ಶ್ವಾಸಕೋಶದಲ್ಲಿ ನೀರಿನ ಅಂಶ ಹೆಚ್ಚಾಗಿ ಆಮ್ಲಜನಕ ಹೀರುವ ಗುಣ ಕಡಿಮೆಯಾಗುವುದರಿಂದ, ಗಾಳಿಯ ಹಸಿವು ಆಗುತ್ತದೆ. ಕಫ ಕರಗಿ ಹೊರಗೆ ಬರುವ ಔಷಧಿ ಕೊಡಬೇಕು.
1. ವಂಶಲೋಚನದಲ್ಲಿ ಫಾರ್ ಪೆರಸ್ ಹೆಚ್ಚಾಗಿದೆ.ಈ ಕಾರಣದಿಂದ ಕೆಮ್ಮು, ದಮ್ಮು ಉಬ್ಬಸಗಳಲ್ಲಿ ದಿನಕ್ಕೆ ಮೂರು ವೇಳೆ 5 ಗ್ರಾಂ ಪ್ರಕಾರ ವಂಶಲೋಚನವನ್ನು ಜೇನಿನಲ್ಲಿ ಕೊಡುತ್ತಿರಬೇಕು. ಬಿಸಿ ನೀರನ್ನೇ ಸದಾ ಕುಡಿದು ಬಿಸಿ ಆಹಾರವನ್ನೇ ತಿನ್ನಬೇಕು. ಬೆಚ್ಚಗೆ ಇರುವ ಸ್ಥಳದಲ್ಲಿರಬೇಕು. ವಂಶ ಲೋಚನ ಎಂದರೆ ಬಿರುಪ್ಪು ಸರ್ಪತೈಲವನ್ನು ಕಫರೋಗದಲ್ಲಿ ಎದೆಗೆ ಹಚ್ಚುವುದು.
2. ಇಂಗು,ಬಜೆ ಕುರುಟಿಗ,ತಾಳಕ ಭಸ್ಮ ಇವುಗಳನ್ನಾಲಿ, ಅಥವಾ ಒಂದೊಂದನ್ನೇ ಆಗಲಿ ತೊಗರಿಕಾಳು ಪ್ರಮಾಣದಲ್ಲಿ ಅವರವರ ದೇಹಕ್ಕೆ ಅನುಸಾರವಾಗಿ ಮಾತ್ರೆ ಮಾಡಿ ನುಂಗುತ್ತಿದ್ದರೆ ಗಮನಾರ್ಹವಾಗಿ ಉಬ್ಬಸ ಗುಣವಾಗುತ್ತದೆ.
3. ಅಂಕೋಲೆ ಬೇರನ್ನು ಅಡಿನ ಹಾಲಿನಲ್ಲಿ ಚಚ್ಚಿ ಯಾಲಕ್ಕಿ ಸಕ್ಕರೆ ಬೆರೆಸಿ ಕಾಯಿಸಿ ಮೂರು ದಿನ ಕುಡಿಯಲು ಉಬ್ಬಸ ಹರವಾಗುವುದು.
4. ಒಂದೆಲಗದ ಸೊಪ್ಪಿನ ಸೈರಸ ಒಂದು ಔನ್ಸ್ ಪ್ರಕಾರ 21 ದಿನ ಸೇವಿಸಲು ಉಬ್ಬಸ ಗುಣವಾಗುವುದು.
5. ಹಸಿವಿನ ಗಂಜಲವನ್ನು ಏಳು ಸಾರಿ ಶೋಧಿಸಿ ಕಾಯಿಸಿ ಒಂದು ಔನ್ಸ್ ನಂತೆ ದಿನಕ್ಕೆ ಮೂರು ವೇಳೆ ಸೇವಿಸಲು ಉಬ್ಬಸ ಗುಣವಾಗುತ್ತದೆ.
6. ಹಸುವಿನ ಹಾಲಿಗೆ ಅಥವಾ ಮೇಕೆ ಹಾಲಿಗೆ ಅರಿಶಿನ ಪುಡಿ ಒಂದು ಚಮಚ ಹಾಕಿ ಅರ್ಧ ತೊಲೆ ಕರಿ ಮೆಣಸಿನ ಪುಡಿ ಹಾಕಿ ಸಕ್ಕರೆಯೊಡನೆ ಕುಡಿಯಲು ಉಬ್ಬಸ ಗುಣವಾಗುವುದು.
7. ಸುಲಭವಾಗಿ ಸಿಕ್ಕುವ ಬಿಲ್ವಪತ್ರೆ ಎಲೆಗಳ ಕಷಾಯ ಮಾಡಿ ಬಿಸಿಬಿಸಿಯಾಗಿ ಅರ್ಧ ಲೋಟದಷ್ಟು ಸೇವಿಸಿದರೆ ಉಬ್ಬಸ ಗುಣವಾಗುವುದು
8. ಬಾಳೆ ಎಲೆಯನ್ನು ಸುಟ್ಟು ಭಸ್ಮ ಮಾಡಿ ಅದನ್ನು ಜೇನುತುಪ್ಪದಲ್ಲಿ ನೆಕ್ಕಲು ಉಬ್ಬಸ ಹರವಾಗುವುದು.
9. ಕರಿ ಕಾಳು ಮೆಣಸಿನ ಚೂರ್ಣವನ್ನು ಜೇನುತುಪ್ಪದಲ್ಲಿ ಮಿಶ್ರಣ ಮಾಡಿ ಸೇವಿಸುತ್ತಾ ಬರಲು ಗುಣವಾಗುವುದು.
10. ಬಿಳಿ ಎಕ್ಕದ ಹೂವನ್ನು ತಂದು ಒಣಗಿಸಿ,ಅದನ್ನು ಪುಡಿ ಮಾಡಿ ಜೇನುತುಪ್ಪದೊಂದಿಗೆ ನಿಕ್ಕುತ್ತಾ ಬರಲು ಉಬ್ಬಸ ಗುಣವಾಗುವುದು.