ಮನೆ ಕ್ರೀಡೆ ವಿಂಡೀಸ್‌ ವಿರುದ್ಧದ ಕೊನೆಯ ಏಕದಿನ ಪಂದ್ಯ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ

ವಿಂಡೀಸ್‌ ವಿರುದ್ಧದ ಕೊನೆಯ ಏಕದಿನ ಪಂದ್ಯ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ

0

ಪೋರ್ಟ್ ಆಫ್ ಸ್ಪೇನ್ (Port of Spain): ವೆಸ್ಟ್ ಇಂಡೀಸ್ ಎದುರಿನ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಈಗಾಗಲೇ ಸರಣಿಯನ್ನು 2-0 ಅಂತರದಲ್ಲಿ ಸರಣಿ ಗೆದ್ದಿರುವುದಲ್ಲದೆ, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸತತ 12ನೇ ಸರಣಿ ಗೆಲುವಿನ ವಿಶ್ವದಾಖಲೆಯ ಸಂಭ್ರಮದಲ್ಲಿರುವ ಭಾರತ ತಂಡ ಕೊನೆಯ ಪಂದ್ಯದಲ್ಲಿ ಗೆದ್ದು ಕ್ಲೀನ್‌ಸ್ವೀಪ್ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.

ಈ ಪಂದ್ಯಕ್ಕೆ ಭಾರತ ಪ್ಲೆಯಿಂಗ್‌ ಇಲೆವೆನ್‌ನಲ್ಲಿ ಒಂದು ಬದಲಾವಣೆ ತರಲಾಗಿದೆ. ಆವೇಶ್‌ ಖಾನ್‌ ಬದಲು ಪ್ರಸಿಧ್‌ ಕೃಷ್ಣ ಆಡುವ ಬಳಗಕ್ಕೆ ಮರಳಿದ್ದಾರೆ.

ಇನ್ನು ಎದುರಾಳಿ ವೆಸ್ಟ್ ಇಂಡೀಸ್‌ ತಂಡದಲ್ಲಿ ಮೂರು ಬದಲಾವಣೆ ತರಲಾಗಿದೆ. ಅಲ್ಜಾರಿ ಜೋಸೆಫ್‌, ರೊವ್ಮನ್‌ ಪೊವೆಲ್‌ ಹಾಗೂ ರೊಮ್ಯಾರಿಯೊ ಶೆಫರ್ಡ್‌ ಅವರ ಸ್ಥಾನಕ್ಕೆ ಜೇಸನ್‌ ಹೋಲ್ಡರ್‌, ಕೀಸಿ ಕಾರ್ಟಿ ಹಾಗೂ ಕೀಮೋ ಪಾಲ್‌ ಪ್ಲೇಯಿಂಗ್‌ ಇಲೆವೆನ್‌ಗೆ ಮರಳಿದ್ದಾರೆ.

ಪಿಚ್‌ ರಿಪೋರ್ಟ್‌: ಮೂರನೇ ಏಕದಿನ ಪಂದ್ಯ ಕೂಡ ಟ್ರಿನಿಡಾಡ್‌ನ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆಯಲಿದೆ. ಕಳೆದ ಎರಡೂ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿತ್ತು. ಅದೇ ರೀತಿ ಮೂರನೇ ಪಂದ್ಯದಲ್ಲಿಯೂ ಕೂಡ ಉಭಯ ತಂಡಗಳಿಂದ 300 ಆಸುಪಾಸಿನಲ್ಲಿ ರನ್‌ ದಾಖಲಾಗುವ ಸಾಧ್ಯತೆ ಇದೆ.