ಮನೆ ಸ್ಥಳೀಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಗಜಪಡೆಯ ತೂಕ ಪರೀಕ್ಷೆ

ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಗಜಪಡೆಯ ತೂಕ ಪರೀಕ್ಷೆ

0

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಗಜಪಡೆಗೆ ಬುಧವಾರ ತೂಕ ಪರೀಕ್ಷೆ ಮಾಡಲಾಯಿತು.

ಹಿರಿಯ ಆನೆ ಈ ಹಿಂದೆ ಅಂಬಾರಿ ಹೊರುತ್ತಿದ್ದ ಅರ್ಜುನನೇ ಹೆಚ್ಚು ತೂಕ ಹೊಂದಿರುವ ಆನೆಯಾಗಿದೆ. ಈ ಬಾರಿ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಅಭಿಮನ್ಯು 5460 ಕೆಜಿ ತೂಕ ಹೊಂದಿದ್ದಾನೆ.

ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಹಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ ನಲ್ಲಿ ಡಿಸಿಎಫ್ ಸೌರಭ್ ಕುಮಾರ್ ಸಮ್ಮುಖದಲ್ಲಿ 14 ಆನೆಗಳ ತೂಕ ಪರೀಕ್ಷೆ ಮಾಡಲಾಯಿತು.

ಅರ್ಜುನ- 5850 ಕೆ ಜಿ ತೂಕ ಹೊಂದಿದ್ದು, ಸುಗ್ರೀವ – 5310 ಕೆ ಜಿ, ಗೋಪಿ – 5240, ಧನಂಜಯ – 5180, ಕಂಜನ್ – 4505, ಹಿರಣ್ಯ – 3025, ರೋಹಿತ್ – 3620, ಪ್ರಶಾಂತ್ – 5215, ವಿಜಯ – 2845, ಭೀಮ – 4870, ಲಕ್ಷ್ಮೀ – 3365, ಮಹೇಂದ್ರ – 4835, ವರಲಕ್ಷ್ಮೀ – 3225 ತೂಕ ಹೊಂದಿವೆ.

ದಸರಾ ಆನೆಗಳ ಮೊದಲ ತಂಡ ಸೆ. 7ರಂದು ಮೈಸೂರು ಅರಮನೆ ಆವರಣಕ್ಕೆ ಆಗಮಿಸಿದಾಗ ತೂಕ ಮಾಡಿದಾಗ ಕ್ಯಾಪ್ಟನ್ ಆನೆ ಅಭಿಮನ್ಯು 5,160 ಕೆಜಿ ತೂಕ ಹೊಂದಿದ್ದ ಈಗ 300 ಕೆಜಿ ತೂಕ ಏರಿಸಿಕೊಂಡಿದೆ.