ಮನೆ ಕ್ರೀಡೆ ಚಿನ್ನ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು

ಚಿನ್ನ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು

0

ಸಿಂಗಾಪುರಸಿಂಗಾಪುರ ವೇಟ್ ಲಿಫ್ಟಿಂಗ್ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ 2022 ಕಾಮನ್ ವೆಲ್ತ್ ಗೇಮ್ಸ್  ಗೆ ಭಾರತದ ಸ್ಟಾರ್ ವೇಟ್ ಲಿಫ್ಟರ್ ಆಟಗಾರ್ತಿ ಮೀರಾಬಾಯಿ ಚಾನು ಅರ್ಹತೆ ಪಡೆದಿದ್ದಾರೆ.

ಇದು ಬರ್ನಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ 2022 ಕಾಮನ್ ವೆಲ್ತ್ ಗೇಮ್ಸ್ ನ ಅರ್ಹತಾ ಪಂದ್ಯವಾಗಿತ್ತು. ಇದೇ ಮೊದಲ ಬಾರಿಗೆ 55 ಕೆಜಿ ವೇಟ್ ವಿಭಾಗದಲ್ಲಿ ಸ್ಪರ್ಧಿಸಿದ ಚಾನು 191  (86+150 ಕೆಜಿ) ಕೆಜಿ ಭಾರ ಎತ್ತುವ ಮೂಲಕ  ಪ್ರಥಮ ಸ್ಥಾನ ಪಡೆದರು. 

ಆಸ್ಟ್ರೇಲಿಯಾದ ಜೆಸ್ಸಿಕಾ ಸೆವಾಸ್ಟೆಂಕೊ 167 ಕೆಜಿ ( 77+90 ಕೆಜಿ) ಭಾರ ಎತ್ತುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಚಾನು ಅವರಿಗಿಂತ 24 ಕೆಜಿ ಕಡಿಮೆ ಭಾರ ಎತ್ತಿದರು. ಮಲೇಷ್ಯಾದ ಎಲ್ಲೀ ಕಸ್ಸಂದ್ರ ಎಂಗಲ್ಬರ್ಟ್ 165 (75+90 ಕೆಜಿ ) ಭಾರ ಎತ್ತುವುದರೊಂದಿಗೆ ಮೂರನೇ ಸ್ಥಾನ ಪಡೆದರು.

ಹಿಂದಿನ ಲೇಖನಹಾಲಿ ನಿರ್ವಹಿಸುತ್ತಿದ್ದ ಹುದ್ದೆಯಿಂದ 7 ಕೆಎಎಸ್ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ ರಾಜ್ಯ ಸರಕಾರದ ಆದೇಶ
ಮುಂದಿನ ಲೇಖನಕೋವಿಡ್ ನಿರ್ಬಂಧಗಳನ್ನು ಸಡಿಲ ಮಾಡುವಂತೆ ಕೇಂದ್ರ ಸೂಚನೆ