ಮಂಡ್ಯ(Mandya): ನಾನಂತೂ ಬ್ರಾಹ್ಮಣ ವಿರೋಧಿಯಲ್ಲ. ಜಾತಿ ವಿಚಾರ ಬಂದಾಗ ಮಾತನಾಡುವುದನ್ನು ನಾವು ಕಡಿಮೆ ಮಾಡಬೇಕು ಎಂದು ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಆರ್’ಎಸ್’ಎಸ್ ಹುನ್ನಾರ ನಡೆಸುತ್ತಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ಸೇರಿ ಬ್ರಾಹ್ಮಣ ಸಮುದಾಯ ಟೀಕೆ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಜಾತಿ ವಿಚಾರ ಬಂದಾಗ ಮಾತನಾಡುವುದನ್ನ ನಾವು ಕಡಿಮೆ ಮಾಡಬೇಕು. ಈ ಬಗ್ಗೆ ಕುಮಾರಸ್ವಾಮಿಯವರಿಗೂ ನಾನು ಮನವಿ ಮಾಡುತ್ತೇನೆ ಎಂದರು.
ಹೆಚ್.ಡಿ ಕುಮಾರಸ್ವಾಮಿಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನು ಬ್ರಾಹ್ಮಣರ ವಿರೋಧಿಯಂತೂ ಅಲ್ವೇ ಅಲ್ಲಾ. ಬ್ರಾಹ್ಮಣರ ಸಂಸ್ಕೃತಿಯನ್ನು ಬಹಳ ಇಷ್ಟ ಪಡುವವನು ನಾನು. ಬ್ರಾಹ್ಮಣ ಅಂದರೆ ಒಂದು ಜಾತಿಗೆ ಸೀಮಿತ ಅಲ್ಲ, ಯಾರು ಬ್ರಾಹ್ಮಣತ್ವವನ್ನು ನಿಜವಾಗಿ ಪಾಲಿಸುತ್ತಾರೋ ಅವರು ಬ್ರಾಹ್ಮಣರು ಎಂದರು.