ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನಲ್ಲಿ ಖಾಲಿ ಇರುವ ಡೇಟಾ ಎಂಟ್ರಿ ಆಪರೇಟರ್ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಐಸಿಎಂಆರ್ ನಿಧಿ ಪ್ರಾಯೋಜಿತ ಈ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ನೇಮಕಾತಿ ಮಾಡಲಾಗುವುದು.
ಹುದ್ದೆ ವಿವರ: ಡೇಟಾ ಎಂಟ್ರಿ ಆಪರೇಟರ್ – 1 ಹುದ್ದೆ
ವಿದ್ಯಾರ್ಹತೆ: ಅಭ್ಯರ್ಥಿಗಳು ಪದವೀಧರರಾಗಿರಬೇಕು. ಜೊತೆಗೆ ಒಂದು ವರ್ಷ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು..
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 30 ವರ್ಷ ದಾಟಿರಬಾರದು. ಮೂರು ತಿಗಂಳ ಅವಧಿಗೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಅವಧಿಯಲ್ಲಿ ಮಾಸಿಕ 19,280 ರೂಗಳನ್ನು ಗೌರವಧನವಾಗಿ ನೀಡಲಾಗುವುದು.
ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 30ರಂದು ಬೆಳಗ್ಗೆ 10ಕ್ಕೆ ನಡೆಯುವ ವಾಕ್ ಇನ್ ಇಂಟರ್ವ್ಯೂನಲ್ಲಿ ಭಾಗಿಯಾಗಬಹುದು.
ಸ್ಥಳ: ಕಮಿಟಿ ರೂಂ, ರಿಜಿಸ್ಟರ್ ಸೆಕ್ರೆಟರಿ ಕೋಣೆ ಪಕ್ಕ, ಓಲ್ಡ್ ಅಡ್ಮಿನ್ ಬ್ಲಾಕ್, ಗ್ರೌಂಡ್ ಫ್ಲೋರ್, ನಿಮ್ಹಾನ್ಸ್, ಬೆಂಗಳೂರು- 560029
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು nimhans.ac.in ಇಲ್ಲಿಗೆ ಭೇಟಿ ನೀಡಿ.
SSC ಹುದ್ದೆಗೆ ಅರ್ಜಿ ಸಲ್ಲಿಕೆಗೆ ಜು. 31 ಕೊನೆಯ ದಿನ: ಸಿಬ್ಬಂದಿ ನೇಮಕಾತಿ ಆಯೋಗವು (SSC) 8,326 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. 4,887 ಎಂಟಿಎಸ್ (ತಾಂತ್ರಿಕೇತರ) ಮತ್ತು 3,439 ಹವಾಲ್ದಾರ್ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು.
ಗರಿಷ್ಠ 27 ವರ್ಷ ದಾಟದ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಉತ್ತೀರ್ಣ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ, ವಿಶೇಷಚೇತನ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ಭರಿಸಬೇಕಿದೆ. ಲಿಖಿತ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಮೂಲಕ ಹುದ್ದೆ ಆಯ್ಕೆ ನಡೆಯಲಿದೆ. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿಗೆ ssc.gov.in ಇಲ್ಲಿಗೆ ಭೇಟಿ ನೀಡಿ.