ಮನೆ ರಾಜ್ಯ ಬಿಜೆಪಿಯವರು ಯಾರನ್ನಾದರೂ ವಿಪಕ್ಷನಾಯಕನಾಗಿ ಮಾಡಲಿ ನಮಗೂ ಅದಕ್ಕೂ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಯಾರನ್ನಾದರೂ ವಿಪಕ್ಷನಾಯಕನಾಗಿ ಮಾಡಲಿ ನಮಗೂ ಅದಕ್ಕೂ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ

0

ಮೈಸೂರು: ಆರ್‌.ಅಶೋಕ್‌ ವಿಪಕ್ಷ ನಾಯಕನಾದ್ರೆ ನಾನೇನು ಮಾಡಲಿ? ಬಿಜೆಪಿಯವರು ಯಾರನ್ನಾದರೂ ವಿಪಕ್ಷನಾಯಕನಾಗಿ ಮಾಡಲಿ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಪಕ್ಷ‌ ನಾಯಕನಾಗಿ ಅಶೋಕ್ ನೇಮಕ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಜನರಿಗೆ ಕೊಟ್ಟಿರುವ ಆಶ್ವಾಸನೆಗಳಿವೆ. ನಮ್ಮ ಉದ್ದೇಶ ರಾಜ್ಯದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಬೇಕು. ದ್ವೇಷದ ರಾಜಕಾರಣ ನಿಲ್ಲಬೇಕು. ನಾವು ಎಲ್ಲಾ ಆಶ್ವಾಸನೆಗಳನ್ನ ಈಡೇರಿಸಬೇಕು ಎಂದರು.

ರಾಜ್ಯದಲ್ಲಿ ಟ್ರಾನ್ಸ್‌ಫರ್ ದಂಧೆ ವಿಚಾರವಾಗಿ ಮಾತನಾಡಿದ ಅವರು, ಅವರು ಹೇಳಿದ್ದನ್ನೆಲ್ಲ‌ ನಾವು ಕೇಳಬೇಕೆಂಬುದೇನಿಲ್ಲ, ಅಸೆಂಬ್ಲಿಯಲ್ಲಿ ಇದಕ್ಕೆಲ್ಲ ಉತ್ತರ ನೀಡಬೇಕು. ಅಲ್ಲಿಯೇ ಅವರಿಗೆ ಉತ್ತರ ನೀಡ್ತೇವೆ. ವಿಡಿಯೋದಲ್ಲಿ ಮಾತನಾಡಿರುವ ವಿವೇಕಾನಂದ ಬಗ್ಗೆ ಗೊತ್ತಾ? ವಿವೇಕಾನಂದ ಮೈಸೂರು ತಾಲೂಕು‌ ಬಿಇಒ ಇನ್ಸ್ ಪೆಕ್ಟರ್ ವಿವೇಕಾನಂದ ಟ್ರಾನ್ಸ್ ಫರ್ ಆಗಿರುವುದು ಚಾಮರಾಜ ಕ್ಷೇತ್ರಕ್ಕೆ ಎಂದು ಸ್ಪಷ್ಟ ಪಡಿಸಿದರು.

ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಚಳವಳಿ ಬಗ್ಗೆ ಮಾತನಾಡಿದ ಅವರು, ಜನ ಈಗಾಗಲೇ ಅವರಿಗೆ ಪಾಠ ಕಲಿಸಿದ್ದಾರೆ. ವಿಪಕ್ಷ‌ ಸ್ಥಾನದಲ್ಲಿ ಕುಳಿತುಕೊಳ್ಳಿ ಅಂತ ಕೂರಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದೇ ಬರ್ತೀವಿ ಅಂತಿದ್ರು. ಸಮ್ಮಿಶ್ರ ಸರ್ಕಾರ ನಡೆಸಲು ಚಿಂತನೆಯಲ್ಲಿದ್ದರು. ಸದ್ಯ ಅಧಿಕಾರಕ್ಕೆ ಬರದೇ ಇರುವುದಕ್ಕೆ ಡೆಸ್ಪರೇಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ಕೌರವ ಸಂಸ್ಕೃತಿ ರಾಜಕಾರಣ ಬೇಡ ಎಂಬ ಕುಮಾರಸ್ವಾಮಿ‌ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ಆರೋಪ‌ ಸಾಬೀತು ಮಾಡ್ತಾರಾ? ಕುಮಾರಸ್ವಾಮಿ ಅವರು ಡೆಸ್ಪರೇಟ್ ಆಗಿದ್ದಾರೆ. ಅವರಿಗೆ ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಅಸೂಯೆ, ದ್ವೇಷ. ಅವರು ಕೇವಲ ೧೯ ಸ್ಥಾನ ಗೆದ್ದರು. ಅವರ ಪಂಚರತ್ನಗಳು‌ ಏನಾದವು? 37 ರಿಂದ 19 ಕ್ಕೆ ಕುಸಿತ ಕಂಡಿದ್ದರಿಂದ ಹತಾಶೆಗೊಳಗಾದರು ಎಂದು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲ ಉತ್ತರ ಕೊಡಬೇಕಿಲ್ಲ. ಪೆನ್ ಡ್ರೈವ್ ವಿಚಾರದಲ್ಲಿ ತೆಗೆದು ತೋರಿಸಲು ಹೇಳಿ. ಅಸೆಂಬ್ಲಿಯಲ್ಲಿ ಯಾಕೆ ಅವರು ತೋರಿಸಲಿಲ್ಲ. ಸಾಕಷ್ಟು ಮಂದಿ ರಿಕ್ವೆಸ್ಡ್ ಮಾಡಿದ್ದಾರೆ ಅದಕ್ಕೆ ತೋರಿಸಲಿಲ್ಲ ಅಂತಾರೆ. ವಿದ್ಯುತ್ ಕದ್ದವರು ಅವರ ಬಗ್ಗೆ ಏನ್ ಪ್ರಶ್ನೆ ಕೇಳ್ತೀರಿ.? ಅವರಿಗೆ ಯಾವ ನೈತಿಕತೆವಿದೆ. ಅವರಿಗೆ ಮಾತನಾಡಲು ಯಾವ ಹಕ್ಕಿದೆ. ದಂಡ ಕಟ್ಟಿರುವುದೇ ಅಪರಾಧ ಮಾಡಿದ್ದೇನೆ ಎಂಬುದೇ ಸತ್ಯ ಎಂದು ಹರಿಹಾಯ್ದಿದ್ದಾರೆ.

ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತೆ ಎಂಬ ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರು ತೀರ್ಮಾನ ನೀಡುತ್ತಾರೆ. ಬಿಜೆಪಿಯವರು ಕನಸು ಕಾಣ್ತಾ ಇದ್ದಾರೆ.ರಮೇಶ, ಯತ್ನಾಳ್ , ಬೆಲ್ಲದ್ ಏಕೆ ಎದ್ದು ಹೋದರು? ಮಗನನ್ನು ರಾಜ್ಯಾಧ್ಯಕ್ಷ ಮಾಡಿದ್ದು, ಅಶೋಕನನ್ನು ವಿಪಕ್ಷ ನಾಯಕನನ್ನಾಗಿ ಮಾಡಿದ್ದು. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಲಿದೆ. ಬಿಜೆಪಿಯ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ಕಾದು‌ನೋಡಿ‌ ಎಂದು ವ್ಯಂಗ್ಯವಾಡಿದರು.