ಮನೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ದೇವೇಗೌಡರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ : ಸಿಎಂ ಬೊಮ್ಮಾಯಿ

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ದೇವೇಗೌಡರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ : ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ಪ್ರಸ್ತುತ ಸಾಲಿನಲ್ಲಿ ಬರಗೂರು ರಾಮಚಂದ್ರ ಸಮಿತಿ ಪರಿಷ್ಕರಿಸಿ ಪುಸ್ತಕಗಳನ್ನೇ ಪರಗಣಿಸಬೇಕೆಂದು ಮಾಜಿ ಪ್ರಧಾನಿ ದೇವೇಗೌಡರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರ ಸಲಹೆ ಗಂಭಿರವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ನಮಗೆಲ್ಲ ಹಿರಿಯರು. ಹೀಗಾಗಿ ದೇವೇಗೌಡರು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ. ನಾಳೆ ಶಿಕ್ಷಣ ಇಲಾಖೆ ಮುಖ್ಯಸ್ಥರ ಸಭೆ ನಡೆಸುತ್ತೇನೆ. ಏನೆಲ್ಲಾ ಮಾಡಲು ಸಾಧ್ಯವೋ ತೀರ್ಮಾನಿಸುತ್ತೇವೆ. ನಮ್ಮ ತೀರ್ಮಾನದ ನಂತರ ಮತ್ತೆ ದೇವೇಗೌಡರ ಪತ್ರಕ್ಕೆ ಉತ್ತರವಾಗಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ . . . ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಗಳನ್ನೇ ಮುಂದುವರಿಸಿ: ಹೆಚ್.ಡಿ. ದೇವೇಗೌಡರಿಂದ ಸಿಎಂಗೆ ಪತ್ರ

ಹಿಂದಿನ ಲೇಖನಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ: ಯೋಗ ತರಬೇತುದಾರ ಬಾಲು
ಮುಂದಿನ ಲೇಖನರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಘೋಷಣೆ