ಮನೆ ಮಕ್ಕಳ ಶಿಕ್ಷಣ ಬಾಲಗ್ರಹಗಳ ದೌರ್ಬಲ್ಯಗಳು

ಬಾಲಗ್ರಹಗಳ ದೌರ್ಬಲ್ಯಗಳು

0

ಪರಸ್ಪರ ಸಹಕಾರ

Join Our Whatsapp Group

ನಾಲ್ಕು ಮಂದಿ ಸಣ್ಣ ಮಕ್ಕಳನ್ನು ಒಂದು ಕಡೆ ಕೂರಿಸಿದಾಗ ಅವರ ಪೈಕಿ ಒಂದು ಮಗು ಅಳಲಾರಂಭಿಸಿದರೆ, ಉಳಿದ ಮೂರು ಮಕ್ಕಳು ಅಳ ತೊಡಗುತ್ತವೆ.ನಾಲ್ಕೂ ಮಕ್ಕಳು ಮನೆಯ ಸೂರು ಕಿತ್ತುಹೋಗುವ ಹಾಗೆ ಅಳುತ್ತಿರುತ್ತಾರೆ.ನಿಜ ಹೇಳಬೇಕೆಂದರೆ ಆ ಉಳಿದ ಮೂರು ಮಕ್ಕಳಿಗೆ ಯಾವುದೇ ಸಮಸ್ಯೆಯಿಲ್ಲ ಹೊಟ್ಟೆ ತುಂಬಾ ಹಾಲು ಕುಡಿದಿದ್ದರೆ ಮತ್ತೇಕೆ ಅಳುತ್ತಿದ್ದಾರೆಂಬ  ಪ್ರಶ್ನೆಗೆ ಒಂದೇ ಉತ್ತರ ತಮ್ಮ ಗೆಳೆಯನಿಗೆ ಏನೋ ಕಷ್ಟ ಬಂದಿರಬಹುದೆಂದು ಭಾವಿಸಿದಷ್ಟೇ.ಆ ಆಲೋಚನೆ ಕಾಲ ಕ್ರಮೇಣವಾಗಿ ಕಡಿಮೆಯಾಗುತ್ತಾ ದೊಡ್ಡವರಾದ ಮೇಲೆ ಒಬ್ಬರು ಅಳುತ್ತಿದ್ದರೆ, ಉಳಿದವರು ನಗುವ ಪರಿಸ್ಥಿತಿ ಉಂಟಾಗುತ್ತದೆ.ಕಷ್ಟದಲ್ಲಿರುವ ಮನುಷ್ಯನ ಸ್ಥಾನದಲ್ಲಿ ತನ್ನನ್ನು ಊಹಿಸಿಕೊಂಡು, ಕೈಲಾದ ಸಹಾಯ ಮಾಡುವ ಪರಿಸ್ಥಿತಿ ಗಣನೀಯವಾಗಿ ಕಡಿಮೆಯಾಗುತ್ತದೆ.ಆದರೆ, ಇಂದಿಗೂ ಪ್ರಾಣಿಗಳಲ್ಲಿ ಪರಸ್ಪರ ಸಹಾಯ, ಸಹಕಾರ ಮಾಡಿಕೊಳ್ಳುವ ಅಭ್ಯಾಸ ಇದೆ.

 ಹುಚ್ಚು ಆಲೋಚನೆಗಳು :

     ಒಮ್ಮೆ ಮಹಾರಾಜನೊಬ್ಬರಿಗೆ ಇದ್ದಕ್ಕಿದ್ದ ಹಾಗೆ ನನ್ನ ಪ್ರಜೆಗಳ ಮೇಲೆ ಮಮಕಾರ ಬೆಳೆದು, ಅವರಿಗೆ ಒಳ್ಳೆಯ ಸೇವೆ ಮಾಡಬೇಕೆಂಬ ಬಯಕೆ ಯುಂಟಾಯಿತಂತೆ ಆ ವಿಷಯವನ್ನು ತಿಳಿದುಕೊಂಡ ಮಂತ್ರಿ ಬಹಳ ಸಂತೋಷಗೊಂಡು “ಮಹಾರಾಜರೇ, ನೀವು ನಮ್ಮ ಪ್ರಜೆಗಳ ಮಧ್ಯೆ ಓಡಾಡುತ್ತಿದ್ದರೆ ಸಾಕು, ಅದೇ ಒಂದು ಸೇವೆ.ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ ನಿಮಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತೇನೆ’ ಎಂದು ಹೇಳಿ, ಎಂದಾದರೂಮ್ಮೆ ಅವುಗಳನ್ನು ಮಾಡೋಣ ”ಎಂದು ಸಲಹೆ ನೀಡಿದ ಪ್ರಜೆಗಳು ನೋಡಲು ಹಳ್ಳಿಗಾಡು, ಗ್ರಾಮಗಳಲ್ಲಿ ಪರ್ಯಟನೆ ಮಾಡಬೇಕೆಂದರೆ, ಹೋಗಿ ಬರುವ ದಾರಿಗಳಲ್ಲಿ ಕಲ್ಲು ಮುಳ್ಳುಗಳಿರುತ್ತವೆಯಲ್ಲಾ, ನಾನು ನಡೆಯುವುದಾದರೂ ಹೇಗೆ…? ” ಎಂದ ರಾಜ.ಅದಕ್ಕೆ ಮಹಾರಾಜರ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುವ ಮತ್ತೊಬ್ಬ ಮಂತ್ರಿ “ಅದಕ್ಕೇಕೆ  ಚಿಂತೆ ಮಾಡುತ್ತೀರಿ ಬಿಡಿ ಮಹಾರಾಜ. ನಮ್ಮ ರಾಜ್ಯದಲ್ಲಿರುವ ಎಲ್ಲಾ ಹಸುಗಳನ್ನು ಕೊಂದು, ಅವುಗಳ ಚರ್ಮವನ್ನು ನೆಲದ ಮೇಲೆ ಹಾಸಿದರೆ ಎಲ್ಲಾ ಗ್ರಾಮಗಳನ್ನು ಅನಾಯಾಸವಾಗಿ ಸುತ್ತಿ ಬರಬಹುದು” ಎಂಬ ಸಲಹೆ ನೀಡಿದ

      ಅದನ್ನು ಕೇಳಿ ರಾಜರು ಬಹಳ ಸಂತೋಷವಗೊಂಡು ತಮ್ಮ ಕತ್ತಿನಲ್ಲಿದ್ದ ಮುತ್ತಿನಹಾರವನ್ನು ಆ ಮಂತ್ರಿ ಕಡೆಗೆ ಎಸೆದರು. ಅಷ್ಟೇ! ಹಸುಗಳನ್ನು ಸಾಯಿಸಬೇಕೆಂಬ ಆಜ್ಞೆಯನ್ನು ಜಾರಿಗೊಳಿಸಲಾಯಿತು. ಅದನ್ನು ಕೇಳಿದ ಒಬ್ಬ ಗೊಲ್ಲರ ಹುಡುಗನು ರಾಜರ ಬಳಿಗೆ ಬಂದು ಅಳುತ್ತಾ  “ನಮ್ಮ ಹಸುಗಳನ್ನು ಸಾಯಿಸಬೇಡಿ ಮಹಾರಾಜ” ಎಂದು ಕೈ ಮುಗಿದು ಬೇಡಿಕೊಂಡ. ಅದಕ್ಕೆ ಆ ಮಂತ್ರಿ “ಹಾಗಾದ್ರೆ ನಿನ್ನನ್ನು ಸಾಯಿಸು ಎನ್ನುತ್ತಿಯಾ….? ” ಎಂದನು ವ್ಯಂಗ್ಯವಾಗಿ ಅದಕ್ಕೆ ಆ ಬಾಲಕ “ರಜಾ!ಇದಕ್ಕೊಂದು ಒಳ್ಳೆಯ ಉಪಾಯವಿದೆ.ದೇಶದಲ್ಲಿನ ಎಲ್ಲಾ ಹಸುಗಳನ್ನು ಸಾಯಿಸಿ, ದೇಶ ಬಂಜೆಯಾಗುವಂತೆ ಮಾಡುವುದಕ್ಕಿಂತ,ಒಂದು ಹಸುವನ್ನು ಸಾಯಿಸಿ, ಅದರ ಚರ್ಮದಿಂದ ನಿಮ್ಮ ಕಾಲಿಗೆ ಪಾದರಕ್ಷೆಯನ್ನು ತಯಾರು ಮಾಡಿಸಿ. ಅವುಗಳಿಂದ ನೀವು ಎಲ್ಲೇ ಸುತ್ತಾಡಿದರು ನಿಮ್ಮ ಪಾದಗಳು ಕೋಮಲವಾಗಿ, ಮೃದುವಾಗಿಯೇ ಇರುತ್ತವೆಯೆಂದು ಸಲಹೆ ನೀಡಿದ. ಇದನ್ನು ಕೇಳಿಸಿಕೊಂಡ ಮಂತ್ರಿಗಳು ನಾಚಿಕೆಯಿಂದ ತಲೆತೆಗ್ಗಿಸಿಕೊಂಡರು.

 ಗುರುತಿಸಿಕೊಳ್ಳುವ ತವಕ :

     ಮಕ್ಕಳು ತಾಯಿ ತಂದೆಯರನ್ನು ಬೆದರಿಸುವುದು,ಆತ್ಮಹತ್ಯೆ ಪ್ರಯತ್ನಿಸುವುದಾಗಿ ಪತ್ರಗಳನ್ನು ಬರೆಯುವುದು ಪರಿಚಯವಿಲ್ಲದವರನ್ನು ಚಾಟಿಂಗ್ ಮೂಲಕ ಪ್ರೀತಿಸುವುದು, ಆತ್ಮೀಯರೊಂದಿಗೆ ತನಗಾರೂ ಇಲ್ಲವೆಂದು ಹೇಳುವುದು, ಕರುಣೆ, ಸಹಾನುಭೂತಿಯಾಗಿ ಪ್ರಯತ್ನಿಸುವುದು, ಇವು ಹೆತ್ತವರಿಗೆ ತುಂಬಾ ನೋವುಂಟು ಮಾಡುತ್ತವೆ. ಈ ರೀತಿಯಾಗಿ ಚಿತ್ರ ವಿಚಿತ್ರವಾಗಿ ಪರಿವರ್ತಿಸುವ ಸಮಸ್ಯೆಯನ್ನು ಮಾನಶಾಸ್ತ್ರದಲ್ಲಿ “ಕ್ರೈ ಫಾರ್ ಅಟೆನ್ಷನ್” ಎನ್ನುತ್ತಾರೆ. ತನ್ನ ಸಮಸ್ಯೆಯ ಬಗ್ಗೆ ಇತರರು ಗಮನ ನೀಡಬೇಕೆಂದು, ತಲೆ ಕೆಡಿಸಿಕೊಳ್ಳಬೇಕೆಂದು, ಸೂಕ್ತ ಮನ್ನಣೆ ನೀಡಬೇಕೆಂದು, ಗುರುತಿಸಬೇಕೆಂದು,ಪಡುವ ತಾಪತ್ರಯದಲ್ಲಿ ಕೆಲವು ಮಂದಿ ಅಸಾಧಾರಣ  ಪ್ರಕ್ರಿಯೆಯನ್ನು ಕೈಗೊಳ್ಳುತ್ತಿರುತ್ತಾರೆ.ಕೆಲವು ಸಂದರ್ಭಗಳಲ್ಲಿ ಇದ್ದು ವರ್ಕ್ ಔಟ್ ಆಗಬಹುದಾದರೂ, ಎಲ್ಲಾ ಸಮಯಗಳಲ್ಲಿ ಸಾಧ್ಯ ವಾಗಲಾರದು.ಅಂತಹ ಸಮಯಗಳಲ್ಲಿ  ಅವರು ಅಪಾಯಕಾರಿ ಕೆಲಸಗಳಿಗೆ ಕೈ ಹಾಕಬಾರದು.

      ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ತಾವಿರುವ ನಗರ ಪಟ್ಟಣಗಳಲ್ಲಿನ ನೀರಿನ ಟ್ಯಾಂಕ್ ಗಳು, ವಾಟರ್ ಗಳನ್ನು ಹತ್ತಿ, ಜನರೆಲ್ಲಾ ಗುಂಪು ಸೇರಿದ ಮೇಲೆ “ನಾನು ಇಲ್ಲಿಂದ ಕೆಳಕ್ಕೆ ಬಿದ್ದು ಸಾಯ್ತಿನಿ, ಸಾಯ್ತಿನಿ…. ” ಎನ್ನುತಾ ಬಿದರಿಸುವುದನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ.ಜನರು “ಬೇಡಯ್ಯ…. ಕೆಳಕ್ಕಿಳಿದು ಬಿಡಪ್ಪಾ” ಎಂದು ಅಂಗಲಾಚುವುದು. ಅದಕ್ಕೆ ಆತ “ನನ್ನ ಹೆಂಡತಿಗೆ ಹೇಳಿ, ನನ್ನನ್ನು ಸರಿಯಾಗಿ ನೋಡಿಕೋ ಅಂತ…..” ಅಥವಾ “ನಮ್ಮ ಚಿಕ್ಕಪ್ಪನಿಗೆ ಹೇಳಿ ನನಗೆ ಸರಿಯಾಗಿ ಪಾಕೆಟ್ ಮನಿ ಕೊಡೂಂತಾ… ” ಇಂತಹ ಕ್ಷುಲ್ಲಕ ಕೋರಿಕೆಗಳನ್ನು ಬಯಸುತ್ತಾರೆ.ಅದಕ್ಕೆ ಜನರು ಮತ್ತೆ ಅಂಗಲ್ಲಾಚುತ್ತಾ ನಾವೇಗಾದರೂ  ಮಾಡಿ ನಿಮ್ಮವರನ್ನು ಇದಕ್ಕೆ ಒಪ್ಪಿಸುತ್ತೇವೆ ಎಂದು ಸಮಾಧಾನಪಡಿಸಿ ಅವನನ್ನು ನಿಧಾನವಾಗಿ ಕೆಳಗಿಳಿಸುತ್ತಾರೆ. ಹಾಗಲ್ಲದೆ ಯಾರೊಬ್ಬರೂ ಅವನನ್ನು ನೋಡದ ಹಾಗೆ,,ಕಡಗಣಿಸಿದರೆ ಬಂದವರು ಬಂದ ದಾರಿಯಲ್ಲಿ ಹಿಂದಿರುಗಿದರೆ ಅವನು ಬೇರೆ ವಿಧಿ ಯಿಲ್ಲದೆ ಕೆಳಕ್ಕೆ ಇಳಿದೇ ಇಳಿಯುತ್ತಾನೆ. ಆದರೆ ನಮ್ಮ ಜನ ಹಾಗೆಲ್ಲ ಮಾಡುವುದಿಲ್ಲ.

       ಕೆಲವು ಸಂಸಾರಗಳಿಲ್ಲಿ ಗಂಡನ ಮನೆಗೆ ಕೋಪ ಮಾಡಿಕೊಂಡು ಹೆಂಡತಿ ಅಥವಾ ಹೆಂಡತಿ ಮೇಲೆ ಕೋಪ ಮಾಡಿಕೊಂಡು ಗಂಡ ಅಥವಾ ತಾಯಿ ತಂದೆಯರ ಮೇಲೆ ಕೋಪ ಬಂದು ಮಕ್ಕಳು ಊಟ ಮಾಡದಿರುವುದು ಕೂಡಾ“ ಕ್ರೈ ಫಾರ್ ಅಟೆನ್ಷನ್”  ನೊಳಕ್ಕೇ ಬರುತ್ತದೆ. ಇಂತಹ ಪದತಿಗಳನ್ನು ಅವರು ತ್ಯಜಿಸಬೇಕು. ಏಕೆಂದರೆ ಈ ಪದ್ಧತಿಯೇ ಅಭ್ಯಾಸವಾಗಿ ಬಿಟ್ಟರೆ ಹೊರಗಡೆ ಕೂಡಾ ಇದನ್ನೇ ಮಾಡಬೇಕೆನಿಸುತ್ತದೆ.

 ಮಕ್ಕಳನ್ನು ಅಳಗೊಡಬೇಕೆ…..?

     ಅಮೆರಿಕದಲ್ಲಿ ಮಕ್ಕಳು ಅತ್ತಾಗ “ಅವರನ್ನು ಅಂಗಲಾಚಬೇಡಿ,ಳ್ಳಹೆಚ್ಚು ಮುದ್ದು ಮಾಡಬೇಡಿ, ಅಳಲು ಬಿಡಿ. ಅಲ್ಲಿಗೂ ಅಳು ನಿಲ್ಲಿಸಸದಿದ್ದರೆ ಬೇರೆ ಕೋಣೆಯಲ್ಲಿ ಕುಳ್ಳಿರಿಸಿ ಲೇಟ್ ದೆಮ್ ಕ್ರೈ”ಎಂಬ ಪದತಿಯನ್ನು ಅನುಸರಿಸುತ್ತಿದ್ದರು.ಅದೊಂದು ಅಭ್ಯಾಸವಾಗಿ ಕೂಡಾ ಬದಲಾಯಿತು. ಆದರೆ, ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಇಬ್ಬರು ಮನಶಾಸ್ತ್ರತಜ್ಞರಾದ ಡಾಕ್ಟರ್ ಮೈಕಲ್ ಮನ್, ಡಾಕ್ಟರ್ ವಿಲ್ಲರ್ ಅವರುಗಳು ಆ ಪದತಿ “ಅನಾಗರಿಕ ಮತ್ತು ಅಮಾನುಷ” ಎಂದು ತಿಳಿಸಿದರು.ಅವರ ಸಂಶೋಧನೆಯಲ್ಲಿ ಸ್ಪಷ್ಟವಾದದ್ದೇನೆಂದರೆ, ಮಕ್ಕಳನ್ನು ಬೇರೆ ಕೋಣೆಯಲ್ಲಿಟ್ಟರೂ ಕತ್ತಲಿನ ಕೋಣೆಯಲ್ಲಿ ಕೂಡಿ ಹಾಕಿದರೂ. ಭಯಪಟ್ಟುಕೊಂಡು, ಅಂಜು ಬುರುಕರಾಗಿ ಮಾನಸಿಕರೋಗ ಸಮಸ್ಯೆಗೊಳಗಾಗಬಹುದೆಂದು ತಿಳಿಸಿದರು. ಸರ್ಕಾರ ಕೂಡಾ ಅದನ್ನು ಗುರುತಿಸಿ ಮಕ್ಕಳನ್ನು ಕತ್ತಲ ಕೋಣೆಯಲ್ಲಿಟ್ಟಿರೂ ಅತಿಯಾಗಿ ದಂಡಿಸಿದರೂ ಅದನ್ನು ಅಪರಾಧವೆಂದು  ಪರಿಗಣಿಸುತ್ತಾರಲ್ಲದೆ ತರ ಆ ತಾಯಿ ತಂದೆಯರಿಗೆ ಕಠಿಣ ಶಿಕ್ಷೆಯನ್ನು ಕೂಡಾ ವಿಧಿಸಲಾಗುತ್ತದೆ. ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ಈ ವಿಷಯದ ಬಗ್ಗೆ ತಿಳಿಸಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳನ್ನು ಕೂಡಾ ನೀಡಿದ್ದಾರೆ.

     ಫ್ಲೋರಿಡಾ ಯುನಿವರ್ಸಿಟಿಯಿಂದ ಪ್ರಕಟಗೊಳ್ಳುವ “ದಿ ಜರ್ನಲ್ ಆಫ್ ಟ್ರಾಮಾಟಾಲಜಿಯ” ಎಂಬ ಪುಸ್ತಕದಲ್ಲಿ ಮಕ್ಕಳು ತಪ್ಪು ಮಾಡಿದಾಗ ಬೆದರಿಸಿದೆ, ಅವರನ್ನು ಹತ್ತಿರಕ್ಕೆ ಕರೆದು ನಯವಾಗಿ ಎಚ್ಚರಬೇಕೆಂದು ತಿಳಿಸದೆ.ಬೆದರಿಸಿದರೆ ತಮ್ಮ ತಾಯಿ ತಂದೆಯರನ್ನು ಕೂಡಾ ಬ್ಲಾಕ್ ಮೇಲ್ ಮಾಡಬಹುದಂತೆ.