ಮನೆ ರಾಜಕೀಯ ರಾಜ್ಯಕ್ಕೆ ಜಿಎಸ್‍ಟಿ ಪಾಲು ಕಡಿಮೆಯೇಕೆ.?:  ನಿರ್ಮಲ ಸೀತಾರಾಮನ್ ಗೆ ವಿದ್ಯಾರ್ಥಿ ಪ್ರಶ್ನೆ

ರಾಜ್ಯಕ್ಕೆ ಜಿಎಸ್‍ಟಿ ಪಾಲು ಕಡಿಮೆಯೇಕೆ.?:  ನಿರ್ಮಲ ಸೀತಾರಾಮನ್ ಗೆ ವಿದ್ಯಾರ್ಥಿ ಪ್ರಶ್ನೆ

0

ಮೈಸೂರು: ‘ರಾಜ್ಯಕ್ಕೆ ನೀಡುತ್ತಿರುವ ಜಿಎಸ್‌ಟಿ ಪಾಲನ್ನು ಕಡಿಮೆ ಮಾಡಿರುವುದೇಕೆ’ ಎಂದು ವಿದ್ಯಾರ್ಥಿಯೊಬ್ಬರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಿದರು.

ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ‘ಒಂದು ಸಣ್ಣ ರಾಜ್ಯದಿಂದ ಕಡಿಮೆ ಜಿಎಸ್‌ಟಿ ಸಂಗ್ರಹವಾಗುತ್ತಿದೆ ಎಂದು ಅದನ್ನು ನಿರ್ಲಕ್ಷಿಸಲಾಗದು. ಒಕ್ಕೂಟ ವ್ಯವಸ್ಥೆಯಲ್ಲಿ ಅಭಿವೃದ್ಧಿ ವಿಚಾರದ‌ಲ್ಲಿ ಎಲ್ಲ ರಾಜ್ಯಗಳನ್ನೂ ಸಮಾನವಾಗಿ ಕೇಂದ್ರ ಕಾಣಬೇಕಿದೆ. ಈ ನಿಟ್ಟಿನಲ್ಲಿ ನೀನು ಇನ್ನಷ್ಟು ಅಭ್ಯಸಿಸಬೇಕಿದೆ. ನಂತರ, ಇದು ಅರ್ಥವಾಗಲಿದೆ’ ಎಂದರು.

ಸಚಿವೆ ನಿರ್ಗಮಿಸುವ ವೇಳೆ ವಿದ್ಯಾರ್ಥಿಗಳು ಮುಗಿಬಿದ್ದು ಸೆಲ್ಫಿ ತೆಗೆದುಕೊಂಡರು.

ಹಿಂದಿನ ಲೇಖನಇಂದಿನ ನಿಮ್ಮ ರಾಶಿ ಭವಿಷ್ಯ
ಮುಂದಿನ ಲೇಖನಕಾಸ್ಮೋಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ