ಮನೆ ರಾಜಕೀಯ ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ.ಮೀಸಲು: ಸಿಎಂ

ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ.ಮೀಸಲು: ಸಿಎಂ

0

ಬೆಂಗಳೂರು: ರಾಜ್ಯದ ಉದ್ದೇಶಿತ ಮೇಕೆದಾಟು ಯೋಜನೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಮ್ಮ 2022–23 ನೇ ಸಾಲಿನ ಬಜೆಟ್ ಭಾಷಣದಲ್ಲಿ ಅವರು ಈ ವಿಷಯ ತಿಳಿಸಿದರು.ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ತೋರಿಸಿದ ನಂತರ ಯೋಜನೆ ಆರಂಭಿಸಲು ಬಜೆಟ್‌ನಲ್ಲಿ ₹1,000 ಕೋಟಿ ತೆಗೆದಿರಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಹಂತ 3ಕ್ಕೆ ₹5000 ಕೋಟಿ ನೀಡಲಾಗಿದೆ. ಕಳಸಾ ಬಂಡೂರಿಗಾಗಿ ₹1000 ಕೋಟಿ ತೆಗೆದಿಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಗಾಗಿ ₹3000 ಕೋಟಿ ನೀಡಲಾಗುವುದು. ಎತ್ತಿನಹೊಳಿ ಯೋಜನೆಗಾಗಿ ₹3000 ಕೋಟಿ ಕೊಡಲಾಗುವುದು ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

ಹಿಂದಿನ ಲೇಖನಮೃತದೇಹ ತರುವ ಜಾಗದಲ್ಲಿ ಹೆಚ್ಚು ಮಂದಿಯನ್ನು ಕರೆ ತರಬಹುದು : ಅರವಿಂದ ಬೆಲ್ಲದ್
ಮುಂದಿನ ಲೇಖನಪೊಲೀಸ್ ಠಾಣೆ, ಟ್ಯಾಕ್ಸ್ ಆಫೀಸ್, ಸಬ್ ರಿಜಿಸ್ಟ್ರಾರ್, ಬಿಡಿಎ, ಪಾಲಿಕೆಗಳು ಭ್ರಷ್ಟಾಚಾರದ ಫಲವತ್ತಾದ ಭೂಮಿ: ಹೈಕೋರ್ಟ್ ನ್ಯಾ.ಶ್ರೀಶಾನಂದ