ಸದ್ಗುರುವಿನ ಶಿಷ್ಯರು ಆಗಿಂದಾಗೆ ಸರಿ-ತಪ್ಪು ಪ್ರಶ್ನೆಗಳ ಸುಳಿಯಲ್ಲಿ ಸಿಲುಕುತ್ತಿದ್ದರು. ಕೆಲವೊಮ್ಮೆ ಅವರಿಗೊಂದು ಸ್ಪಷ್ಟ ಉತ್ತರ ಗೋಚರಿಸುತ್ತಿದ್ದು, ಆದರೆ ಮತ್ತೆ ಕೆಲವೊಮ್ಮೆಉತ್ತರ ಜಾರಿಗೊಳುತ್ತಿತ್ತು.
ಗುರು ಹಾಜರಿದ್ದರು ಸಹ ಅಂತಹ ಚರ್ಚೆಗಳಲ್ಲಿ ಎಂದು ಪಾಲ್ಗೊಳ್ಳುತ್ತಿರಲಿಲ್ಲ. ಹೀಗಿದ್ದರೂ ಒಮ್ಮೆ ಗುರುವಿನ ಇಂತಹದೊಂದು ಪ್ರಶ್ನೆ ಎದುರಾಯಿತು. “ನನ್ನನ್ನು ಕೊಲ್ಲಲು ಉದ್ದೇಶಿಸಿರುವ ವ್ಯಕ್ತಿಯನ್ನು ಕೊಲ್ಲುವುದು ಸರಿಯೇ ಅಥವಾ ಅದು ತಪ್ಪೇ?”. ಅದಕ್ಕೆ ಗುರು “ಅದು ನನಗೆ ಗೊತ್ತು” ಎಂದು ಉತ್ತರಿಸಿದನು. ಆಗ ಶಿಷ್ಯರು ಗೊಂದಲದಿಂದ “ಹಾಗಾದ್ರೆ ನಾನು ನಾವು ಯಾವುದು ಸರಿ-ಯಾವುದು ತಪ್ಪು ಎಂದು ಹೇಳುವುದು ಹೇಗೆ?” ಎಂದು ಹೇಳಿದನು. ಆಗ ಆ ಗುರು ತನ್ನ ಶಿಷ್ಯರಿಗೆ ಎಲ್ಲವನ್ನು ವಿವರಿಸುವ ಮಾತನ್ನು ಹೇಳಿದನು.
ಪ್ರಶ್ನೆಗಳು :- 1. ಗುರು ಏನೆಂದು ಹೇಳಿದನು ? 2. ಈ ಕಥೆಯ ಪರಿಣಾಮವೇನು ?
ಉತ್ತರಗಳು :- 1. ಗುರು ಹೀಗೆ ಹೇಳಿದನು “ಬದುಕಿದ್ದಾಗ ನಿಮ್ಮ ಪಾಲಿಗೆ ಸತ್ತಂತಿರಿ. ಸಂಪೂರ್ಣವಾಗಿ ಸತ್ತಿರಿ. ಆಮೇಲೆ ನಮಗಿಷ್ಟ ಬಂದಂತೆ ವರ್ತಿಸಿ ಆಗ ನಿಮ್ಮ ಕ್ರಿಯಾ ಸದಾ ಸರಿಯಾಗಿರುತ್ತದೆ”.
2. “ಬದುಕಿದ್ದಾಗ ನಿಮ್ಮ ಪಾಲಿಗೆ ಸತ್ತಂತಿರಿ” ಎಂಬ ವಾಕ್ಯ ನಿರ್ವೋಹವನ್ನು ಸೂಚಿಸುತ್ತದೆ. ಇಲ್ಲಿ ಕಾಣುವ ವಿರೋಧಬಾಸವೆನೆಂದರೆ ಯಾವುದೇ ಚಟುವಟಿಕೆಯಲ್ಲಿ ನಿರಂತರಾಗಿದ್ದಾಗ, ನಾವು ಹೆಚ್ಚು ನಿರ್ಲಿಪ್ತರಾಗಿದ್ದಷ್ಟು ಪರಿಣತಿಯನ್ನು ಸಾಧಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾವುದರ ಬಗ್ಗೆಯೂ ನಮಗೆ ವ್ಯಾಮೋಹ ಇಲ್ಲದಿದ್ದಾಗ ಯಾವುದೇ ಕೈಚಳಕ ತೋರುವ ತಪ್ಪು ಮಾಡುವ ಸಾಧ್ಯತೆಯು ಅತಿವಿರಳವಾಗಿರುತ್ತದೆ. ನಿರ್ಲಿಪಗತತೆ ಮನಸ್ಸಿಗೆ ಶಾಂತಿಯನ್ನುತರುತ್ತದೆ. ವ್ಯಕ್ತಿಯೊಬ್ಬರ ಮನಸ್ಸು ಶಾಂತ ಮತ್ತು ಸುಸ್ಥಿರವಾಗಿದ್ದಾಗ, ನಿರುದ್ವಿಗ್ನ ಮತ್ತು ನಿಶ್ಚಲವಾಗಿದ್ದಾಗ ಆತನೆಂದು ಯಾವುದೇ ಪಾಪ ಮಾಡುವುದಿಲ್ಲ.