಿ ಏನು ತೀರ್ಪು ಬರುತ್ತದೆ ಎಂದು ಕಾಯೋಣ. ಈ ಮಧ್ಯೆ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಸಿಎಂ ಪ್ರತಿಕ್ರಿಯಿಸಿದರು.

ಹಿಂದಿನ ಲೇಖನಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತು: 80 ಕೋಟಿ ರೈತರಿಗೆ 21,000 ಕೋಟಿ ರೂ. ಅನುದಾನ ಬಿಡುಗಡೆ
ಮುಂದಿನ ಲೇಖನಅಕ್ರಮ ಹಣ ವರ್ಗಾವಣೆ: ಜೂ.9 ರವರೆಗೆ ಸಚಿವ ಸತ್ಯೇಂದ್ರ ಜೈನ್ ಇಡಿ ಕಸ್ಟಡಿಗೆವ