1. ಆರನೇ ಅಧಿಪತಿ ಪಾಪಗ್ರಹವಾಗಿ ಲಗ್ನ ಅಷ್ಟಮ ದಶಮ ಈ ಸ್ಥಾನಗಳಲ್ಲಿ ಇದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.ಇವರು ಮಿಥುನ,ಸಿಂಹ, ಕನ್ಯಾ,ವೃಶ್ಚಿಕ ಅಥವಾ ಮೀನಾ ಲಗ್ನದವರಾಗಿ ಇರುವವರು ಶುಭ ಗ್ರಹ ದೃಷ್ಟಿ ಇದ್ದರೆ ತೊಂದರೆ ಹೆಚ್ಚು ಇರುವುದಿಲ್ಲ. ರೋಗ ನಿರೋ ನಿಧಾನವಾಗುತ್ತದೆ.
2. ಶುಭ ಗ್ರಹಗಳೇ 6ನೇ ಅಧಿಪತಿಯಾಗಿ ಕೆಟ್ಟಾಗ ಆರನೇ ಸ್ಥಾನದಲ್ಲಿ ಸ್ಥಿರದಾದಾಗ ಮತ್ತು ಪಿಡಿತರಾದಾಗ ವಕ್ರ ಗ್ರಹಗಳ ಸಂಬಂಧ ಹೊಂದಿದಾಗ….
ರವಿ : ಆರನೇ ಅಧಿಪತಿಯಾದಾಗ — ತಲೆಯಲ್ಲಿ ಕ್ಯಾನ್ಸರ್
ಚೆಂದ್ರ : ಆರನೇ ಅಧಿಪತಿಯಾದಾಗ — ಮುಖದಲ್ಲಿ.
ಕುಜ ಆರನೇ ಅಧಿಪತಿಯಾದಾಗ — ಗಂಟಲು ಅಥವಾ ಕತ್ತು.
ಬುಧ ಆರನೇ ಅಧಿಪತಿಯಾದಾಗ — ಕೆಳಹೊಟ್ಟೆ.
ಗುರು ಆರನೇ ಅಧಿಪತಿಯಾದಾಗ — ಮೂಗು
ಶುಕ್ರ : ಆರನೇ ಅಧಿಪತಿಯಾದಾಗ — ಕಣ್ಣು
ಶನಿ : ನೇ ಅಧಿಪತಿಯಾದಾಗ —ಕಾಲುಗಳು
ರಾಹು ಕೇತು : ಆರನೇ ಅಧಿಪತಿಯಾದಾಗ ಹೊಟ್ಟೆಭಾಗ.
ಜಾತಕ ಪಾರಿಜಾತ :
3. ಯಾವುದೇ ಜಾತಕದಲ್ಲಿ ರವಿ ಮತ್ತು ಚಂದ್ರನ ಪ್ರತಿಯೋಗ ಅಥವಾ ಒಂದಕ್ಕೆ ಮತ್ತೊಂದು ಕೇಂದ್ರದಲ್ಲಿದ್ದರೆ ಸಾಮಾನ್ಯವಾಗಿ ಜೀವಕ್ಕೆ ತೊಂದರೆ.
4. ರವಿ,,ಚಂದ್ರನ ಯತಿ ಹೊಂದಿ ಮೂರನೇ ಭಾವದಲ್ಲಿ ಪಾಪಗ್ರಹಗಳ ಮಧ್ಯೆ ಪೀಡಿತನಾಗಿದ್ದರೆ ಮತ್ತು ಕುಜ ಮತ್ತು ಶನಿಯರು ಒಂದಕ್ಕೊಂದು ಕೇಂದ್ರಸ್ಥಾನದಲ್ಲಿದ್ದರೆ ದುರ್ಮರಣ ಹೊಂದುತ್ತಾರೆ.
5. ವಕ್ರ ಗ್ರಹಗಳು ಆರು ಅಥವಾ ಎಂಟನೇ ಸ್ಥಾನದಲ್ಲಿ ಸ್ಥಿತ ಅಥವಾ ಅಧಿಪತಿಗಳ ಸಂಬಂಧ ಹೊಂದಿದ್ದರೆ ಅವರ ದಶಾಕಾಲದಲ್ಲಿ ಕ್ರೂರವಾದ ವ್ಯಾಧಿಗಳು ಬರುತ್ತವೆ ಅಥವಾ ವಾಸಿಯಾಗದಂತಹ ವ್ಯಾಧಿಗಳು ಬರುತ್ತವೆ.
6. ಶುಭಗ್ರಹಗಳು ಕೇಂದ್ರದಲ್ಲಿ ಸ್ಥಿತರಾದರೆ ಜಾತಕರ ಆರೋಗ್ಯವನ್ನು ಕಾಪಾಡುತ್ತಾರೆ.ಆದರೆ ಶುಭ ಗ್ರಹಗಳೇ ವಕ್ರಗಳಾಗಿ ಕೇಂದ್ರದಲ್ಲಿ ಸ್ಥಿತರಾದರೆ ಅವರ ದಶಾಕಾಲದಲ್ಲಿ ಅದಕ್ಕೆ ವಿರುದ್ಧವಾಗಿ ಅನಾರೋಗ್ಯವನ್ನು ಉಂಟುಮಾಡುತ್ತದೆ.
7. ಶುಭ ಗ್ರಹಗಳು 6,. 8,12, ರಲ್ಲಿ ಸ್ಥಿತರಾಗಿ ಅಶುಭ ಗ್ರಹಗಳ ಯುತಿ ಪಡೆದು,ಶುಭ ಗ್ರಹಗಳ ಯುತಿ ಪಡೆಯದಿದ್ದರೆ ಜೀವ ನಾಶವಾಗುವ ವ್ಯಾಧಿಗಳು ಬರುವ ಸಾಧ್ಯತೆ ಇರುತ್ತದೆ.ಹೊಸದಾಗಿ ಹುಟ್ಟಿದ ಮಗುವು ಮರಣ ವಾಗುವ ಸಂಭವವಿರುತ್ತದೆ.
ಉದಾಹರಣೆಗೆ ಜಾತಕ —1
ಈ ಜಾತಕರಿಗೆ ನೈಸರ್ಗಿಕ ಪಾಪ ಗ್ರಹ ಕುಜನೇ ಲಗ್ನಾಧಿಪತಿಯಾಗಿ ಹತ್ತರಲ್ಲಿ ಕೇತು ನಕ್ಷತ್ರ ಮಖೆಯಲ್ಲಿ ಸ್ಥಿತ ನೀಚಾಂಶದಲ್ಲಿದ್ದಾರೆ.ಅಂಶದಲ್ಲಿ ಶನಿ, ರವಿ,ಅಷ್ಟಮಾಧಿಪತಿ ಬುಧನ ಜೊತೆ ಕುಜನು ಯತಿ, ಆದ್ದರಿಂದ ಇವರ ದ್ವಿತೀಯಾರ್ಧ ಆಯುಷ್ಯದಲ್ಲಿ ಕತ್ತಿನ ಹತ್ತಿರ ಕ್ಯಾನ್ಸರ್ ಕಾಣಿಸಿಕೊಂಡಿತು. ಈ ಜಾತಕರು ಬಹಳ ದಿನಗಳವರೆಗೂ ಮಾರಣಾಂತಕ ನೋವನ್ನು ಪಡೆದರು. ಅನಂತರ ಫೈನಲ್ ಕಾಲಂನ ಕೊನೆಯ ಭಾಗದಲ್ಲಿ ಕಾಣಿಸಿಕೊಂಡಿತು. ಶನಿಯ ದೃಷ್ಟಿಯು ಇರುವುದರಿಂದ ವ್ಯಾಧಿಯು ಪ್ರಬಲವಾಗಿಲ್ಲ. ಇಲ್ಲಿ ಕಟಕ ರಾಶಿಯಲ್ಲಿ ಅಷ್ಟಮ ಬುಧ +ರವಿ + ಕೇತು ಸ್ಥಿತನಾಗಿರುವುದು ಮತ್ತು ಕಟಕ ರಾಶಿ ಪೀಡಿತವಾಗಿ ಇರುವುದು. ಗಮನಿಸಿ ಆರನೇ ಅಧಿಪತಿ ಕುಜ, ಕಾರಕ ಕತ್ತು ಭಾಗ.
ಉದಾಹರಣೆಗೆ ಜಾತಕ, 2
ಅಷ್ಟಮಾಧಿಪತಿ ಚಂದ್ರ ಅಷ್ಟಮದಲ್ಲಿರುವುದರಿಂದ ದೀರ್ಘಾಯು. ಅದರೆ ಇಲ್ಲಿ ಲಗ್ನಾಧಿಪತಿಯೇ ಗುರು,ಷಷ್ಠ ಶತೃಕ್ಷೇತ್ರ, ಶತೃ+ ಕೇಂದ್ರಾಧಿಪತಿ +ಮಾರಕ + ಭಾದಕಾಧಿ ಪತಿ ಬುಧನ ಜೊತೆ ಸ್ಥಿರವಾಗಿರುವುದು ಅಕಾಲಿಕ ರೋಗದಿಂದ ಮರಣವೆಂದು ಹೇಳುತ್ತದೆ.ಆದರೆ ಇಲ್ಲಿ ಗುರು /ಶುಕ್ರರು ಪರಿವರ್ತನಾ ಯೋಗದಿಂದ ಆದಷ್ಟು ದೀರ್ಘಾಯಸ್ಸು ಎಂದು ಹೇಳಬಹುದು.ಇಲ್ಲಿ ಗುರು ಪೀಡಿತನಾಗಿ 6ರಲ್ಲಿ ಇರುವುದರಿಂದ ನಿಯಮದಂತೆ ಮೂಗಿನ ಹತ್ತಿರ ಕ್ಯಾನ್ಸರ್ ಕಾಣಿಸಿಕೊಂಡಿದೆ. ಇಲ್ಲಿ ರವಿಯು ಉಚ್ಛನಾಗಿ ಪಂಚಮದಲ್ಲಿ ಇವುದರಿಂದ ಮತ್ತು ಕೆತು ದೃಷ್ಟಿ ಇದೆ. ಇಲ್ಲಿ ರಾಹು ರವಿಯಿಂದ ಒಂದು ಡಿಗ್ರಿ ಅಷ್ಟು ಪೂರ್ಣಅಸ್ತನಾಗಿ ವಕ್ರಶನಿಯನ್ನು ಲಗ್ನದಲ್ಲೇ ನೋಡುವುದರಿಂದ ತಲೆಯ ಭಾಗ ಮತ್ತು ಇಲ್ಲಿ ಶನಿಯು ದ್ವಿತೀಯಾಧಿಪತಿ ಆದುದರಿಂದ ಮುಖದ ಭಾಗದಲ್ಲಿ ರಾಹುವಿಯಿಂದ ಪೀಡಿತನಾಗಿ ರವಿ ದೆಶೆ /ರಾಹು ಭುಕ್ತಿಯಲ್ಲಿ ತನ್ನ 67ನೇ ವಯಸ್ಸಿನಲ್ಲಿ ಕ್ಯಾನ್ಸರ್ ವ್ಯಾಧಿ ಕಾಣಿಸಿಕೊಂಡಿದೆ.(ಇಲ್ಲಿ ಕೇತು, ಗುರು ನಕ್ಷತ್ರ ಸ್ಥಿತ/ ಇಳಿವಯಸ್ಸಿನಲ್ಲಿ ಬರಲು ಕಾರಣ ಅಂಶದಲ್ಲಿ ರವಿ,ರಾಹು ಅಂಶ ಲಗ್ನಕ್ಕೆ ಷಷ್ಠದಲ್ಲಿ ಸ್ಥಿತರಾಗಿ ವಕ್ರ ಶನಿ + ಕೇತುವಿನಿಂದ ದೃಷ್ಟಿ ಹೊಂದಿದ್ದಾರೆ ಮತ್ತು ಗುರುವೇ ಆರನೇ ಅಧಿಪತಿಯಾಗಿ ತನ್ನ ನೀಚಾಂಶದಲ್ಲಿ ಸ್ಥಿತಿ.