ಮನೆ ಸಾಹಿತ್ಯ ದೇವರ ನಿಜವಾದ ಸ್ವರೂಪವೇನು?

ದೇವರ ನಿಜವಾದ ಸ್ವರೂಪವೇನು?

0

ಈ ಸನ್ಯಾಸಾಶ್ರಮದ ಗುರುವಿಗೆ ದೇವರ ಬಗ್ಗೆ ಜನರ ಕಾಲ್ಪನಿಕ ರೇಖೆಗಳನ್ನು ಕಂಡು ಅನೇಕ ಬಾರಿ ಸೋಜಿಗವಾಗುತ್ತಿತ್ತು. ಜನರು ನಿಜವೆಂದು ನಂಬಿರುವ ಆ ಕಲ್ಪನೆಗಳ ಬಗ್ಗೆ ಅವರೆಂದೂ ಅಕ್ರಮಣ ನಡೆಸಲಿಲ್ಲ.

ಜನರು ಅನೇಕ ಸಂದರ್ಭಗಳಲ್ಲಿ ದೇವರೇ ತಮ್ಮನ ಸಂಕಷ್ಟಗಳಿಂದ ಪಾರು ಮಾಡಿದ್ದು ಅವನೇ ನಮ್ಮ ಜೀವನ ಹಾಗೂ ಭವಿಷ್ಯವನ್ನು ರೂಪಿಸಿರುತ್ತಾನೆ ಎಂದು ಅವರ ಪ್ರತಿಪಾದಿಸುತ್ತಿದ್ದರು. ಗುರು ಯಾವಾಗಲೂ ಹೀಗೆ ಹೇಳುತ್ತಿದ್ದರು, “ಆ ನಿಮ್ಮ ದೇವರು ನಿಮ್ಮ ರಕ್ಷಣೆಗೆ ಧಾವಿಸಿ ನಿಮ್ಮನ್ನು ಕಷ್ಟದಿಂದ ಪಾರು ಮಾಡುವುದಾದರೆ ನೀವು ನಿಜವಾದ ದೇವರನ್ನು ಹುಡುಕುವ ಕೆಲಸ ಪ್ರಾರಂಭಿಸಬೇಕಾದ ಸಮಯವೀಗ ಬಂದೊದಗಿದೆ.”            

ಪ್ರಶ್ನೆ :-

1.ಈ ಕಥೆಯ ಪರಿಣಾಮವೇನು ?

ಉತ್ತರ :-

1.ನಿಮ್ಮ ಕ್ರಿಯೆಗಳಿಗೆ, ಜೀವನ ಮತ್ತು ಭವಿಷ್ಯಕ್ಕೆ ನೀವೇ ಜವಾಬ್ದಾರರು. ಬೇರೆ ಯಾರೂ ವಿಚಾರದಲ್ಲಿ ಇನ್ನು ಯಾವುದೇ ಪ್ರಭಾವ ಬೀರಲಾರರು. ನಿಮ್ಮ ಜೀವನ ಮತ್ತು ಭವಿಷ್ಯದ ಜವಾಬ್ದಾರಿಯನ್ನ ನೀವೇ ತೆಗೆದುಕೊಳ್ಳಬೇಕು ಹಾಗೂ ಈ ಪ್ರಕ್ರಿಯೆಯಲ್ಲಿ ಬೇರೆ ಯಾರ ಸಹಾಯವನ್ನು ನಿರೀಕ್ಷಿಸಬಾರದು. ದೇವರು ನಿಮ್ಮ ಎಲ್ಲಾ ಕಾರ್ಯಗಳಲ್ಲೂ ನೆರವಾಗಲು ಬರುತ್ತಾನೆಂಬ ಆಲೋಚನೆ ಅರ್ಥಹೀನವಾದದು.

ಹಿಂದಿನ ಲೇಖನಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ: ಷರತ್ತುಗಳು ಅನ್ವಯ
ಮುಂದಿನ ಲೇಖನಹುಲಿ ಉಗುರು ಪ್ರಕರಣ: ಯಾರನ್ನೂ ಬಿಡುವುದಿಲ್ಲ, ಎಲ್ಲಾ ತಪ್ಪಿತಸ್ಥರ ಮೇಲೆ ಕ್ರಮ- ಕುಮಾರ ಪುಷ್ಕರ್