ಮನೆ ಸುದ್ದಿ ಜಾಲ 73ನೇ ಗಣರಾಜ್ಯೋತ್ಸವದ ಪರೇಡ್’ಗೆ ಕ್ಷಣಗಣನೆ:ಹೆಚ್ಚಿದ ಭದ್ರತೆ

73ನೇ ಗಣರಾಜ್ಯೋತ್ಸವದ ಪರೇಡ್’ಗೆ ಕ್ಷಣಗಣನೆ:ಹೆಚ್ಚಿದ ಭದ್ರತೆ

0

ನವದೆಹಲಿ: ದೇಶದಾದ್ಯಂತ 73ನೇ ಗಣರಾಜ್ಯೋತ್ಸವ ದಿನದ ಸಂಭ್ರಮ ಮನೆ ಮಾಡಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

ದೆಹಲಿ ಪೊಲೀಸರು ಎಲ್ಲೆಡೆ ತಪಾಸಣೆ ನಡೆಸುತ್ತಿದ್ದು, ಬ್ಯಾರಿಕೇಡ್‌ ಅಳವಡಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ದೆಹಲಿ-ನೋಯ್ಡಾ ಗಡಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಹನಗಳನ್ನು ಪರಿಶೀಲನೆ ನಡೆಸಿ ಬಿಡಲಾಗುತ್ತಿದೆ. ಪರೇಡ್ ಸಾಗುವ ಮಾರ್ಗದಲ್ಲಿ ಸಿಸಿಟಿವಿಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಡಿಸಿಪಿ ಶ್ವೇತಾ ಚೌಹಾಣ್ ಮಾಹಿತಿ ನೀಡಿದ್ದಾರೆ.

ದೇಶದ ಕಲೆ, ಸಂಸ್ಕೃತಿ, ಸೇನಾ ಸಾಮರ್ಥ್ಯವನ್ನು ದೇಶ ಮತ್ತು ಜಗತ್ತಿನ ಮುಂದೆ ತೆರೆದಿಡುವ 73ನೇ ಗಣರಾಜ್ಯೋತ್ಸವಕ್ಕೆ ದೆಹಲಿಯ ರಾಜಪಥ ಸಜ್ಜಾಗಿದೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷವಾದ ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯ ದಿನವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ರಾಜಪಥದಲ್ಲಿನ ಗಣರಾಜ್ಯೋತ್ಸವ  ಪಥಸಂಚಲನಕ್ಕೆ ಇಂಡಿಯಾ 75 ಥೀಮ್ ನೀಡಲಾಗಿದೆ. 

ಕೊರೋನಾ ಕಾರಣ ತಪಾಸಣೆ ಮತ್ತು ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವ ಹಿನ್ನೆಲೆಯಲ್ಲಿ ರಾಜಪಥದ ಪಥ ಸಂಚನಕ್ಕೆ 30 ನಿಮಿಷ ವಿಳಂಬವಾಗಿ ಅಂತರೆ 10.30ಕ್ಕೆ ಆರಂಭವಾಗಲಿದೆ. ರಾಜಪಥದಲ್ಲಿ ಮುಖ್ಯ ಸಮಾರಂಭ ನಡೆಯಲಿದ್ದು, ಈ ಸಮಾರಂಬಕ್ಕೆ ಶಂಕಿತರು ನುಸುಳಕೂಡದು ಎಂದು ನಿಗಾವಹಿಸಲಾಗಿದೆ. 50 ಸಾವಿರ ಶಂಕಿತ ಕ್ರಿಮಿನಲ್ ಗಳ ಚಹರೆ ಹಾಗೂ ದತ್ತಾಂಶಗಳು ಇರುವ 30 ಫೇಸ್ ರೆಕಗ್ನಿಷನ್ ಸಿಸ್ಟಂ ಗಳನ್ನು ಅಳವಡಿಸಲಾಗಿದೆ. ಇಂತಹ ವ್ಯಕ್ತಿಗಳು ಇಲ್ಲಿಗೆ ಬಂದಿದ್ದೇ ಆದರೆ, ಕೂಡಲೇ ಅವರನ್ನು ಭದ್ರತಾ ಪಡೆಗಳು ಪತ್ತೆ ಮಾಡುತ್ತವೆ. 

6 ಪ್ರವೇಶ ದ್ವಾರ ಹಾಗೂ 16 ಸೇತುವೆಗಳ ಬಳಿ ಇವುಗಳನ್ನು ಅಳವಡಿಸಲಾಗಿದೆ. ಸಮಾರಂಭದ ಮೇಲೆ ಹದ್ದಿನ ಕಣ್ಣಿಡಲು ರಾಜಪಥದ ಸುತ್ತ 500 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ. ದೆಹಲಿ ಪೊಲೀಸರ 30 ಸಾವಿರ ಸಿಬ್ಬಂದಿ, 65 ಪ್ಯಾರಾ ಮಿಲಿಟರಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. 71 ಡಿಸಿಪಿಗಳು, 213 ಎಸಿಪಿಗಳು, 753 ಇನ್ಸ್ ಪೆಕ್ಟರ್ ಗಳು ಭದ್ರತೆ ಉಸ್ತುವಾರಿ ವಹಿಸಿದ್ದಾರೆ. ಸಂಭಾವ್ಯ ಉಗ್ರ ದಾಳಿ ತಡೆಗೆ ಉಗ್ರ ನಿಗ್ರಹಕ್ಕೆ 26 ಮಾನದಂಡ ಅನುಸರಿಸಲಾಗಿದೆ. ದೆಹಲಿಗೆ ಬಂದು ಹೋಗುವವರ ಮೇಲೆ ನಿಗಾ ಇರಿಸಲಾಗಿದೆ.

ಹಿಂದಿನ ಲೇಖನ73ನೇ ಗಣರಾಜ್ಯೋತ್ಸವ: ಶುಭಾಶಯ ಕೋರಿದ ಅಮೆರಿಕಾದ ಶ್ವೇತಭವನ
ಮುಂದಿನ ಲೇಖನರಾಜ್ಯದ ಐವರಿಗೆ ಪದ್ಮ ಶ್ರೀ ಪದ್ಮಶ್ರೀ,  ಬಿಪಿನ್ ರಾವತ್ ಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ