ಮನೆ ಸ್ಥಳೀಯ ನಾಳೆ ಬಾನಿಗೊಂದು ಎಲ್ಲೆ ಎಲ್ಲಿದೆ

ನಾಳೆ ಬಾನಿಗೊಂದು ಎಲ್ಲೆ ಎಲ್ಲಿದೆ

0

ಮೈಸೂರು: ದಟ್ಟಗಳ್ಳಿಯ ನಿನಾದ್ ಮ್ಯೂಸಿಕಲ್ ಟ್ರಸ್ಟ್ ವತಿಯಿಂದ ಜು.೧೨ರಂದು ಸಂಜೆ ೪.೩೦ಕ್ಕೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಬಾನಿಗೊಂದು ಎಲ್ಲೆ ಎಲ್ಲಿದೆ ಶೀರ್ಷಿಕೆ ಅಡಿಯಲ್ಲಿ ಡಾ.ರಾಜ್‌ಕುಮಾರ್ ನಟಿಸಿದ ಹಾಗೂ ಅವರು ಹಾಡಿದ ಚಿತ್ರಗೀತೆಗಳ ಲೈವ್ ವಾದ್ಯಗೋಷ್ಠಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಎಸ್.ಪ್ರಸನ್ನಕುಮಾರ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವೇಳೆ ಒಟ್ಟು ೩೨ ಗೀತೆಗಳನ್ನು ಹಾಡಲಾಗುವುದು. ಎಲ್ಲವೂ ರಾಜ್‌ಕುಮಾರ್ ಅವರ ಚಿತ್ರಗಳಿಗೆ ಸಮಬಂಧಿಸಿದ್ದಾಗಿವೆ. ತಮ್ಮ ಸಂಸ್ಥೆಯಲ್ಲಿ ಹಾಡುಗಾರಿಕೆ ಕಲಿಯುತ್ತಿರುವ ಹಾಗೂ ವಿವಿಧ ವೃತ್ತಿಗಳಲ್ಲಿರುವ ಹವ್ಯಾಸಿ ಗಾಯಕರೇ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಎಲ್ಲರಿಗೂ ಪ್ರವೇಶವಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗಾಯಕರಾದ ಸಿ.ಜಿ.ಮೂರ್ತಿ, ಅನಿಲ್‌ಕುಮಾರ್, ರೂಪಶ್ರೀ ಹಾಗೂ ಭಾಗ್ಯಸದಾನಂದ್ ಇದ್ದರು