ಬೆಂಗಳೂರು(Bengaluru): ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ 27,099 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಕಲ್ಪಿಸಿದ್ದೇವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ವಕೀಲ ಮೊಹಮ್ಮದ್ ಇಕ್ವಾಲ್ ಅವರು ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕೆಂದು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯರ್ಮೂತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯ ಪೀಠವು ಗುರುವಾರದಿಂದ ವಿಚಾರ ನಡೆಸಿದ್ದಾರೆ.
ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಹಾಜರುಪಡಿಸಲು ಕಂದಾಯ ಇಲಾಖೆಯು ಇಲ್ಲಿವರೆಗೆ ಶೇಖರಿಸಲಾಗಿದ್ದ ಬೃಹತ್ ಮಟ್ಟದ ದಾಖಲೆಗಳನ್ನು ಟೆಂಪೊಗಳಲ್ಲಿ ತುಂಬಿ ತರಲಾಗಿತ್ತು. 31 ಜಿಲ್ಲೆಗಳ ಒಟ್ಟು 27 ಸಾವಿರಕ್ಕೂ ಹೆಚ್ಚು ಬಂಡಲ್ ಗಳನ್ನು ಒಳಗೊಂಡಿದ್ದ ಈ ದಾಖಲೆಗಳಲ್ಲಿ 1,006 ಬೇಚರಾಕ್ ( ದಾಖಲೆ ರಹಿತ ಜನ ವಸತಿಯ ಹಳ್ಳಿ) ಗ್ರಾಮಗಳ ಮಾಹಿತಿಯನ್ನು ಇದರಲ್ಲಿ ಸೇರಿಸಲಾಗಿತ್ತು.
ನ್ಯಾಯ ಪೀಠವು ದಾಖಲೆಗಳ ಮಾಹಿತಿಯನ್ನು ಆರ್ತಿದಾರರಿಗೂ ಒದಗಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಲಾಗಿದೆ.