ಹುಬ್ಬಳ್ಳಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಬಗ್ಗೆ ಬಿಜೆಪಿಗರು ಸಿಎಂ-ಡಿಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಲೋಕಸಭೆಯಲ್ಲಿ ಗ್ಯಾಸ್ ಸಿಡಿಸಿದ ಪ್ರಕರಣದಲ್ಲಿ ಪಾಸ್ ಕೊಡಿಸಿದ ಸಂಸದ ಪ್ರತಾಪ ಸಿಂಹ ಯಾಕೆ ರಾಜೀನಾಮೆ ನೀಡಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇರಿದ ಜನರಲ್ಲಿ ಯಾರೋ ಕೂಗಿದರೆ ನಾವು ಕೂಗಿದಂತೆ ಆಗುತ್ತ ಎಂದರು. ಮಂಡ್ಯದಲ್ಲಿ ತನ್ನ ಪಕ್ಷದ ಕಾರ್ಯಕರ್ತ ಪಾಕ್ ಪರ ಕೂಗಿದಾಗ ಬಿಜೆಪಿ ಖಂಡಿಸಲಿಲ್ಲ, ಆತನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ನಾವು ವಿಧಾನಸೌಧ ಘಟನೆ ಖಂಡಿಸಿದ್ದೇವೆ, ಮೂವರನ್ನು ಬಂಧಿಸಲಾಗಿದೆ ಎಂದರು.
ಲೋಕಸಭಾ ಚುನಾವಣೆಗೆ ಮಾ.9-10 , ರಂದು ಪಕ್ಷದ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ . ಅಭ್ಯರ್ಥಿಗಳ ಆಯ್ಕೆಯಲ್ಲಿಯಾವ ಗೊಂದಲ ಇಲ್ಲ.ನಮ್ಮ ಪಕ್ಷದಲ್ಲಿ ವಿಧಾನಸಭೆ, ಲೋಕಸಭೆ ಗೆ ಹಣ ಪಡೆದು ಟಿಕೆಟ್ ನೀಡುವ ಪದ್ಧತಿ ಇಲ್ಲ. ಈ ಬಗ್ಗೆ ಕೆಲವರ ವೈಯಕ್ತಿಕ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ ಎಂದರು.
ಬಿಜೆಪಿ ನಾಲ್ಕು ಸಾವಿರ ಕೋಟಿ ರೂ.ಗಳನ್ನು ಹೊಂದಿದ ಕುಬೇರರ ಪಕ್ಷ ಅವರೇನು ಮಾಡಿಕೊಂಡಿದ್ದಾರೋ ನಮಗೆ ಗೊತ್ತಿಲ್ಲ ಎಂದರು.