ಮನೆ ಕವನ ಕಾಲಕ್ಕೆ ಯಾವ ಗಡಿ,,,? – ಕವಿತೆ

ಕಾಲಕ್ಕೆ ಯಾವ ಗಡಿ,,,? – ಕವಿತೆ

0

ಗಡಿಯಾರ ಚಿಕ್ಕದಾದರೇನು, ದೊಡ್ಡದಾದರೇನು?

ಇರುವುದು ಮೂರು ಮುಳ್ಳಷ್ಟೇ ಅಲ್ಲವೇನು?

ಸೆಂಕೆಂಡುಗಳಿಂದ ನಿಮಿಷ, ನಿಮಿಷಗಳಿಂದ ಗಂಟೆ

ಅಹಂ, ಬೇಧವಿದೆಯೇ ಮುಳ್ಳಿಗೆ?

ಮೇಲೆ ಹೋದ ಮುಳ್ಳು ಕೆಳಗೆ

ಕೆಳಗೆ ಬಂದ ಮುಳ್ಳು ಮೇಲೆ

ಕಾಲಚಕ್ರಕ್ಕೆ ತಡೆಯೊಡ್ಡುವವರು ಇರುವರೇನು?

ಹಣ್ಣೆಲೆ ಉದುರಿ, ಚಿಗುರೆಲೆ ಮೂಡಬೇಕು

ಪ್ರಕೃತಿ ವಿರುದ್ಧವಾಗಿ ನಡೆಯಲು ಸಾಧ್ಯವೇನು?

ಓಡುವ ಕಾಲಕ್ಕೆ ಗಡಿಯುಂಟೆ

ಮುಳ್ಳುಗಳ ತಿರುಗಿಸಬಹುದು ಕಾಲ ತಿರುಗಿಸಲಾದಿತೇ?

ಸೂರ್ಯ ಮೂಡುವನು, ತಾ ಮುಳುಗುವನು

ಗಡಿಯಾರ ನಿಂತರು, ನಿಲ್ಲದಿದ್ದರು ಎಂಬುದು ತಿಳಿಯದೇನು?

ಕಾಲದ ಎದುರು ದೊಡ್ಡವರು ಇರುವರೇನು?

ಪ್ರೀತಿ, ಸ್ನೇಹ, ಗೌರವ ನಾ ಕೊಡಬಹುದು

ಅಹಂ, ಅತೃಪ್ತಿ, ದ್ವೇಷದಿಂದ ನೀ ಪಡೆಯುವುದೇನು?

ಒಂದೊಮ್ಮೆ ಮಾತು, ಮತ್ತೊಮ್ಮೆ ಮೌನ

ನೀ ಗೆಲ್ಲುವುದೇನು? ನಾ ಸೋಲುವುದೇನು?

ಕಾಲ ನಿಷ್ಠೂರವೆಂಬುದು ಅರಿವಾಗದೇನು…!

(ಅಹಂ, ಅತೃಪ್ತಿ, ದ್ವೇಷದಾಚೆಗೆ ನೋಡು ನಾ ಕಾಯುತ್ತಿದ್ದೇನೆ)

  • ರವಿ ಡಿ.ಗಾಯನಹಳ್ಳಿ
ಹಿಂದಿನ ಲೇಖನಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಜೆಪಿಯಿಂದ ಪಿ.ಎನ್‌.ದಯಾನಿಧಿ ಉಚ್ಛಾಟನೆ
ಮುಂದಿನ ಲೇಖನಗೃಹ ಸಚಿವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ