ಬೆಂಗಳೂರು : ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? ಸರ್ಕಾರಿ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ಬೇಡ ಎಂದು ಹೇಳಿದ್ದೇನೆ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? ಅಂತ ಪ್ರಶ್ನೆ ಮಾಡಿದ್ದಾರೆ. ಸಂಘ ರಿಜಿಸ್ಟರ್ ಆಗಿದ್ದರೆ ಕಾಪಿ ಕೊಡಲಿ ಅವರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲು 55 ವರ್ಷ ಬೇಕಾಯಿತು ಎಂದರಲ್ಲೇ ಮುನಿರತ್ನ ಗಣವೇಶ ಹಾಕಿಕೊಂಡು, ಗಾಂಧಿಜಿ ಫೋಟೋ ಹಿಡಿದುಕೊಂಡು ಪ್ರತಿಭಟಿಸಿದ್ದು ಹಸ್ಯಾಸ್ಪದ ಅವರಿಗೆ ಆರ್‌ಎಸ್‌ಎಸ್ ಇತಿಹಾಸ ಗೊತ್ತಿಲ್ಲ ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರಾಗಿದ್ದಾಗ ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದಾರೆ ಅಂತ ಫೋಟೋ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೃಹ ಸಚಿವರಾಗಿ ಅವರು ಅಲ್ಲಿ ಹೋಗಿ ತಾಕೀತು ಮಾಡಿದ್ದರು.
ಶಿವಾಜಿನಗರ ಸೆನ್ಸಿಟಿವ್ ಏರಿಯಾ ಇಲ್ಲಿ ಬಾಲ ಬಿಚ್ಚಿದ್ರೆ ಹುಷಾರ್ ಅಂತ ಮುಖದ ಮೇಲೆ ಉಗಿದಿದ್ದಾರೆ. ಅದನ್ನು ಹೇಳಲ್ಲ ಇವರು ಅಂದಿನ ಪೊಲೀಸ್ ಅಧಿಕಾರಿಗಳ ಜೊತೆಗೆ ಹೋಗಿದ್ದರು, ಶಾಖೆಗೆ ಹೋಗಿದ್ದಲ್ಲ ತಾಕೀತು ಮಾಡೋಕೆ ಹೋಗಿದ್ದು ಅಂತ ಸ್ಪಷ್ಟಪಡಿಸಿದ್ದಾರೆ.
ಆರ್‌ಎಸ್‌ಎಸ್‌ಗೆ ಇತಿಹಾಸ ಇದೆ ಎಂಬ ಡಿಕೆಶಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ಅದರದ್ದೇ ಇತಿಹಾಸ ಇದೆ, ಅದು ಸುಳ್ಳಿನ ಇತಿಹಾಸ. ಅದನ್ನ ಆರ್‌ಎಸ್‌ಎಸ್‌ನವರು ಪಾಸಿಟಿವ್ ಆಗಿ ತಗೊಂಡಿದಾರೆ ಅಷ್ಟೇ. ಸುಳ್ಳಿನ ಇತಿಹಾಸ, ಗಾಂಧಿ ಕೊಂದ ಇತಿಹಾಸ ಇದೆ. ದೇಶದಲ್ಲಿ ಕೋಮು ವಿಷ ಬೀಜ ಬಿತ್ತಿದ ಇತಿಹಾಸ ಇದೆ. ಅವರಿಗೆ ಇತಿಹಾಸ ಗೊತ್ತಿಲ್ಲದಿದ್ರೆ ನಾನು ಇತಿಹಾಸದ ಪಾಠ ಮಾಡುತ್ತೇನೆ ಎಂದು ಕುಟುಕಿದ್ದಾರೆ.
ಆರ್‌ಎಸ್‌ಎಸ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಉತ್ತರಿಸಿ, ಕೇರಳದ ಹುಡುಗ ಮಾಡಿದ್ದ ಅವನ ಇನ್ ಸ್ಟ್ರಾಗ್ರಾಮ್ ನೋಡಿದ್ರೆ ಗೊತ್ತಾಗುತ್ತೆ. ರಾಜ್ಯದಲ್ಲೂ ಒಬ್ಬರು ಪುಸ್ತಕ ಬರೆದಿದ್ದರು, ಹನುಮೇ ಗೌಡ ಅಂತ ಆರ್‌ಎಸ್‌ಎಸ್‌ನಲ್ಲಿ ಲೈಂಗಿಕ ಕಿರುಕುಳ ಕೊಡ್ತಾರೆ ಅಂತ ಬರೆದಿದ್ದಾರೆ ಎಂದು ಹೇಳಿದ್ದಾರೆ.














