ಮನೆ ರಾಷ್ಟ್ರೀಯ ‘ಸಿಂಧೂರ ಅಳಿಸಲು ಬಂದವರನ್ನು ಮಣ್ಣಿನಲ್ಲಿ ಹೂತಿದ್ದೇವೆ’ : ಭಯೋತ್ಪಾದನೆಗೆ ಮೋದಿ ಕಠಿಣ ಎಚ್ಚರಿಕೆ

‘ಸಿಂಧೂರ ಅಳಿಸಲು ಬಂದವರನ್ನು ಮಣ್ಣಿನಲ್ಲಿ ಹೂತಿದ್ದೇವೆ’ : ಭಯೋತ್ಪಾದನೆಗೆ ಮೋದಿ ಕಠಿಣ ಎಚ್ಚರಿಕೆ

0

ರಾಜಸ್ಥಾನ: ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ಇಂದು ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ಕೇವಲ 22 ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿದುದು ಮಹತ್ವದ ಸಾಧನೆ ಎಂದು ಹೇಳಿದ್ದಾರೆ.

“ಸಿಂಧೂರ ಅಳಿಸಲು ಹೊರಟವರನ್ನು ನಾವು ಮಣ್ಣಿನಲ್ಲಿ ಹೂತಿದ್ದೇವೆ. ಭಯೋತ್ಪಾದಕರ ಒಂಬತ್ತು ದೊಡ್ಡ ಅಡಗುತಾಣಗಳನ್ನು ತಕ್ಷಣವೇ ನಾಶ ಮಾಡಲಾಗಿದೆ. ಭಾರತವು ಭಯೋತ್ಪಾದನೆ ವಿರುದ್ಧ ಕ್ಷಮೆಯಿಲ್ಲದ ಹೋರಾಟ ನಡೆಸುತ್ತಿದೆ,” ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ರಾಷ್ಟ್ರದ ರಕ್ಷಣೆಯ ಪ್ರಾಮುಖ್ಯತೆ, ಸೈನ್ಯದ ತ್ವರಿತ ಪ್ರತಿಕ್ರಿಯೆ ಮತ್ತು ಭದ್ರತಾ ನೀತಿಗಳ ಗಂಭೀರತೆಯ ಕುರಿತು ವಿವರವಾಗಿ ಮಾತನಾಡಿದರು. “ಸಿಂಧೂರ, ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಆದರೆ ಇದು ಬಂದೂಕಿನ ಪುಡಿಯಾಗಿ ಏನಾಗುತ್ತದೆ ಎಂಬುದನ್ನು ವಿಶ್ವದ ಮತ್ತು ದೇಶದ ಶತ್ರುಗಳು ನೋಡಿದ್ದಾರೆ. ರಕ್ತವಲ್ಲ, ನನ್ನ ರಕ್ತನಾಳಗಳಲ್ಲಿ ಸಿಂಧೂರ ಕುದಿಯುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತ ಒಗ್ಗಟ್ಟಾಗಿದೆ. ಗುಂಡೇಟುಗಳು (ಪಹಲ್ಗಾಮ್ ಭಯೋತ್ಪಾದಕ ದಾಳಿ) 140 ಕೋಟಿ ಭಾರತೀಯರ ಎದೆಗೆ ನಾಟಿದಂತಿತ್ತು. ನಾವು ಭಯೋತ್ಪಾದನೆಯ ಎದೆಗೆ ಗುಂಡೇಟು ನೀಡಿದ್ದೇವೆ. ಸರ್ಕಾರವು ಮಿಲಿಟರಿಗೆ ಮುಕ್ತ ಹಸ್ತ ನೀಡಿತು. ಸಶಸ್ತ್ರ ಪಡೆಗಳು ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದವು ಎಂದಿದ್ದಾರೆ.

ಏಪ್ರಿಲ್ 22 ರಂದು ಭಯೋತ್ಪಾದಕರು ಧರ್ಮವನ್ನು ಕೇಳುವ ಮೂಲಕ ನಮ್ಮ ಸಹೋದರಿಯರ ಹಣೆಯ ಮೇಲಿನ ಸಿಂಧೂರ ಅಳಿಸಿದ್ದರು. ಆ ಗುಂಡುಗಳು 140 ಕೋಟಿ ದೇಶವಾಸಿಗಳ ಹೃದಯಗಳನ್ನು ಚುಚ್ಚಿದವು. ಇದರ ನಂತರ, ದೇಶದ ಪ್ರತಿಯೊಬ್ಬ ನಾಗರಿಕರು ಒಗ್ಗೂಡಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಿರ್ಧರಿಸಿದರು. ದೇಶದ ಜನತೆ ಊಹಿಸುವುದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ನಾವು ವಿಧಿಸಿದ್ದೇವೆ ಎಂದು ತಿಳಿಸಿದ್ದಾರೆ.

5 ವರ್ಷಗಳ ಹಿಂದೆ ಬಾಲಾಕೋಟ್‌ನಲ್ಲಿ ದೇಶವು ವಾಯುದಾಳಿ ನಡೆಸಿದ ನಂತರ, ನನ್ನ ಮೊದಲ ಸಾರ್ವಜನಿಕ ಸಭೆ ರಾಜಸ್ಥಾನದ ಗಡಿಯಲ್ಲಿಯೇ ನಡೆದಿರುವುದು ಕಾಕತಾಳೀಯ. ವೀರಭೂಮಿಯ ತಪಸ್ಸಿನಿಂದಾಗಿ ಇಂತಹ ಕಾಕತಾಳೀಯ ಸಂಭವಿಸಿದೆ. ಈಗ ಆಪರೇಷನ್ ಸಿಂಧೂರ ನಡೆದಾಗ, ನನ್ನ ಮೊದಲ ಸಾರ್ವಜನಿಕ ಸಭೆ ಮತ್ತೆ ರಾಜಸ್ಥಾನದ ವೀರಭೂಮಿಯ ಗಡಿಯಲ್ಲಿರುವ ಬಿಕಾನೇರ್‌ನಲ್ಲಿ ನಿಮ್ಮೆಲ್ಲರ ನಡುವೆ ನಡೆಯುತ್ತಿದೆ ಎಂದು ಮೋದಿ ತಿಳಿಸಿದರು.