Saval TV on YouTube
ಮೈಸೂರು(Mysuru): ಯಾವ ಪಕ್ಷಕ್ಕೆ ಸೇರುತ್ತೇನೆಂಬ ಬಗ್ಗೆ ಸಮಯ ಬಂದಾಗ ಉತ್ತರಿಸುತ್ತೇನೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ ತಿಳಿಸಿದ್ದಾರೆ.
ತಾಂಡವಪುರದಲ್ಲಿ ನಡೆದ ಜೆಡಿಎಸ್ ಪಕ್ಷದ ಸಭೆಯಲ್ಲಿ ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಕಾರಣಕ್ಕಾಗಿ ಪಕ್ಷದ ಚಟುವಟಿಕೆಯಿಂದ ದೂರವಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಇಂದು ಕಡಕೋಳ ಗ್ರಾಮದ ಬಿಕೆಟಿ ಪಬ್ಲಿಕ್ ಶಾಲೆಯ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಬಿಡುವುದೋ ಬೇಡವೋ , ಬೇರೆ ಪಕ್ಷ ಸೇರುವ ಬಗ್ಗೆ ಕೂಡ ನಾನು ಈಗಲೇ ಏನು ಹೇಳುವುದಿಲ್ಲ. ಸಮಯ ಬಂದಾಗ ತಿಳಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಳಿ ಬೀರೇಶ್ವರ ಟ್ರಸ್ಟಿನ ಅಧ್ಯಕ್ಷರು ಹಾಗೂ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಬಿ ನಾಗರಾಜು ಹಾಗೂ ಟ್ರಸ್ಟಿನ ಸದಸ್ಯರುಗಳು ಹಾಜರಿದ್ದರು.