ಮನೆ ಆರೋಗ್ಯ ಬಿಳಿ ರಕ್ತಕಣಗಳು : ನಮ್ಮ ರೋಗ ನಿರೋಧಕ ಶಕ್ತಿ ಒಂದು ಬಲವಾದ ಅಸ್ತ್ರ

ಬಿಳಿ ರಕ್ತಕಣಗಳು : ನಮ್ಮ ರೋಗ ನಿರೋಧಕ ಶಕ್ತಿ ಒಂದು ಬಲವಾದ ಅಸ್ತ್ರ

0

* ರಕ್ತಕಣದಲ್ಲಿರುವ leucocytes ಎನ್ನುವ ಬಿಳಿ ರಕ್ತಕಣಗಳು. ಇವು ಶರೀರದೊಳಗೆ ಪ್ರವೇಶಿಸಿದ ಶತ್ರು ರೋಗಾಣು ಬ್ಯಾಕ್ಟೀರಿಯ, ಫಂಗಸ್, ಹಾನಿಕಾರಕ ಜೀವಾಣುಗಳನ್ನು ನಿರ್ಮೂಲನೆ ಮಾಡಲು ಹಲವು ರೀತಿಯಲ್ಲಿ ಸಹಕರಿಸುತ್ತದೆ.

* ಕೆಲವು ಬಿಳಿ ರಕ್ತ ಕಣಗಳು ಹಾನಿಕಾರಕ ವೈರಸ್, ಬ್ಯಾಕ್ಟೀರಿಯಾದಂತಹ ಶತ್ರುವನ್ನು ನಾಶಪಡಿಸಲು ಪ್ರಯತ್ನಿಸಿದರೆ, ಇನ್ನು ಕೆಲವು ಬಿಳಿ ರಕ್ತ ಕಣಗಳು ಆಂಟಿ ಬಾಡಿಯನ್ನು ತಯಾರಿಸಿ ಅವುಗಳ ಮೂಲಕ ಶತ್ರು ನಾಶಕ್ಕೆ ಯತ್ನಿಸುತ್ತದೆ.

*  ಬಿಳಿ ರಕ್ತಕಣಗಳು ರಕ್ತ ಪ್ರವಾಹದಲ್ಲಿ ಸೇರಿ ಸೂಕ್ಷ್ಮಾತಿ ಸೂಕ್ಷ್ಮ ರಕ್ತನಾಳದಲ್ಲಿ ಹರಡಿ ಶತ್ರು ನಿರ್ಮೂಲನೆಗೆ ತಯಾರಾಗುತ್ತದೆ. ಅವಶ್ಯಕತೆಯಿರದಾದಾಗ ಲಿಂಫ್ ನಾಳಗಳಲ್ಲಿ ಸೇರಿಕೊಳ್ಳುತ್ತದೆ. ಗಂಟಲು, ಕಂಕುಳು ಇತ್ಯಾದಿ ಕಡೆ ಇರುವ ಲಿಂಫ್ ಗ್ರಂಥಿಗಳು ಸೋಂಕು ಉಂಟಾದಾಗ ದವಡೆ ಮುಂತಾದೆಡೆ ಊದಿಕೊಂಡಿರುವುದನ್ನು ನೋಡಬಹುದು.

ಶಾಲಾ ಪರೀಕ್ಷೆಯ ದಿನಗಳಲ್ಲಿ ಕಾಣಿಸಿಕೊಳ್ಳುವ ಜ್ವರ :-

ಕೆಲವರು ಆಗಾಗ್ಗೆ ಜ್ವರ ಶೀತದಿಂದ ನರಳುತ್ತಿದ್ದರೆ, ಮತ್ತೆ ಕೆಲವರು ಇಂತಹ ಯಾವ ಸೋಂಕು ಇಲ್ಲದೆ ಆರೋಗ್ಯ ಕಾರಣವೇನೆಂದರೆ :

* ಮಾನಸಿಕ ಒತ್ತಡ ಇದಕ್ಕೆ ಒಂದು ಕಾರಣ. ಈ ಒತ್ತಡದಿಂದ ನೆಗಡಿಗೆ ಒಳಗಾಗುತ್ತಾರೆ. ಈ ಮಾನಸಿಕ ಒತ್ತಡ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

* ಇದಕ್ಕೆ ಉದಾಹರಣೆ ಪರೀಕ್ಷಾ ಸಮಯದಲ್ಲಿ ಬರುವ ಜ್ವರ, ವಾರ್ಷಿಕ ಪರೀಕ್ಷೆ ಸಮಯದ ರಕ್ತವನ್ನು, ಪರೀಕ್ಷಾ ಆದನಂತರ ರಜೆಯ ಆನಂದ ಅನುಭವಿಸಿದ ಮೇಲೆ ರಕ್ತದ ಪರಿಕ್ಷೆಯನ್ನು ನಡೆಸಿದಾಗ, ಪರೀಕ್ಷಾ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಬಲಹೀನ ಗೊಂಡಿರುವುದು ತಿಳಿಯುತ್ತದೆ. ಅದೇ ಪರೀಕ್ಷೆ ನಂತರ ಕಳೆದಾಗ ರೋಗ ನಿರೋಧಕ ಶಕ್ತಿ ಬಲಯುತವಾಗಿರುವುದು ಕಂಡುಬರುತ್ತದೆ. ಒಟ್ಟಿನಲ್ಲಿ ಮಾನಸಿಕ ಒತ್ತಡ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

*  ವಾರ್ಷಿಕ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸುವ ವಿದ್ಯಾರ್ಥಿಗಳಲ್ಲಿ, ಮಾನಸಿಕ ಒತ್ತಡ ಅಧಿಕವಾಗಿದ್ದು ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಕೆಲವು ವಿದ್ಯಾರ್ಥಿಗಳು ಓದಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುದಿರುವವರಲ್ಲಿ ಯಾವ ಜ್ವರವು ಕಾಣಿಸದು.

ಧೃಡಮನಸ್ಕರಲ್ಲದವರು ಬಹಳ ಬೇಗ ಒತ್ತಡಕ್ಕೆ ಒಳಗಾಗುತ್ತಾರೆ ಹಾಗಾಗಿ ನೆಗಡಿ ಜ್ವರದಿಂದ ಬಳಲುತ್ತಾರೆ.