ಮನೆ ಆರೋಗ್ಯ ಉಬ್ಬಸ : ಭಾಗ ಎರಡು

ಉಬ್ಬಸ : ಭಾಗ ಎರಡು

0

ಉಬ್ಬಸ ಬಂದಾಗ ಮಲಗಬೇಕಾದ ರೀತಿ :-

Join Our Whatsapp Group

ಸಾಕು ಪ್ರಾಣಿಗಳಿಂದ.

        ಈ ರೀತಿಯಾಗಿ ಒಬ್ಬರಿಗೊಬ್ಬರು ಒಬ್ಬೋಗಮಬ್ಬರಿಗೆ,ಮೇಲೆ ಹೇಳಿದವುಗಳಲ್ಲಿ ಒಂದೊಂದು ಕಾರಣದಿಂದಾಗಿ, ಇಲ್ಲವೇ ಕಾರಣಗಳು ಸೇರಿ,ಅವರವರ ಶರೀರಗುಣವನ್ನು ಅವಲಂಬಿಸಿ ಅಲರ್ಜಿ ಉಂಟಾಗುತ್ತದೆ.

 ಉಬ್ಬಸದ ಲಕ್ಷಣಗಳು

 ★ಕೆಮ್ಮು

 ದಣಿವು

 ★ಉಸಿರಾಡಲಾಗದೆ ಹೋಗುವುದು

 ★ಹೃದಯದ ಬಿಗಿತ

 ಗೊರಗುಟ್ಟುವ ಶಬ್ದ

 ★ಮೇಲುಸಿರು

★ ಮಕ್ಕಳಿಗೆ ರಾತ್ರಿ ಬಿಡದೆ ಕೆಮ್ಮು ಗುರು ಬರುವುದೊಂದೇ ಕಾಣಿಸುವ ಲಕ್ಷಣ.

★ ನಾಡಿ ವೇಗವಾಗಿ ಬಡಿದುಕೊಳ್ಳುವುದು (ನಿಮಿಷಕ್ಕೆ 90 ಬಾರಿಗಿಂತಲೂ ಹೆಚ್ಚು)

 ★ಒಳಗೆ ಗಾಳಿಯನ್ನೆಳೆದು ನೆನೆದುಕೊಳ್ಳುವಾಗ ಪಕ್ಷಿಗಳು ಒಳಕ್ಕೆ ಹೋಗುವುದು.

 ( ಮುಖ್ಯವಾಗಿ ಮಕ್ಕಳಲ್ಲಿ ಇದು ಹೆಚ್ಚು)

 ಉಬ್ಬಸ  ಇರುವವರು ತೆಗೆದುಕೊಳ್ಳಬೇಕಾದ ಕ್ರಮಗಳು

    ★ಶ್ವಾಸಕೋಶಗಳ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ತಕ್ಕ ವ್ಯಾಯಾಮ ಮಾಡಬೇಕು.  ಅಂತವುಗಳಲ್ಲಿ ಈಜುವುದು ಒಳ್ಳೆಯ ವ್ಯಾಯಾಮ.ಬಾಯಿಂದ ಗಾಳಿ ಉಳಿಯೂದುವ ವಾದ್ಯಗಳನ್ನು- ಉದಾ :ಕೊಳಲು ಇತ್ಯಾದಿ ಕಲಿತುಕೊಂಡರೆ, ಶ್ವಾಸಕೋಶಗಳಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ.

    ★ಹಗುರವಾದ ಆಹಾರ ಸೇವಿಸಬೇಕು ತರಕಾರಿಗಳು, ಹಣ್ಣುಗಳು,ನಾರಿನ ಅಂಶವಿರುವ ಪದಾರ್ಥಗಳು ತಿನ್ನುತ್ತಾ ಮಲಬದ್ಧತೆಯಾಗದಂತೆ ನೋಡಿಕೊಳ್ಳಬೇಕು

      ★ಹೆಚ್ಚಾಗಿ ನೀರು ಕುಡಿದರೆ, ಗಂಟಲಿನಲ್ಲಿ ಉಂಟಾಗುವ ಕಫ ಕರಗಿ ಉಗುಳಲು ಸುಲಭವಾಗುತ್ತದೆ, ಉಸಿರಾಟ ಸರಾಗವಾಗುತ್ತದೆ.

     ★ಸಿಹಿ ಕುಂಬಳಕಾಯಿ ಕ್ಯಾರೆಟ್, ಸೊಪ್ಪು ತರಕಾರಿಗಳು ಕ್ಯಾಬೇಜ್ ಬಳಸುವುದು ಒಳ್ಳೆಯದು.

 ★ಗಾಳಿಯ ದಿಂಬನ್ನು ದಿನವು 10 ನಿಮಿಷಗಳ ಕಾಲ ಗಾಳಿಯೂದಿ.

 ಪ್ರಾಣಾಯಾಮ ಮಾಡಿ

 ★ಮದ್ಯ ನಿಷಿದವಲ್ಲದಿದ್ದರೂ, ನಿಧಾನವಾಗಿ ಇದು ಶ್ವಾಸಕೋಶಗಳನ್ನು ದುರ್ಬಲಗೊಳಿಸುವುದರಿಂದ, ಅದರ ತಂಟೆಗೆ ಹೋಗದಿರುವುದೇ ಒಳ್ಳೆಯದು.

 ★ಬೇಸಿಗೆಯ ಕಾಲದಲ್ಲಿ ತಣ್ಣೀರು ಸ್ಥಾನ ಮಾಡಬೇಡಿ.

 ★ಮನೆಯಲ್ಲಿ ಧೂಳು ನಿಲ್ಲದಂತೆ ನೋಡಿಕೊಳ್ಳಿ.

★ ಕಾರ್ಪೆಟ್ ಗಳು ಹಾಸಿಗೆಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು.

 ★ಬೂಷ್ಟು ಕಟ್ಟಲು ಬಿಡಬಾರದು.

 ★ಸಿಗರೇಟಿನ ಹೋಗೆ, ಅಗರಬತ್ತಿಯ ಹೋಗೆ ಎಣ್ಣೆ ಹೊಗೆ ಮಾಸ್ಕಿಟೋಕಾಯಿಲ್ ಹೋಗೆ, ಮೊದಲಾದವುಗಳಿಂದ ದೂರವಿರಬೇಕು.

 ★ಘಾಟು ವಾಸನೆಗಳಲ್ಲಿರುವ ಜಾಗಕ್ಕೆ ಹೋಗಕೂಡದು.

 ★ಅತಿ  ತಾಂಪದ ಪದಾರ್ಥಗಳನ್ನು ಬಳಸಬಾರದು (ಐಸ್ ಕ್ರೀಮ್, ಕೂಲ್ಡ್ ಡ್ರಿಂಕ್ಸ್, ಇತ್ಯಾದಿ, ಫಿಜ್ ನಲ್ಲಿಟ್ಟ ಮೊಸರು, ಮಜ್ಜಿಗೆ,ಇತ್ಯಾದಿ )

 ★ನಿದ್ದೆ ಮಾತುಗಳು,ಕೆಮ್ಮಿನ ಔಷಧಿ ತೆಗೆದುಕೊಳ್ಳಬಾರದು.ಎಂತಹ ಪರಿಸ್ಥಿತಿಯಲ್ಲೂ ಆಸ್ಪಿರಿನ್ ಬಳಸಬಾರದು.

 ★ಸಾಕು ಪ್ರಾಣಿಗಳಿಂದ ದೂರವಿರಬೇಕು.

 ★ಪ್ಯಾನ್ ಅನ್ನು ವೇಗವಾಗಿಡಬಾರದು.ವ್ಯಾಕ್ಯೂಮ್ ಕ್ಲೀನರ್ ಬಳಸಿದಾಗ ದೂಳು ಎಳೆದಂತೆ ನೋಡಿಕೊಳ್ಳಬೇಕು. ಸಕ್ಕಿಂಗ್ ವಿಧಾನವನ್ನು ಅವಲಂಬಿಸುವುದು ಒಳ್ಳೆಯದು.

 ★ನೆಗಡಿ ಇರುವವರಿಂದ ದೂರವಿರಬೇಕು.

 ★ಹತ್ತಿಯ ಬದಲು ಫೋಮ್ ದಿಂಬುಗಳನ್ನು ಬಳಸಬೇಕು

 ★ಚಳಿಗಾಳಿಯಲ್ಲಿ ವ್ಯಾಯಾಮ ಒಳ್ಳೆಯದಲ್ಲ.ಚಳಿಗಾಳಿ ದೇಹಕ್ಕೆ ತಾಗದಂತೆ ಸ್ವೆಟರ್ ಮಪ್ಲರ್ ಗಳನ್ನು ಬಳಸಬೇಕು.

 ★ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು.

 ★ಅತಿಶೀತಲವಾಗಿರುವ ಎಸಿ ರೂಮುಗಳು, ಎಸಿ ಸಿನಿಮಾಗಳಿಗೆ ಹೋಗಬಾರದು.

 ★ಕೆಲವು ಔಷಧಗಳೂ ಸಹ ಅಲರ್ಜಿ ಯನ್ನುಂಟುಮಾಡುತ್ತವೆ. ಅಂತಹವು ಯಾವುದೆಂದು ತಿಳಿದುಕೊಂಡು. ಅವುಗಳಿಂದ ಜೀವನಪರ್ಯಂತ ದೂರವಿರಬೇಕು.

★ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಡಾಕ್ಟರ್ ಸಲಹೆಯಂತೆ ಮಾತ್ರ ಔಷಧಗಳನ್ನು ತೆಗೆದುಕೊಳ್ಳಬೇಕು