ಮನೆ ದೇವರ ನಾಮ ಆದಿ ಲಕ್ಷ್ಮಿ ದೇವಿಗೆ

ಆದಿ ಲಕ್ಷ್ಮಿ ದೇವಿಗೆ

0

ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,

ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||ಆ||

ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||ಧಾ||

ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||ಕ || ಆದಿಲಕ್ಷ್ಮೀ…

ಬಲದ ಕಾಲು ಮುಂದೇ ಇಟ್ಟು ಹೊಸಿಲು ದಾಟಿ ಬಾರಮ್ಮ |

ಭಾಗ್ಯದಾಯಿ ಮಾಂಗಲ್ಯಾ ಸೌಭಾಗ್ಯವ ನೀಡಮ್ಮ||ಬ||

ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ |

ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ||ಧ||ಆದಿಲಕ್ಷ್ಮೀ….

ಕ್ಷೀರಭ್ಧಿತನಯೇ ಆನಂದನಿಲಯೇ ವಿಷ್ಣುಪ್ರಿಯೆ ಬಾರೆ |

ಕಮಲನಯನೇ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ || ಕ್ಷೀ||

ಪುಷ್ಪಸುಗಂಧಿನಿ ಹರಿಣ ವಿಲೋಚನಿ ಕರುಣೆಯನ್ನು ತೋರೆ ||ಪು||

ಅನಂತ ರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ||ಆದಿಲಕ್ಷ್ಮೀ ||

ಹಿಂದಿನ ಲೇಖನನೂತನ ಡಿಜಿ &ಐಜಿಪಿಯಾಗಿ ಅಲೋಕ್ ಮೋಹನ್ ಅಧಿಕಾರ ಸ್ವೀಕಾರ
ಮುಂದಿನ ಲೇಖನಮಧುಮೇಹಿಗಳಿಗೆ ದ್ರಾಕ್ಷಿ ಉತ್ತಮ ಆಯ್ಕೆ