ಭಾರತೀಯ ರೈಲ್ವೆಯಲ್ಲಿನ ಗ್ರೂಪ್ ಡಿ ಹುದ್ದೆಗಳು ಯಾವುವು? ಯಾವೆಲ್ಲ ವಿಭಾಗಗಳಲ್ಲಿ ಗ್ರೂಪ್ ಡಿ ಹುದ್ದೆಗಳಿವೆ, ವಿದ್ಯಾರ್ಹತೆ ಏನು? ಈ ಹುದ್ದೆಗಳಿಗೆ ವೇತನ ಎಷ್ಟು ಸಿಗಲಿದೆ ಎಂಬುದರ ಕುರಿತು ಈ ಕೆಳಗಿನಂತೆ ಮಾಹಿತಿ ನೀಡಲಾಗಿದೆ.
ರೈಲ್ವೆಯಲ್ಲಿನ ಗ್ರೂಪ್ ಡಿ ಹುದ್ದೆಗಳ ಲಿಸ್ಟ್
ಅಸಿಸ್ಟಂಟ್ (ವರ್ಕ್ಶಾಪ್) (ಮೆಕ್ಯಾನಿಕಲ್ ವಿಭಾಗ)
ಅಸಿಸ್ಟಂಟ್ ಬ್ರಿಡ್ಜ್ (ಇಂಜಿನಿಯರಿಂಗ್ ವಿಭಾಗ)
ಅಸಿಸ್ಟಂಟ್ ಸಿ ಅಂಡ್ ಡಬ್ಲ್ಯೂ (ಮೆಕ್ಯಾನಿಕಲ್ )
ಅಸಿಸ್ಟಂಟ್ ಲೋಕೋ ಶೆಡ್ (ಇಲೆಕ್ಟ್ರಿಕಲ್ ವಿಭಾಗ)
ಅಸಿಸ್ಟಂಟ್ ಆಪರೇಷನ್ಸ್ (ಇಲೆಕ್ಟ್ರಿಕಲ್)
ಅಸಿಸ್ಟಂಟ್ ಪಾಯಿಂಟ್ಸ್’ಮನ್ (ಟ್ರಾಫಿಕ್ ವಿಭಾಗ)
ಅಸಿಸ್ಟಂಟ್ ಸಿಗ್ನಲ್ ಮತ್ತು ಟೆಲಿಕಾಂ ವಿಭಾಗ
ಅಸಿಸ್ಟಂಟ್ ಡಿಪಾಟ್ (ಸ್ಟೋರ್ಸ್ )
ಅಸಿಸ್ಟಂಟ್ ಟ್ರ್ಯಾಕ್ ಮಷಿನ್ (ಇಂಜಿನಿಯರಿಂಗ್ ವಿಭಾಗ)
ಹಾಸ್ಪಿಟಲ್ ಅಸಿಸ್ಟಂಟ್ (ಮೆಡಿಕಲ್ ವಿಭಾಗ)
ಅಸಿಸ್ಟಂಟ್ ಲೋಕೋ ಶೆಡ್ (ಡೀಸೆಲ್) (ಮೆಕ್ಯಾನಿಕಲ್ ವಿಭಾಗ)
ಟ್ರ್ಯಾಕ್ ಮೇಂಟೆನರ್ ಗ್ರೇಡ್ 4 (ಇಂಜಿನಿಯರ್ ವಿಭಾಗ)
ಇಲೆಕ್ಟ್ರಿಕಲ್ ವಿಭಾಗದ ಇತರೆ ಅಸಿಸ್ಟಂಟ್ ಹುದ್ದೆಗಳು
ಗ್ರೂಪ್ ಡಿ ಹುದ್ದೆಗಳ ವೇತನ ಶ್ರೇಣಿ ಎಷ್ಟು?
ರೈಲ್ವೆ ಗ್ರೂಪ್ ಡಿ ಪೇ-ಲೆವೆಲ್ 1 ಹುದ್ದೆಗಳಿಗೆ 7ನೇ ವೇತನ ಆಯೋಗದ ಪ್ರಕಾರ ರೂ.5,200-20,200 ವರೆಗೆ ವೇತನ ಶ್ರೇಣಿ ಇರುತ್ತದೆ. ಬೇಸಿಕ್ ಪೇ ರೂ.18,000, ತುಟ್ಟಿ ಭತ್ಯೆ ರೂ.3,060, ಗ್ರೇಡ್ ಪೇ ರೂ.1800, ಮನೆ ಬಾಡಿಗೆ ಭತ್ಯೆ ಶೇಕಡ.8-24 ಪ್ರಕಾರ, ಪ್ರಯಾಣ ಭತ್ಯೆಯೂ ಸೇರಿದಂತೆ ಒಟ್ಟು ವೇತನ ರೂ.22-500- 25,380 ವರೆಗೆ ಮಾಸಿಕ ಇರಲಿದೆ.
ರೈಲ್ವೆ ಗ್ರೂಪ್ ಡಿ ಹುದ್ದೆಗೆ ವಿದ್ಯಾರ್ಹತೆ ಏನಿರಬೇಕು?
ಕನಿಷ್ಠ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ರೈಲ್ವೆ ಗ್ರೂಪ್ ಡಿ ಹುದ್ದೆಗಳ ಪೈಕಿ ಯಾವ ಹುದ್ದೆ ಬೆಸ್ಟ್?
ರೈಲ್ವೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವರ ಪ್ರಕಾರ ಗ್ರೂಪ್ ಡಿ ಹುದ್ದೆಗಳ ಪೈಕಿ ಅಸಿಸ್ಟಂಟ್ ವರ್ಕ್ಶಾಪ್ (ಮೆಕ್ಯಾನಿಕಲ್ ವಿಭಾಗ), ಅಸಿಸ್ಟಂಟ್ ಸಿ ಅಂಡ್ ಡಬ್ಲ್ಯೂ (ಮೆಕ್ಯಾನಿಕಲ್) ಹುದ್ದೆಗಳು ಬೆಸ್ಟ್ ಎನ್ನಲಾಗುತ್ತದೆ.
ರೈಲ್ವೆ ಗ್ರೂಪ್ ಡಿ ಹುದ್ದೆಗಳು ಉತ್ತಮ ಕರಿಯರ್ ಹೊಂದಿವೆಯೇ?
ಹೌದು. 7ನೇ ವೇತನ ಆಯೋಗದ ನಂತರ 3 ರಿಂದ 5 ಲಕ್ಷದವರೆಗೆ ವಾರ್ಷಿಕ ಸಂಬಳ ಗ್ರೂಪ್ ಡಿ ಹುದ್ದೆಗಳಿಗೆ ಸಿಗುತ್ತಿದೆ.
ಆರ್’ಆರ್’ಬಿ ಗ್ರೂಪ್ ಡಿ ಹುದ್ದೆಗೆ ಪ್ರಮೋಷನ್ ಸಿಗುತ್ತದಾ?
ಹೌದು. ಸೂಪರ್ ವೈಸರ್ ಲೆವೆಲ್ ನಿಂದ ಗ್ರೂಪ್ ಬಿ ಹುದ್ದೆಗಳ ವರೆಗೂ ಪ್ರಮೋಷನ್ ಸಿಗಲಿದೆ. ಆದರೆ ಅದಕ್ಕೆ ಬೇಕಾದ ವಿದ್ಯಾರ್ಹತೆ ಹೊಂದಿರಬೇಕು. ಡಿಪ್ಲೊಮ ಇನ್ ಇಂಜಿನಿಯರಿಂಗ್ ಅಥವಾ ಬಿಇ ಪಾಸ್ ಮಾಡಿರಬೇಕು.