ಮನೆ ರಾಜಕೀಯ ಯಡಿಯೂರಪ್ಪ ಅವರ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದವರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕೆಲಸ ಮಾಡಬೇಕಿತ್ತು:...

ಯಡಿಯೂರಪ್ಪ ಅವರ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದವರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕೆಲಸ ಮಾಡಬೇಕಿತ್ತು: ಬೊಮ್ಮಾಯಿ ವಿರುದ್ಧ ಪ್ರತಾಪ್ ಸಿಂಹ ಕಿಡಿ

0

ಮೈಸೂರು: ಯಡಿಯೂರಪ್ಪ ಅವರ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದವರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಛಲದೊಂದಿಗೆ ಕೆಲಸ ಮಾಡಬೇಕಿತ್ತು  ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದ ಪ್ರತಾಪ ಸಿಂಹ  ಕಿಡಿಕಾರಿದ್ದಾರೆ.

Join Our Whatsapp Group

ತಮ್ಮ ಹೊಂದಾಣಿಕೆ ರಾಜಕಾರಣದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ, ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಬಳಿಕ ಅಧಿಕಾರ ಪಡೆದ ಅತಿರಥ ಮಹಾರಥರು ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕೆಂಬ ಯೋಚನೆ, ಛಲದೊಂದಿಗೆ ಕೆಲಸ ಮಾಡಬೇಕಿತ್ತು. ಕಾರ್ಯಕರ್ತರ ಇಚ್ಛೆ, ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿತ್ತು. ಹರ್ಷ, ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿತ್ತು. ಹೀಗೆ ಮಾಡಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಯಡಿಯೂರಪ್ಪ ಅವರ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದವರು ಯಾಕೆ ಹೀಗೆ ಮಾಡಿದರು ಅಂತ ಕಾರ್ಯಕರ್ತರಿಗೆ ಬೇಸರವಿದೆ ಎಂದು ಪ್ರತಾಪ ಸಿಂಹ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹೊಂದಾಣಿಕೆ ರಾಜಕಾರಣ ಕುರಿತು ತಾವಾಡಿದ ಮಾತಿಗೆ ರಾಜಕೀಯ ಪ್ರಬುದ್ಧತೆ ಇಲ್ಲ ಎಂದು ತಮ್ಮನ್ನು ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಸಿದ್ದರಾಮಯ್ಯ ಅವರು ತಮ್ಮನ್ನು ಚೈಲ್ಡ್‌, ಎಳಸು, ಪ್ರಬುದ್ಧತೆ ಇಲ್ಲ ಎಂದು ಟೀಕಿಸಿದರೂ ಪರವಾಗಿಲ್ಲ. ಆದರೆ ರಾಜ್ಯದ ಹಣಕಾಸು ಪರಿಸ್ಥಿತಿ ಹೇಗಿದೆ ಅಂತ ಗೊತ್ತಿಲ್ಲದ ಅವರಿಗೆ ಪ್ರಬುದ್ಧತೆ ಇದೆಯಾ? ಉಚಿತ ಭಾಗ್ಯಗಳಿಗೆ 59 ಸಾವಿರ ಕೋಟಿ ರೂಪಾಯಿಯನ್ನು ಎಲ್ಲಿಂದ ಪಡೆಯಲಾಗುತ್ತದೆ? ಗ್ಯಾರಂಟಿಗಳನ್ನು ಘೋಷಿಸಿ ಬಳಿಕ ಬರೆ ಹಾಕುವುದು ಪ್ರಬುದ್ಧತೆಯೇ ಎಂದು ಪ್ರಶ್ನಿಸಿದ್ದಾರೆ.