ಮನೆ ಅಪರಾಧ ಮಂಡ್ಯ CEN ಪೊಲೀಸರ ಕಾರ್ಯಾಚರಣೆ: 130 ಮೊಬೈಲ್ ಫೋನ್ ವಶ

ಮಂಡ್ಯ CEN ಪೊಲೀಸರ ಕಾರ್ಯಾಚರಣೆ: 130 ಮೊಬೈಲ್ ಫೋನ್ ವಶ

0

ಮಂಡ್ಯ: ಕೇಂದ್ರ ಸರ್ಕಾರ ಕಳೆದ ಐದಾರು ತಿಂಗಳ ಹಿಂದೆ ಇಡೀ ದೇಶದಲ್ಲಿ ಎಲ್ಲಿಯೇ ಮೊಬೈಲ್ ಕಳೆದು ಹೋದರು ಒಂದೇ ವೆಬ್ ಸೈಟ್ ​ನಲ್ಲಿ (Central Equipment Identity Register -CEIR) ತಾವಿದ್ದಲ್ಲಿಯೇ ದೂರು ದಾಖಲಿಸಬಹುದಾದ ಯೋಜನೆ ತಂದಿತ್ತು. ಈ ಮೂಲಕ ಜಿಲ್ಲೆಯಾದ್ಯಂತ ಕಳ್ಳತನವಾಗಿದ್ದ 130 ವಿವಿಧ ಮಾದರಿಯ ಮೊಬೈಲ್ ಫೋನ್​ಗಳ ಕುರಿತು ಸೆಂಟ್ರಲ್ ಎಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ (CEIR) ಮೂಲಕ ಸಾರ್ವಜನಿಕರು ದೂರು ದಾಖಲಿಸಿದ್ದರು.

Join Our Whatsapp Group

ಈ ದೂರಿನ್ವಯ CEN (Cyber Economic and Narcotics Crime Police) ಪೊಲೀಸರು 23 ಲಕ್ಷ ಮೌಲ್ಯದ 130 ಮೊಬೈಲ್ ಫೋನ್ ​ಗಳನ್ನು ಇದೀಗ ವಶಕ್ಕೆ ಪಡೆದು ಕಳೆದುಕೊಂಡ ಸಾರ್ವಜನಿಕರಿಗೆ ಹಿಂದುರಿಗಿಸಲಾಗಿದೆ.

CEN ಪೊಲೀಸ್ ಠಾಣಾ ಅರಕ್ಷಕ ಜಯಕುಮಾರ್ ನೇತೃತ್ವದದಲ್ಲಿ ಎಸ್ಪಿ ಎನ್.ಯತೀಶ್ ತಂಡ ರಚಿಸಿದ್ದರು. ಭರ್ಜರಿ ಕಾರ್ಯಾಚರಣೆ ಮೂಲಕ ಕಳೆದು ಹೋದ ಮೊಬೈಲ್​ನ್ನು ವಶ ಪಡಿಸಿಕೊಂಡಿದ್ದಾರೆ. ಇನ್ನು CEN ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಅವರು ಪ್ರಮಾಣ ಪತ್ರ ಕೊಟ್ಟು ಶ್ಲಾಘಿಸಿದ್ದಾರೆ.

ಇನ್ನು ಇದೇ ವೇಳೆ ಎಸ್ಪಿ ಮಾತನಾಡಿ ಮಂಡ್ಯ ಜಿಲ್ಲೆಯಾದ್ಯಂತ ಹಲವು ಮೊಬೈಲ್ ಫೋನ್ ಕಳ್ಳತನ ವಾಗಿದ್ದವು. CEIR ಪೋರ್ಟಲ್ ಮೂಲಕ ಪತ್ತೆ ಮಾಡಲಾಗಿದೆ. ಇನ್ನೂ ಕೆಲವು ಮೊಬೈಲ್ ಫೋನ್ ಟ್ರೇಸ್ ಮಾಡಲಾಗಿದೆ. ಫೋನ್ ಕಳ್ಳತನ ಮಾಡಿ ಬೇರೆ ಬೇರೆ ರಾಜ್ಯಕ್ಕೂ ಮಾರಾಟ ಮಾಡಿದ್ದರು. ಎಲ್ಲವನ್ನೂ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇನ್ನು ಸಾರ್ವಜನಿಕರು CEIR ಪೋರ್ಟಲ್ ಉಪಯೋಗಿಸಿಕೊಳ್ಳಿ, ಕಳುವಾದ ನಿಮ್ಮ ಫೋನ್​ಗಳ ಪತ್ತೆ ಮಾಡಲಾಗುವುದು ಎಂದು ಎಸ್ಪಿ ಮನವಿ ಮಾಡಿದರು.

ಹಿಂದಿನ ಲೇಖನಖಾಸಗಿಯವರ ಜಮೀನು ಸ್ವಾಧೀನಪಡಿಸಿಕೊಳ್ಳಲು ಭೂ ಸ್ವಾಧೀನ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶಿಸಲಾಗದು: ಹೈಕೋರ್ಟ್
ಮುಂದಿನ ಲೇಖನಐದೂ ‘ಗ್ಯಾರಂಟಿ’ಗಳನ್ನು ಜಾರಿಗೆ ತರುತ್ತೇವೆ: ಮಲ್ಲಿಕಾರ್ಜುನ ಖರ್ಗೆ