ನಮ್ಮ ಶುದ್ಧವಾದ ರಕ್ತ ಹರಿಯುವ ರಕ್ತನಾಳಗಳು ಚಿಕ್ಕದಾಗುವುದು ವಿಕಾಸಕೊಳ್ಳದೆ ಗಡುಸಾಗುವುದು ರಕ್ತನಾಳಗಳ ಗೋಡೆಗಳಲ್ಲಿ ಕೊಬ್ಬು ಶೇಖರಣೆಯಾಗುವುದು ಸಾಮಾನ್ಯ ವಾಗಿ ವಯಸ್ಕರಲ್ಲಿ ಹೆಚ್ಚು. ಏಕೆಂದರೆ ಅವರ ವಯಸ್ಸಿನ ಆಧಾರವಾಗಿ ಅವರ ರಕ್ತನಾಳಗಳ ಧಮನಿಗಳು ವಿಕಾಸಗೊಳ್ಳುತ್ತದೆ ಗಡಸಾಗುತ್ತದೆ. ಇದರಿಂದ ರಕ್ತನಾಳಗಳಲ್ಲಿ ರಕ್ತ ಸುಲಭವಾಗಿ ಹರಿದು ಹೋಗದೆ ಹೃದಯವು ಬಹಳ ಪ್ರಯಾಸ ಪಟ್ಟು ಅಧಿಕ ಒತ್ತಡ ಹಾಕಬೇಕಾಗುತ್ತದೆ.
ರಕ್ತದ ನಾಳಗಳು ಗಡಸಾಗಲು ಕಾರಣ :
ಅನುವಂಶಿಯತೆಯಿಂದ ಮಾನಸಿಕ ಒತ್ತಡ, ಉಪ್ಪು ಹೆಚ್ಚು ಸೇವನೆ, ಸ್ಥೂಲಕಾಯವಾಗುವುದು, ಹೆಚ್ಚು ಕುಳಿತು ಉದ್ಯೋಗ ಮಾಡುವುದು, ಧೂಮಪಾನ, ಕೊಬ್ಬು ಹೆಚ್ಚಿಸುವ ಆಹಾರ ಸೇವನೆ ಸಕ್ಕರೆ ಹೆಚ್ಚು ಸೇವೆನೆಯಿಂದಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಮುಖಾಂತರವೂ ಇದನ್ನು ಗಮನಿಸಬಹುದು. ಯಾವಾಗ ಬರುತ್ತದೆ, ಹೇಗೆ ಬರುತ್ತದೆಂದು ಅವರವರ ಜನ್ಮ ಜಾತಕಗಳಿಂದ ಪರಿಶೀಲಿಸಬಹುದು ಮತ್ತು ಅದಕ್ಕೆ ತಕ್ಕ ಪರಿಹಾರಗಳನ್ನೂ ಮಾಡಿಕೊಳ್ಳಬಹುದು. ಆದರೇ ಯಾವ ಗ್ರಹಕ್ಕೆ ಯಾವ ರೀತಿಯ ಪರಿಹಾರ ಮಾಡಿಕೊಳ್ಳಲೇ ಬೇಕೆಂದು ಹೇಳುವುದು ಜ್ಯೋತಿಷ್ಯರ ಬುದ್ಧಿಶಕ್ತಿಯ ಮೇಲೆ ಅವಲಂಭಿತವಾಗಿದೆ.
ಅಧಿಕ ರಕ್ತ ಒತ್ತಡದಿಂದ ಪಾಯಗಳು :
1. ಹೃದಯದಲ್ಲಿ ತೀವ್ರವಾದ ನೋವು: ಬಂದಾಗ ರಕ್ತವನ್ನು ಹೃದಯಕ್ಕೆ ತಲುಪಿಸುವ ರಕ್ತನಾಳಗಳು ಸಣ್ಣದಾಗುತ್ತದೆ. ಅಲ್ಲದೆ ಅದು ಗಡುಸಾಗಿ ವಿಕಾಸ ಹೊಂದುವುದಿಲ್ಲ.ಅದೇ ವೇಳೆ ಹೃದಯಕ್ಕೆ ರಕ್ತವು ಹೆಚ್ಚು ಬೇಕಾಗುತ್ತದೆ. ಈ ಸಮಯದಲ್ಲಿ ರಕ್ತನಾಳಗಳು ಗಡುಸಾಗಿ ಚಿಕ್ಕದಾಗಿ ಕೆಲವು ಸಲ ಮುಚ್ಚಿಹೋಗುತ್ತದೆ.ಇದರಿಂದ ಹೃದಯಘಾತವಾಗುತ್ತದೆ.
2. *ಮಿದುಳಿನಲ್ಲಿ ರಕ್ತಸ್ರಾವ :ಈ ರೀತಿಯ ರಕ್ತನಾಗಳು ಗಡುಸಾಗುವುದರಿಂದ ರಕ್ತನಾಳಗಳು ಬಿರುಕು ಬಿಟ್ಟು ರಕ್ತನಾಳಗಳು ಒಡೆದು ರಕ್ತಸ್ರಾವವು ಮಿದುಳಿನಲ್ಲಿ ಸಂಭವಿಸುತ್ತದೆ. ಅಧಿಕ ರಕ್ತ ಸ್ರಾವದಿಂದ ಮರಣ ಅಥವಾ ಕೆಲವು ಅಂಗಗಳಿಗೆ ಪಾರ್ಶ್ವ ವಾಯು ಸಂಭವಿಸುವುದು.
3. ಹೃದಯಘಾತ ಅಧಿಕ: ರಕ್ತ ಒತ್ತಡದಿಂದ ಹೃದಯ ಗೋಡೆಗಳು ಗಡುಸಾಗುತ್ತದೆ. ಹೃದಯದ ಮಾಂಸ ಖಂಡಗಳು ದಪ್ಪವಾಗಿ ಅದರ ಗಾತ್ರ ಹೆಚ್ಚಾಗುತ್ತದೆ ಆಗ ಹೃದಯ ಒತ್ತಡದಿಂದ ಕೆಲಸ ಮಾಡಿದರೂ ಸಹ ರಕ್ತವು ರಕ್ತನಾಳಗಳಿಗೆ ಸರಿಯಾಗಿ ಹೋಗದೆ ನಿಧಾನ ಗತಿಯಲ್ಲಿ ಸಾಗುತ್ತದೆ.ಇದರಿಂದ ರಕ್ತದಲ್ಲಿರುವ ಪೌಷ್ಟಿಕ ಆಹಾರ ಮತ್ತು ಆಮ್ಲಜನಕವು ದೇಹದ ಇತರ ಅಂಗಾಂಗಗಳ ಜೀವಕೋಶಗಳಿಗೆ ದೊರೆಯದೆ ಅವು ಪೀಡಿತವಾಗುತ್ತವೆ. ಮುಂದೆ ಹೃದಯವು ಆಘಾತವಾಗುತ್ತದೆ.
4. ಕಿಡ್ನಿ ವಿಫಲ: ಅಧಿಕ ರಕ್ತದ ಒತ್ತಡದಿಂದ ಮೂತ್ರಕೋಶವು ಸಹ ಸರಿಯಾಗಿ ಕೆಲಸ ಮಾಡುವುದಿಲ್ಲ ಇದರಿಂದ ದೇಹದಲ್ಲಿ ರಕ್ತವು ಶುದ್ದೀಕರಿಸುವ ಈ ಅಂಗವು ಲವಣ ಮತ್ತು ಅನೇಕ ವಿಷಯುಕ್ತವಾದ ಔಷಧ ವಸ್ತುಗಳು ದೇಹದಲ್ಲಿಯೇ ಶೇಖರವಾಗುವಂತೆ ಮಾಡುತ್ತದೆ..ಈ ದೇಹದಲ್ಲಿ ಒಂದು ಗ್ರಾಂ ಲವಣ ಶೇಖರವಾದರೆ ಅದು 70 ಗ್ರಾಂನಷ್ಟುನೀರನ್ನು ತಡೆಹಿಡಿಯುತ್ತದೆ. ಇದರಿಂದ ದೇಹದಲ್ಲಿ ಮೂತ್ರರೂಪವಾಗಿ ನೀರು ಹೊರಹೋಗದೆ ದೇಹಕ್ಕೆ ಬಾದೆಯಾಗುತ್ತದೆ. ಹೃದಯವು ಒಂದು ತೆಳುವಾದ ನೀರಿನ ಪೊರೆಯಿಂದ ಕ್ಷೇಮವಾಗಿದೆ.ಆದರೆ ದೇಹದ ನೀರು ಹೆಚ್ಚಾದರೆ ಈ ತೆಳು ಪೊರೆಯಲ್ಲೂ ನೀರು ಹೆಚ್ಚು ಶೇಖರವಾಗಿ ಅದು ಹೃದಯ ಬಡಿತಕ್ಕೆ ತಡೆ ಮಾಡಿ ಹೃದಯಘಾತ ಸಂಭವವಿದೆ.
ನಾವು ಹೃದಯದ ಕಾರ್ಯ ವೈಖರಿ, ಮಧುಮೇಹ, ಮೂತ್ರಕೋಶ ಕಾರ್ಯ, ರಕ್ತದ ಒತ್ತಡ ಆಗಾಗ ಪರೀಕ್ಷಿಸಿಕೊಳ್ಳಬೇಕು.