ಮನೆ ಸುದ್ದಿ ಜಾಲ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ

ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ

0

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಮತ್ತೇ ಏರಿಕೆಯಾಗಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 80 ಪೈಸೆಯಷ್ಟು ಹೆಚ್ಚಳವಾಗಿರುವುದಾಗಿ ವರದಿಯಾಗಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ದರ 96.21, ಪ್ರತಿ ಲೀಟರ್‌ ಡೀಸೆಲ್‌ಗೆ 87.47; ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ 110.78, ಡೀಸೆಲ್‌ 94.94; ಕೋಲ್ಕತ್ತದಲ್ಲಿ ಪೆಟ್ರೋಲ್‌ 102.16 ಮತ್ತು ಡೀಸೆಲ್‌ 90.62; ಚೆನ್ನೈನಲ್ಲಿ ಪೆಟ್ರೋಲ್‌ ದರ 102.16, ಡೀಸೆಲ್‌ ದರ ₹92.19 ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ 101.42 ಮತ್ತು ಡೀಸೆಲ್‌ಗೆ 85.80 ತಲುಪಿದೆ.

ವಿಮಾನಕ್ಕೆ ಬಳಕೆಯಾಗುವ ಇಂಧನ ದರವನ್ನು ಜನವರಿಯಿಂದ ಶೇಕಡ 50ರಷ್ಟು ಹೆಚ್ಚಿಸಲಾಗಿದೆ ಹಾಗೂ ಸಗಟು ಲೆಕ್ಕದಲ್ಲಿ ಖರೀದಿಸುವ ಡೀಸೆಲ್‌ ದರ ಕಳೆದ ವಾರ ಪ್ರತಿ ಲೀಟರ್‌ಗೆ 25ರಷ್ಟು ಹೆಚ್ಚಳವಾಗಿದೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮತ್ತು ರಷ್ಯಾ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳ ಪರಿಣಾಮ ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ ದಾಟಿದೆ.

ಹಿಂದಿನ ಲೇಖನಕೈಬರಹ ತಜ್ಞರ ಅಭಿಪ್ರಾಯವು ವ್ಯಕ್ತಿಯ ಸಹಿ ಮತ್ತು ಕೈಬರಹವನ್ನು ಸಾಬೀತುಪಡಿಸುವ ಏಕೈಕ ವಿಧಾನವಲ್ಲ: ಸುಪ್ರೀಂ ಕೋರ್ಟ್
ಮುಂದಿನ ಲೇಖನದೇಶದಲ್ಲಿ ಕೋರೊನಾ ಮತ್ತೆ ಏರಿಕೆ