ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಲು ಅದು ನೀಡಿದ್ದ ‘ಗ್ಯಾರಂಟಿ’ ಆಶ್ವಾಸನೆಗಳೇ ಕಾರಣ ಎನ್ನಲಾಗುತ್ತಿದೆ.
ಇವೆಲ್ಲದರ ನಡುವೆ ಕಾಂಗ್ರೆಸ್ ಘೋಷಿಸಿದ್ದ ‘ಗ್ಯಾರಂಟಿ’ಗಳು ಗ್ಯಾರಂಟಿ ಸಿಗುತ್ತವೆಯಾ? ಅವು ಜಾರಿಗೆ ಬರಲಿವೆಯಾ? ಕೊಡಲು ಸಾಧ್ಯವೇ? ಪಕ್ಷದವರು ಮಾತು ಉಳಿಸಿಕೊಳ್ಳುವರೇ? ಎಂಬೆಲ್ಲ ಮಾತುಗಳೂ ಕೇಳಿ ಬರಲಾರಂಭಿಸಿವೆ. ಅವೆಲ್ಲವಕ್ಕೂ ಸ್ಪಷ್ಟನೆ ಎಂಬಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
ಟೀಮ್ ಕಾಂಗ್ರೆಸ್ ಕರ್ನಾಟಕದ ಜನರ ಪ್ರಗತಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯವನ್ನು ತರಲು ಬದ್ಧವಾಗಿದೆ. ಆರೂವರೆ ಕೋಟಿ ಕನ್ನಡಿಗರಿಗೆ ಭರವಸೆ ನೀಡಿದ ಐದೂ ‘ಗ್ಯಾರಂಟಿ’ಗಳನ್ನು ನಾವು ಜಾರಿಗೆ ತರುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ನಲ್ಲಿ ತಿಳಿಸಿದ್ದಾರೆ.