1. ಕಪ್ಪಳದ ಖಾರವನ್ನು ಎಕ್ಕದ ಎಲೆಯಲ್ಲಿ ಸುಟ್ಟು ಆ ಆ ಕ್ಷಾರವನ್ನು ಎಳನೀರಿನಲ್ಲಿ ಸೇವಿಸಿದರೆ ಜಲೋದರ ನಿವಾರಣೆ ಆಗುವುದು.
2. ಮೂರೇನಣಿ ಕಳ್ಳಿಯ ಹಾಲಿನಲ್ಲಿ ಹಪ್ಪಳದ ಕಾರವನ್ನು ನೆನೆಸಿಟ್ಟು ಆ ಪುಡಿಯನ್ನು ಜಲೋದರದಲ್ಲಿ ಕೊಡಬೇಕು.
3. ಹಿಪ್ಪಲಿಯನ್ನು ಚುರುಕಳ್ಳೆ ಗಿಡದ ರಸದಲ್ಲಿ 21 ದಿನ ಆರೆದು ಅರ್ಧ ತೋಲದಂತೆ ಬೆಳಿಗ್ಗೆ ಸೇವಿಸುವುದು. ಆಡಿನ ಹಾಲು ಪಥ್ಯ ಇರಬೇಕು.
ನೆಗಡಿ :-
1. ಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ,ದಿನಕ್ಕೆ ಮೂರು ವೇಳೆ ಸೇವಿಸಲು ನೆಗಡಿ ಪರಿಹಾರ ವಾಗುವುದು.
2. ಪ್ರತಿದಿನವೂ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನೆಗಡಿ ದೂರವಾಗುವುದು.
3. ನೆಗಡಿ ಬಂದ ತಕ್ಷಣ ಓ ಕುಳಿ ಮಾಡಿ ಕಾಯಿಸಿ ಸೇವಿಸುವುದರಿಂದ ಗುಣವಾಗುವುದು ನೀರಿಗೆ ಸುಣ್ಣ ಮತ್ತು ಅರಿಸಿನ ಕದಡಿದರೆ ಓಕುಳಿ ಆಗುತ್ತದೆ.
4. ನೆಲ್ಲಿಕಾಯಿಯನ್ನು ಸೇವಿಸುತ್ತಾ ಬಂದರೆ ನೆಗಡಿ ಗುಣವಾಗುವುದು.
ನರ ದೌರ್ಬಲ್ಯ :-
1. ಒಂದು ಲೋಟ ಬಿಸಿಯಾದ ಹಾಲಿಗೆ ಒಂದು ಬೆಳ್ಳುಳ್ಳಿ ಅರೆದು ಹಾಲಿನಲ್ಲಿ ಮಿಶ್ರ ಮಾಡಿ ರಾತ್ರಿ ಮಲಗುವ ವೇಳೆ ಕುಡಿದರೆ ನರಗಳ ದೌರ್ಬಲ್ಯ ಹೆಸರಿಲ್ಲದಂತೆ ಹೋಗುವುದು.
2. ನರಗಳ ಉದ್ವೇಗಕ್ಕೆ ಸಮಾನ ಮಾಡಲು ಬಿಸಿನೀರಿಗೆ ಬಾದಾಮಿ ಬೀಜ, ಸೋಂಪು ಕಾಳು ಸಕ್ಕರೆ ಸಮ ಪ್ರಮಾಣದಲ್ಲಿ ಅರೆದು, ಸೇರಿಸಿ.ರಾತ್ರಿ ಮಲಗುವಾಗ ಸೇವಿಸುತ್ತಾ ಬರಬೇಕು.
3. ಪ್ರತಿದಿನವೂ ಊಟದಲ್ಲಿ ಹಸಿ ಈರುಳ್ಳಿಯನ್ನು ತಿನ್ನುತ್ತಾ ಬಂದರೆ ನರಗಳ ಆಶಕ್ತಿ ನಿವಾರಣೆ ಆಗುವುದು.
4. ನುಗ್ಗೇಸೊಪ್ಪಿನ ಪಲ್ಯ, ಅಗಸೇ ಸೊಪ್ಪಿನ ಪಲ್ಯ ಬಿಡದೆ ಎಂಟು ದಿನ ಸೇವಿಸುವುದರಿಂದ ನರಗಳ ಆಶಕ್ತಿ ನಿವಾರಣೆ ಆಗುವುದು.
5. ದ್ರಾಕ್ಷಿ ಹಣ್ಣು,ಸೇಬಿನ ಹಣ್ಣು, ಪರಂಗಿ ಹಣ್ಣು, ಬಾಳೆಹಣ್ಣುಗಳನ್ನು ಸೇವಿಸುವುದರಿಂದ ನರದ ಉದ್ರೇಕ ಕಡಿಮೆಯಾಗುವುದು.
6. ಪ್ರತಿದಿನದ ಅಡಿಗೆಯಲ್ಲಿ ನುಗ್ಗೆ ಕಾಯಿ ಉಪಯೋಗಿಸುವುದರಿಂದ ನರದೌರ್ಬಲ್ಯ ನಿವಾರಣೆ ಆಗುವುದು.
7. ಬಾಳೆ ದಿಂಡನ್ನು ತಂದು ತೊಳೆದು ತುರಿ ಮಾಡಿಕೊಂಡು ರಸ ಹಿಂಡ ಒಂದು ಬಟ್ಟಲಿನಷ್ಟು ರಸಕ್ಕೆ ಎಳನೀರು ಸೇರಿಸಿ ಕುಡಿಯುತ್ತಾ ಬರಲು ನರಗಳ ದುರ್ಬಲತೆ ಕಂಡುಬರುವುದಿಲ್ಲ