ಮನೆ ರಾಜಕೀಯ ಕೇಸರಿ ಶಾಲನ್ನು ಮಕ್ಕಳಿಗೆ ಪೂರೈಸಿದ್ದು ನಾವು: ಕೆ.ಎಸ್.ಈಶ್ವರಪ್ಪ

ಕೇಸರಿ ಶಾಲನ್ನು ಮಕ್ಕಳಿಗೆ ಪೂರೈಸಿದ್ದು ನಾವು: ಕೆ.ಎಸ್.ಈಶ್ವರಪ್ಪ

0

ಬೆಂಗಳೂರು: ಹಿಜಾಬ್-ಕೇಸರಿ ಶಾಲು ವಿವಾದ ರಾಜಕೀಯ ಮುಖಂಡರ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದ್ದು, ಶಾಲಾ ಮಕ್ಕಳಿಗೆ ಕೇಸರಿ ಶಾಲುಗಳನ್ನು ಪೂರೈಸಿದ್ದೇ ತಾವು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಐವತ್ತು ಲಕ್ಷ ಕೇಸರಿ ಶಾಲುಗಳನ್ನು ಸೂರತ್ ನಿಂದ ತರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ.ಆದರೆ ಅವರಿಗೆ ಸತ್ಯ ಗೊತ್ತಿಲ್ಲ . ಈ ಕೇಸರಿ ಶಾಲುಗಳನ್ನು ಸೂರತ್‌ನಿಂದ ತರಿಸಿಲ್ಲ, ಬದಲಿಗೆ ಅೋಂಧ್ಯೆಯ ಶ್ರೀರಾಮನ ಕಾರ್ಖಾನೆಯಿಂದ ಹನುಮಾನ್ ಟ್ರಾನ್ಸ್ ಪೋರ್ಟ್ ಮೂಲಕ ಕೇಸರಿ ಶಾಲುಗಳನ್ನು ತರಿಸಿ ಎಲ್ಲೆಡೆ ತಲುಪಿಸಿದ್ದೇ ನಾವು ಎಂದು ಅವರು ಹೇಳಿದ್ದಾರೆ.

ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಶಿವಮೊಗ್ಗದಲ್ಲಿ ಮಂತ್ರಿಯೊಬ್ಬರ ಮಗ ಶಾಲಾ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಪೂರೈಸಿದ್ದಾರೆ ಎಂದು ಆರೋಪಿಸಿದ್ದರು.

ಹಿಂದಿನ ಲೇಖನಶೇ.40 ರಷ್ಟು ಕಮೀಷನ್ ಪಡೆಯುತ್ತಿರುವುದೇ ಕಳಪೆ ಕಾಮಗಾರಿಗೆ ಕಾರಣ
ಮುಂದಿನ ಲೇಖನಹಿಜಾಬ್-ಕೇಸರಿ ಶಾಲು ವಿವಾದ ರಾಜಕೀಯ ತಿರುವು ಪಡೆದದ್ದು ನೋವಿನ ಸಂಗತಿ: ವಾಟಾಳ್ ನಾಗರಾಜ್