ಮನೆ ರಾಜ್ಯ ಮಕ್ಕಳನ್ನು ಕಳೆದುಕೊಂಡು ಸಮಾಜ ಕಟ್ಟುವುದೇನಿದೆ?: ಕೆ.ನಾಗಣ್ಣ ಗೌಡ

ಮಕ್ಕಳನ್ನು ಕಳೆದುಕೊಂಡು ಸಮಾಜ ಕಟ್ಟುವುದೇನಿದೆ?: ಕೆ.ನಾಗಣ್ಣ ಗೌಡ

0

ಕೋಲಾರ(Kolar): ಮಕ್ಕಳನ್ನು ಕಳೆದುಕೊಂಡು ಸಮಾಜ ಕಟ್ಟುವುದೇನಿದೆ? ಮಕ್ಕಳ ಜೀವ ತೆಗೆಯಲು ಹಾಗೂ ಅವರ ಜೀವನ ಅಳಿಸಲು ಯಾರಿಗೂ ಅಧಿಕಾರ ಇಲ್ಲ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರದುರ್ಗದ ಮುರುಘಾ ಮಠದಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ‌ ಆಯೋಗದಿಂದಲೂ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಕರಣ ಏಕೆ ತಡವಾಗಿ ಬೆಳಕಿಗೆ ಬಂತು? ಘಟನೆ ನಡೆದಾಗ ಡಿವೈಎಸ್ಪಿ ಯಾರಿದ್ದರು, ಅಧಿಕಾರಿಗಳು ಯಾರಿದ್ದರು? ಮಠದಲ್ಲಿನ ಅಧಿಕಾರಿಗಳು ಏಕೆ ಇಷ್ಟು ವರ್ಷ ಮುಚ್ಚಿಟ್ಟಿದ್ದರು? ಪೊಲೀಸರು ಏಕೆ ವಿಫಲರಾದರು, ಕ್ರಮ ವಹಿಸಲು ಉಂಟಾದ ಅಡೆತಡೆ ಏನು ಎಂಬಿತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಈಗಾಗಲೇ ಹಲವರ ಮೇಲೆ ಕ್ರಮವೂ ಆಗಿದೆ ಎಂದರು.

ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಆತನಿಗೆ ಶಿಕ್ಷೆ ಆಗಲೇಬೇಕು. ಇಂಥ ಘಟನೆ ನಡೆದಾಗ ಸಮಾಜ ಹೆದರಬಾರದು. ಬೇಗನೇ ಪತ್ತೆ ಹಚ್ಚಿದ್ದರೆ ಮಠವೂ ಉಳಿಯುತಿತ್ತು, ಮಕ್ಕಳಿಗೂ ತೊಂದರೆ ಆಗುತ್ತಿರಲಿಲ್ಲ. ಈಗ ಎಲ್ಲಾ ಸೇರಿ ಮುಳುಗಿಸಿದ್ದಾರೆ ಎಂದು ಹೇಳಿದರು.